ಸರಗೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ

 

ಸರಗೂರು: 10 ಆಗಸ್ಟ್  2022

ನಂದಿನಿ ಮೈಸೂರು

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ಶ್ರೀನಾಥ್, ತಹಶೀಲ್ದಾರ್ ಚಲುವರಾಜು, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ಟಿ. ರವಿಕುಮಾರ್, ರವರ ಅಧ್ಯಕ್ಷತೆಯಲ್ಲಿ ,ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ,ಈ ದಿನ ಸರಗೂರು ತಾಲ್ಲೂಕಿನಲ್ಲಿ 1ರಿಂದ 19 ವರ್ಷದ ಶಾಲೆ ಮತ್ತು , ಅಂಗನವಾಡಿಯ ಒಟ್ಟು 19220 ಮಕ್ಕಳಿಗೂ ಅಲ್ಬೆಂಡಜೋಲ್ 400mg ಮಾತ್ರೆಯನ್ನು ನೀಡುತ್ತಿದ್ದೇವೆ. ಈ ಮಾತ್ರೆಯನ್ನು ಮಕ್ಕಳು ಚೆನ್ನಾಗಿ ಅಗಿದು ಜಿಗಿದು ನುಂಗಬೇಕು , ಮಾತ್ರೆ ನುಂಗುವುದರಿಂದ ಜಂತುಗಳನ್ನು ನಿವಾರಣೆ ಮಾಡಬಹುದು , ಜಂತುಹುಳು ವಿನಲ್ಲಿ ರೌಂಡ್ ವರ್ಮ್,ಟೈಪ್ ವರ್ಮ್, ಉಕ್ಕು ವರ್ಮ, ಈ ರೀತಿ ಜಂತು ಹುಳುಗಳು ಇವೆ.ಇವು ಮಣಿನಲ್ಲಿ ಇರುತ್ತವೆ,ಯಾರು ಬಯಲು ಮಲವಿಸರ್ಜನೆ ಮಾಡಬಾರದು, ಹಾಗೂ ಬರಿಗಾಲಿನಲ್ಲಿ ನಡೆಯಬಾರದು , ಹೊರಗಡೆಯಿಂದ ಬಂದ ನಂತರ ಚೆನ್ನಾಗಿ ಸೋಪಿನಿಂದ ಕೈ ಕಾಲುಗಳ ನ್ನೂ ತೊಳೆಯಬೇಕು ಎಂದು ತಿಳಿಸಿದರು, ತಹಶೀಲ್ದಾರ್ ಚಲುವರಾಜು ಮಾತನಾಡಿ ಸರಗೂರು ತಾಲೂಕಿನಲ್ಲಿ ವರ್ಷಕ್ಕೆ 2 ಬಾರಿ ಒಂದರಿಂದ 19 ವರ್ಷದ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಯನ್ನು ನೀಡುತ್ತಿದ್ದೇವೆ ಆದುದರಿಂದ ಎಲ್ಲ ಮಕ್ಕಳು ತಪ್ಪದೇ ತೆಗೆದುಕೊಳ್ಳಬೇಕು ಎಂದು ತಿಳಿಸಿದರು ‌.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ವಿನಯಪ್ರಸಾದ್, C.O ಸತೀಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ” ಪಾರ್ಥಸಾರಥಿ, ಪಟ್ಟಣ ಪಂಚಾಯತಿ ಸದಸ್ಯರಾದ ವೀರೇಶ್, ದಿವ್ಯ ನವೀನ್ ,ಮುಖ್ಯೋಪಾಧ್ಯಾಯರಾದ ಮಾದೇವ ಪ್ರಸಾದ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್ , ಸರಳ ಜಗದೀಶ, ಶಾಂತಿ ,ಪುಷ್ಪ, ಪ್ರತಾಪ್ ,ಶಾಲೆಯಸಹ ಶಿಕ್ಷಕರು ,ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *