ಈಗಿನ ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿಯೇ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ ಓದಲು ಸಮಯವಾದರೂ ಎಲ್ಲಿರುತ್ತದೆ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಅನೇಕ ಖ್ಯಾತ ಲೇಖಕರ ಪುಸ್ತಕಗಳನ್ನು ಮೈಆಡಿಯೋಬಿಟ್ಸ್ ಆಡಿಯೋ ರೂಪದಲ್ಲಿ ತಂದಿದೆ.
ಬೆಳಗಿನ ಗಡಿಬಿಡಿಯಲ್ಲಿಯೇ ಮಕ್ಕಳಿಗೆ ತಿಂಡಿಗಳನ್ನು ಮಾಡುತ್ತ, ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಕಚೇರಿಗೆ ತೆರಳುತ್ತಿರುವ ಸಂದರ್ಭದಲ್ಲಿ, ಟ್ರೆಡ್ ಮಿಲ್ ಮೇಲೆ ಬ್ರಿಸ್ಕ್ ವಾಕಿಂಗ್ ಮಾಡುತ್ತ, ಜಿಮ್ ನಲ್ಲೂ, ಕಂಪನಿಯಲ್ಲಿ ಕಚೇರಿಯ ಕೆಲಸವನ್ನು ಮಾಡುತ್ತ ಕನ್ನಡ ಸಾಹಿತಿಗಳು ಬರೆದಿರುವ ಪುಸ್ತಕಗಳಲ್ಲಿನ ಅಕ್ಷರಗಳನ್ನು ಕಿವಿಗೆ ತುಂಬಿಕೊಳ್ಳುವಂತಿದ್ದರೆ ಹೇಗೆ.
ಮೈಆಡಿಯೋಬಿಟ್ಸ್ ನ ಸಂಸ್ಥಾಪಕರಾದ ಶ್ರೀಯುತ ಸೋಮಶೇಖರ್ ಮುನಿಯಪ್ಪ ರವರು ಮೂಲತಃ ಭಾರತದ ವರಾಗಿದ್ದು 10 ವರ್ಷಗಳ ಕಾಲ ಅಮೇರಿಕಾದ ಪ್ರತಿಷ್ಠಿತ ಕಂಪನಿಗಳಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯಾಕಾಂಕ್ಷಿಗಾಳಾಗಿದ್ದ ಇವರು ಕನ್ನಡ ಪುಸ್ತಕಕ್ಕಾಗಿ ಅಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ ಹಾಗಾಗಿ ಈ ಸಮಸ್ಯೆ ನಿವಾರಿಸಲು ಭಾರತಕ್ಕೆ ವಾಪಸಾಗಿ ಕನ್ನಡ ಸಾಹಿತ್ಯ ಡಿಜಿಟಲಿ ಕರಣಕ್ಕಾಗಿ ಈ ಆಡಿಯೋ ಬುಕ್ ಸಂಬಂದಿತ್ತ ಮೈಆಡಿಯೋಬಿಟ್ಸ್ ಎಂಬ ಮೊಬೈಲ್ ಆಪ್ ಒಂದನ್ನು ಸೃಷ್ಟಿಸಿ ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಯೋಜನಯ ಹಿಂದಿನ ಮುಖ್ಯ ಉದ್ದೇಶ.
ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು ಆಡಿಯೋ ಪುಸ್ತಕಗಳು ಸಾಕಷ್ಟು ಕೇಂದ್ರ ಸಾಹಿತ್ಯ ಅಕಾಡೆಮಿ ವಿಜೇತ ಕೃತಿಗಳು ಇಲ್ಲಿ ಲಭ್ಯವಿದೆ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತಿದ್ದು . ಸದ್ಯಕ್ಕೆ ಕನ್ನಡ, ಮಲಯಾಳಂ , ಹಿಂದಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ಪುಸ್ತಕಗಳ ಆಡಿಯೋ ಲಭ್ಯವಿವೆ. ಹಾಗೂ ಮುಂದಿನ ದಿನಗಳಲ್ಲಿ ಭಾರತದ ಎಲ್ಲಾ ಭಾಷಾ ಪುಸ್ತಕಗಳು ಲಭ್ಯವಾಗಲಿದೆ.
ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳಿ ಆನಂದಿಸಿ.📖🎧
ಹಾಗೂ “ಮೊದಲ ರೇಜಿಸ್ಟರ್ಡ್ ಗ್ರಾಹಕರಿಗೆ 7 ದಿನಗಳ ಕಾಲ ಎಲ್ಲ ಆಡಿಯೋ ಪುಸ್ತಕಗಳು ಪೂರ್ತಿ ಉಚಿತವಾಗಿ ದೊರೆಯುತ್ತದೆ”
ಮೈ ಆಡಿಯೋ ಬಿಟ್ಸ್ ನಲ್ಲಿ ಚಂದಾದಾರರಾಗಲು ಮತ್ತು ಸಂಸ್ಥೆ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು web.myaudiobits.com ವೆಬ್ಸೈಟ್ ನ್ನು ಬಳಸಿಕೊಳ್ಳಬಹುದು.
ಮೈಆಡಿಯೋಬಿಟ್ಸ್ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಅಪ್ಪಲ್ ಅಪ್ ಸ್ಟೋರ್ ನಿಂದ ನೇರವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.
ಇದು ಮೈಆಡಿಯೋಬಿಟ್ಸ್
ಜಾಗತಿಕ ಧ್ವನಿ ಪುಸ್ತಕಗಳ ಗ್ರಂಥಾಲಯ