ಸಿದ್ದರಾಮಯ್ಯ ಅವರು 2017 ರಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕೋಳಿ ನಾಟಿ ಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದಾರೆ: ಸಂಸದ ಪ್ರತಾಪ್ ಸಿಂಹ

ನಂದಿನಿ ಮೈಸೂರು

ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 2017 ರಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕೋಳಿ ನಾಟಿ ಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾಟಿ ಕೋಳಿ ತಿಂದು ಪುಷ್ಪಾರ್ಚನೆ ಮಾಡಿರುವುದಕ್ಕೆ ನಾನೆ ಸಾಕ್ಷಿ. ಈ ಕಾರಣದಿಂದ ಅವರಿಗೆ ಮುಂದಿನ ದಸರಾದಲ್ಲಿ ಪುಪ್ಷಾರ್ಚನೆ ಮಾಡಲು ಚಾಮುಂಡೇಶ್ವರಿ ಕರುಣಿಸಲಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.

ಸಿದ್ದರಾಮಯ್ಯನವರ ಶ್ರೀಮತಿ ಅವರು ಇದೇ ಚಾಮುಂಡೇಶ್ವರಿ ದೇಗುಲಕ್ಕೆ ಮಡಿಯಾಗಿ ಹೋಗುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರ ಈ ವರ್ತನೆಗೆ ಅವರ ಶ್ರೀಮತಿ ಅವರಿಂದ ಸಹಮತ ಇದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಲಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.ಆಗಸ್ಟ್ 26 ರಂದು ಕಾಂಗ್ರೆಸ್ ಪಕ್ಷದ ಮಡಿಕೇರಿ ಚಲೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ ಸಿದ್ದು ಸುಲ್ತಾನ್ ಬಂದರೇ ಹೆದರುತ್ತೀವಾ ? ಎಂದು ಗುಡುಗಿದರು.ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲದೆ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳಾದ ಎಸ್ ಡಿಪಿಐ ಅವರನ್ನು ಕರೆದುಕೊಂಡು ಬನ್ನಿ ಎಂದು ಮರು ಸವಾಲು ಹಾಕಿದರು.

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ? ಅಂತಾರೆ. ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿಲಿ ಎಂದು ಪ್ರತಾಪ್ ಸಿಂಹ ತಿರುಗೇಟು ಕೊಟ್ಟರು.ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್ ಪೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗಲ್ಲ. ಆತ ನನ್ನ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾನೆ ಎಂದು ಸ್ಪಷ್ಟಪಡಿಸಿದರು.

ಹಂದಿ ಸಹಾ ಆಹಾರ ಪದ್ದತಿಅದನ್ನು ತಿನ್ನಬೇಡಿ ಅಂತಾ ಯಾವ ದೇವರು ಹೇಳಿಲ್ಲ.ಜಮೀರ್ ಅಹಮದ್ ಹಾಗೂ ಆತನ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಿ‌‌ ನೀವು ಅದನ್ನು ಹೇಳುವುದಿಲ್ಲ ನಿಮಗೆ ಆ ರೀತಿ ಹೇಳಲು ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು

Leave a Reply

Your email address will not be published. Required fields are marked *