ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ, ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ

*ಮೋದಿಯವರು 2024ರಲ್ಲಿ ಭಾರಿ ಬಹುಮತದೊಂದಿಗೆ, ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ: ಅಮಿತ್ ಶಾ*

ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಮೋದಿಯವರು ಮೂರನೇ ಅವಧಿಗೆ ಖಂಡಿತ ಪ್ರಧಾನಿಯಾಗುತ್ತಾರೆ: ಶಾ ದಾರ್ಶನಿಕರು ವರ್ತಮಾನವನ್ನು ಭವಿಷ್ಯದ ತಯಾರಿಯಲ್ಲಿ ಕಳೆಯುತ್ತಾರೆ. ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರಕ ಅಮಿತ್ ಶಾ ಅವರು ನಿಜ ದಾರ್ಶನಿಕರಂತೆ, ಸಾರ್ವತ್ರಿಕ ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಇರುವಾಗಲೇ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಯನ್ನು ಖಚಿತಪಡಿಸಲು ಶಾ ಈಗಾಗಲೇ ದೇಶಾದ್ಯಂತ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಸುಡುವ ಬಿಸಿಲನ್ನು ಲೆಕ್ಕಿಸದೇ, ಅಮಿತ್ ಶಾ ದೇಶಾದ್ಯಂತ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಸ್ಪಷ್ಟವಾದ, ಸಂಪೂರ್ಣ ಜನಾದೇಶವನ್ನು ಹೊಂದುವ ಪ್ರಬಲ ಸರ್ಕಾರ ನಿರ್ಮಾಣಕ್ಕಾಗಿ ಹಲವಾರು ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ಸಂಘಟನೆಯನ್ನು ಬಲಪಡಿಸಲು ಮತ್ತು ಗೆಲುವಿನ ತಂತ್ರವನ್ನು ಹೆಣೆಯಲು ಸ್ಥಳೀಯ ಮುಖಂಡರೊಂದಿಗಿನ ಸಭೆಗಳನ್ನು ಮಾಡಿದರೆ, ಸಾರ್ವಜನಿಕ ರ್ಯಾಲಿಗಳ ಮೂಲಕ, ಒಂಬತ್ತು ವರ್ಷಗಳ ಮೋದಿಯವರ ಆಡಳಿತದ ಅಡಿಯಲ್ಲಿ ದೇಶದಲ್ಲಿ ಸಂಭವಿಸಿದ ದೊಡ್ಡ ದೊಡ್ಡ ಬದಲಾವಣೆಗಳನ್ನು ಮತ್ತು ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೇಗೆ ಹೆಚ್ಚು ಒಳಿತನ್ನು ಮಾಡಿದೆ ಎಂಬುದನ್ನು ಜನಸಮೂಹದ ಮುಂದೆ ತೆರೆದಿಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈಗ ಪ್ರಗತಿಯ ಕಡೆಗಿನ ರಾಷ್ಟ್ರದ ನಡಿಗೆ ಎಲ್ಲರನ್ನೂ ಒಳಗೊಳ್ಳಲಿದೆ.

ನಿರೀಕ್ಷೆಯಂತೆ, ಕಾಂಗ್ರೆಸ್ ಮತ್ತು ಅದರ ಮಾಜಿ ಸಂಸದ ರಾಹುಲ್ ಗಾಂಧಿ ಕಠಿಣ ವಾಗ್ದಾಳಿ ಮಾಡುವ ಶಾ ಒಬ್ಬ ದಕ್ಷ ಮತ್ತು ಅನುಭವಿ ಪ್ರಚಾರಕ. ನಾಲ್ಕು ತಲೆಮಾರಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಬಡತನವನ್ನು ಹೇಗೆ ಶಾಶ್ವತಗೊಳಿಸಲಾಯಿತು ಎಂಬುದನ್ನು ಶಾ ಎತ್ತಿ ತೋರಿಸಿದ್ದಾರೆ.

ಗುಜರಾತ್‌ನ ಪಟಾನ್‌ನಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ರಾಹುಲ್ ಬಾಬಾ ಬೇಸಿಗೆಯ ಬಿಸಿಲಿನಿಂದ ಪಾರಾಗಲು ರಜೆಯ ಮೇಲೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ದೇಶವನ್ನು ಟೀಕಿಸುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ ಅವರು ತಮ್ಮ ಪೂರ್ವಜರಿಂದ ಕಲಿಯುವಂತೆ ನಾನು ಸಲಹೆ ನೀಡಲು ಇಷ್ಟಪಡುತ್ತೇನೆ” ಎಂದರು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಜನಸಂಪರ್ಕ ಕಾರ್ಯಕ್ರಮದ ಅಂಗವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ, ಗಾಂಧಿ ಕುಟುಂಬದ ಆಳ್ವಿಕೆಯಲ್ಲಿ ಬಡವರಿಗೆ ವಸತಿ ಘಟಕಗಳು, ಶೌಚಾಲಯಗಳು, ಅಡುಗೆ ಅನಿಲದಂತಹ ಮೂಲಭೂತ ಅವಶ್ಯಕತೆಗಳು ಎಂದಿಗೂ ಸಿಗಲೇ ಇಲ್ಲ ಎಂದರು.

ಭಾನುವಾರ, ತಮಿಳುನಾಡಿನಲ್ಲಿ, ಸ್ಟಾಲಿನ್ ಸರ್ಕಾರದ ವಿರುದ್ಧ ಹರಿಹಾಯ್ದ ಶಾ, ರಾಜ್ಯಕ್ಕೆ ಮೋದಿ ಸರ್ಕಾರದ ಕೊಡುಗೆಯನ್ನು ಎತ್ತಿ ತೋರಿಸಿದರು. ರಾಜ್ಯದಲ್ಲಿನ ಡಿಎಂಕೆ-ಕಾಂಗ್ರೆಸ್ ಸರ್ಕಾರದ ಹೀನಾಯ ವೈಫಲ್ಯ, ಬಿಜೆಪಿಯ ಚಾಣಕ್ಯ ನಾಯಕನಿಂದ ತೀವ್ರ ಟೀಕೆಗೆ ಗುರಿಯಾಯಿತು.

ಡಿಎಂಕೆ ಯುಪಿಎ ಸರ್ಕಾರದ ಭಾಗವಾಗಿತ್ತು, ಆದಾಗ್ಯೂ, ವಿವಿಧ ಪರೀಕ್ಷೆಗಳಲ್ಲಿ, ತಮಿಳುನಾಡಿನ ಯುವಕರು ತಮಿಳಿನಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರಲಿಲ್ಲ. ಆದರೆ ಈಗ ಅಖಿಲ ಭಾರತ ಸೇವೆಗಳು, ಸಿಎಪಿಎಫ್ ಮತ್ತು ನೀಟ್ ಪರೀಕ್ಷೆಗಳನ್ನು ತಮಿಳು ಭಾಷೆಯಲ್ಲಿ ತೆಗೆದುಕೊಳ್ಳಬಹುದು, ”ಎಂದು ವೆಲ್ಲೂರಿನಲ್ಲಿ ಹೇಳಿದರು.

ವೈಜಾಗ್‌ನಲ್ಲಿಯೂ, ಶಾ ಕಾಂಗ್ರೆಸ್ ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುತ್ತಾ ಮೋದಿ ಸರ್ಕಾರವು ಸಮಾಜದ ಒಳಿತಿಗಾಗಿ ಮೂಲಭೂತ ಬದಲಾವಣೆಗಳನ್ನು ಹೇಗೆ ತಂದಿದೆ ಎಂಬುದನ್ನು ವಿವರಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ 2019 ರಲ್ಲಿ 542 ಲೋಕಸಭಾ ಸ್ಥಾನಗಳಲ್ಲಿ 303 ಸ್ಥಾನಗಳನ್ನು ಗಳಿಸಿತ್ತು. 2024 ರ ಸಾರ್ವತ್ರಿಕ ಚುನಾವಣೆಯಲ್ಲೂ ಎನ್‌ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ ಶಾ ಇದು ಕೇಂದ್ರದಲ್ಲಿ ಮೂರನೇ ಅವಧಿಯ ಮೋದಿ ಸರ್ಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದರು.

ಅಮಿತ್ ಶಾರ ಮಂತ್ರಮುಗ್ಧ ಮಾತುಗಳಿಗೆ ತಲೆದೂಗಿದ ಜನಸ್ತೋಮ, ಶಾ “ನಿಮಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕಾ ಅಥವಾ ರಾಹುಲ್ ಗಾಂಧಿ ಪ್ರಧಾನಿಯಾಗಬೇಕಾ?” ಎಂದು ಕೇಳಿದಾಗ, ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬೆಂಬಲಿಗರು ಮೋದಿ, ಮೋದಿ ಎಂದು ಘೋಷಣೆ ಕೂಗಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *