ದಕ್ಷಿಣ ಕನ್ನಡ:25 ಜನವರಿ 2022
ನಂದಿನಿ ಮೈಸೂರು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾವೂರು ಬೆಳ್ತಂಗಡಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನಾವೂರು ಇವರಿಗೆ ಮುತ್ತೂಟ್ ಫೈನಾನ್ಸ್ ನ ಸಾಮಾಜಿಕ ಜವಾಬ್ದಾರಿ ವಿಭಾಗದ ವತಿಯಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆಯನ್ನು ನೀಡಲಾಯಿತು .
ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭವನ್ನು ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಾವೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಗಣೇಶ್ ಗೌಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುನಂದಾ ಮುತ್ತುಟ್ ಫೈನಾನ್ಸ್ ಇದರ ಪುತ್ತೂರು ವಿಭಾಗದ ಸಿಬಿಎಂ ಸಿಬಿಎಂ ಆದ ಸಂದೇಶ Shenoy ,ಬೆಳ್ತಂಗಡಿ ಬ್ರಾಂಚ್ ಮ್ಯಾನೇಜರ್ ಶ್ರೀ ಸತ್ಯನಾರಾಯಣ ಸಿಎಸ್ಆರ್ ರೀಜಿನಲ್ ಮ್ಯಾನೇಜರ್ ಶ್ರೀ ಪ್ರಸಾದ್ ಕುಮಾರ್, ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಶ್ರೀ ನೋವೆಲ್ ಕುಮಾರ್, ಎಸ್ ಡಿ ಎಂಸಿ ಅಧ್ಯಕ್ಷರಾದ ಶ್ರೀ ಸುರೇಶ್ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ರಮೇಶ್, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳ್ತಂಗಡಿ ಶ್ರೀ ಕಿಶೋರ್ ಕುಮಾರ್, ಸಹಕಾರ್ಯದರ್ಶಿ ಪ್ರಾಥಮಿಕ ಶಾಲಾ ಜಿಲ್ಲಾ ಸಂಘ ಮಂಗಳೂರು ಅಮಿತಾನಂದ ಹೆಗಡೆ, ಸಮೂಹ ಸಂಪನ್ಮೂಲ ವ್ಯಕ್ತಿ ಬಂಗಾಡಿ ಶ್ರೀ ರಮೇಶ, ಗ್ರಾಮ ಪಂಚಾಯಿತಿ ಸದಸ್ಯರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸದಸ್ಯರು ಶಾಲಾ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.