ವೃದ್ಧಾಪ್ಯವೇತನ,ವಿಧಾವವೇತನ,ವಿಶೇಷಚೇತನರ ವೇತನದ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿ ಶಾಸಕರಾದ ಕೆ.ಹರೀಶ್ ಗೌಡ, ಪತ್ನಿ ಗೌರಿ ವಿವಾಹ ವಾರ್ಷಿಕೋತ್ಸವ ಆಚರಣೆ

ನಂದಿನಿ ಮೈಸೂರು

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಹಾಗೂ ಅವರ ಪತ್ನಿ ಗೌರಿ ಅವರ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವೃದ್ಧಾಪ್ಯವೇತನ,ವಿಧಾವವೇತನ,ವಿಶೇಷಚೇತನರ ವೇತನದ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿ ಸಿಹಿ ಹಂಚುವ ಮೂಲಕ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ರವರ ಪತ್ನಿ ಗೌರಿ ಮಾತನಾಡಿ ಈ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿದ್ದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕಾರ್ಯಕ್ರಮ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಂತರ ರಮೇಶ್ ರವರು ಮಾತನಾಡಿ ಶಾಸಕರಾದ ಕೆ.ಹರೀಶ್ ಗೌಡರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸ್ನೇಹತರ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ.ಕೆ.ಹರೀಶ್ ಗೌಡ ರವರ ಪುತ್ರ ಕಿಶನ್ ಗೌಡ, ಸೌಭಾಗ್ಯ ಗಿರೀಶ್,ಪಡುವಾರಹಳ್ಳಿ ಪಾಪಣ್ಣ,ರಮೇಶ್,ಕೃಷ್ಣ,ಪುರುಷೋತ್ತಮ್,ದೇವೇಗೌಡ,ಮಾದೇಶ್,ವೆಂಕಟೇಶ್, ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *