ಪರಿಸರ ದಿನಾಚರಣೆ ಅಂಗವಾಗಿ 1000 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದ ರೋಟರಿ ಕ್ಲಬ್ ಸಂಸ್ಥೆಗಳ ವಲಯ – 8 ಮತ್ತು ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್

ನಂದಿನಿ ಮೈಸೂರು

ಮೈಸೂರಿನ ರೋಟರಿ ಕ್ಲಬ್ ಸಂಸ್ಥೆಗಳ ವಲಯ – 8 ಮತ್ತು ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ 1000 ಸಸಿಗಳನ್ನೂ ನೆಡುವ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಚಾಲನೆ ನೀಡಲಾಯೀತು.

ರೋಟರಿ ಇಂಟರ್ ನ್ಯಾಷನಲ್ 3181 ರ ಜಿಲ್ಲೆಯ ಜಿಲ್ಲಾ ಗವರ್ನರ್ ರೋಟರಿಯನ್ ವಿಕ್ರಮದತ್ತಾ ಮಾತನಾಡಿ
ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನೂ ಕೊಡಲೂ ಮೈಸೂರಿನಲ್ಲಿ ಪ್ರಾರಂಭವಾಗಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ರೋಟರಿ ಸಂಸ್ಥೆಗಳು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ 1000 ಸಸಿಗಳನ್ನೂ ನೆಡುವ ಈ ವಿನೂತನ ಕಾರ್ಯಕ್ರಮ ಮಾಡುತ್ತೀರುವುದು ಶಿಕ್ಷಣದ ಜೊತೆಗೆ, ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವೂ ಮೂಡಿಸುತ್ತೀರುವುದು ಉತ್ತಮ ಕೆಲಸವಾಗಿದೆ..
ರೋಟರಿಯ ಏಳೂ ಪ್ರಮುಖ ಗುರಿಗಳಲ್ಲಿ ಪರಿಸರ ಮತ್ತು ವಿದ್ಯೆಯ ಬಗ್ಗೆ ಮಹತ್ವ ನೀಡಲಾಗಿದೆ.. ರೋಟರಿ ಸಂಸ್ಥೆಯೂ ಪರಿಸರದ ಬಗ್ಗೆ ಸದಾ ಕಾಳಜಿಯನ್ನೂ ಹೊಂದಿ ಉತ್ತಮ ಸೇವೆಯನ್ನೂ ಮಾಡುತ್ತೀದೆ. ಎಲ್ಲರನ್ನೂ ಮತ್ತು ಸಂಘ ಸಂಸ್ಥೆಗಳನ್ನೂ ಒಗ್ಗೂಡಿಸಿಕೊಂಡು ಈ ಸೇವಾ ಕಾರ್ಯವನ್ನೂ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ಐ.ಎಫ್. ಎಸ್. ಅಧಿಕಾರಿ ಮೈಸೂರು ವಿಭಾಗದ ಡಿಸಿಎಫ್ ಡಾ. ಕೆ.ಎನ್. ಬಸವರಾಜರವರು ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿರುವ ಚಾಮುಂಡಿಬೆಟ್ಟದ ಸುಂದರ ವಾತಾವರಣದ ಈ ಶಾಲೆಯಲ್ಲಿ ಉತ್ತಮವಾಗಿ ಇರುವ ಕಟ್ಟಡದ ಜೊತೆಗೆ ಸಸಿಗಳನ್ನೂ ನೆಡುವುದರ ಮೂಲಕ ಅವೂಗಳನ್ನೂ ಬೆಳೆಸುತ್ತೀರುವುದು ಶ್ಲಾಘನೀಯವಿಚಾರವಾಗಿದೆ.. ನಮ್ಮ ಅರಣ್ಯ ಇಲಾಖೆವತಿಯಿಂದ ಈ ವರ್ಷ 3ಲಕ್ಷದ 30ಸಾವಿರ ಸಸಿಗಳನ್ನೂ ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಒಂದು ಸಸಿಗೆ ರೂ.3 ರೂಪಾಯಿಯಿಂದ 6 ರೂಪಾಯಿವರೆಗೆ ಕೊಡಲಾಗುತ್ತೀದೆ.. ಈ ವರ್ಷ ಅರಣ್ಯ ಇಲಾಖೆವತಿಯಿಂದಲೂ ಒಂದು ಲಕ್ಷ ಸಸಿಗಳನ್ನೂ ನೆಡಲಾಗುತ್ತೀದೆ.. ಇಂದು ಜಾಗತೀಕರಣ ತಾಪಮಾನ ವ್ಯತ್ಯಾಸವಾಗುತ್ತೀದೆ ಹಾಗೂ ತಾಪಮಾನ ಏರುತ್ತೀದೆ. ಪ್ರಕೃತಿ ಮಾಡುವುದನ್ನೂ ಮನುಷ್ಯ ಯಾವಗಲೂ ಮಾಡಲಾರ.. 3 ವಾರದ ಹಿಂದೆ ಇದ್ದ ಚಾಮುಂಡಿ ಬೆಟ್ಟದ ವಾತಾವರಣ ಇಂದು ಮಳೆಯಿಂದಾಗಿ ಸಂಪೂರ್ಣ ಬದಲಾಗಿದೆ. ಕೇವಲ ಅರಣ್ಯ ಇಲಾಖೆವತಿಯಿಂದ ಸಸಿಗಳನ್ನೂ ನೆಟ್ಟರೆ ಪರಿಸರದ ಸಂರಕ್ಷಣೆ ಸಾಧ್ಯವಿಲ್ಲಾ.. ಇದಕ್ಕೆ ರೋಟರಿಯಂತಹ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು, ಎಲ್ಲರ ಸಹಭಾಗಿತ್ವ ತುಂಬಾ ಅಗತ್ಯವಾಗಿದೆ.. ಇಂದು ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ಸಿಲಿಕಾನ್ ಸಿಟಿ ಇಂಟರ್ ನಾಷ್ಯನಲ್ ಸ್ಕೂಲ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಅಭಿನಂದನೆಗಳನ್ನೂ ಸಲ್ಲಿಸಿದರು.

ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿಯವರಾದ ಎಲ್.ರವಿರವರು ಮಾತನಾಡಿ ರೋಟರಿ ಸಂಸ್ಥೆಗಳವತಿಯಿಂದ ನಮ್ಮ ಶಾಲೆಯ ಆವರಣದಿಂದ ಸಸಿಗಳನ್ನೂ ನೆಡುವುದರ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿರುವುದು ಅಭಿನಂದನಾರ್ಹವಾಗಿದೆ. ಇದರಿಂದಾಗಿ ಬೆಳೆಯುವ ಮಕ್ಕಳಿಗೆ ಓದಿನ ಜೊತೆಗೆ ಪರಿಸರದ ಕುರಿತು, ಪರಿಸರದ ಸಂರಕ್ಷಣೆಯ ಬಗ್ಗೆ ಅರಿವೂ ಮೂಡುತ್ತದೆ.. ವಿದ್ಯಾರ್ಥಿಗಳಿಗೆ ಗಿಡ-ಮರಗಳ ಪರಿಚಯ ಚಿಕ್ಕ ವಯಸ್ಸಿನಿಂದ ಆಗುವುದು ಸಮಾಜಕ್ಕೂ ಒಳ್ಳೇಯದು.. ನಮ್ಮ ಶಾಲೆಯು ಮೊದಲಿನಿಂದಲೂ ಹಸಿರು ಪರಿಸರ, ವಾತಾವರಣದ ಕ್ಯಾಂಪಸ್ ನ್ನೂ ಹೊಂದಿದ್ದು ಹಾಗೂ ಕ್ರೀಡಾ ಚಟುವಚಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ ಪರಿಸರದ ಬಗ್ಗೆ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಇಂದಿನ ತುರ್ತು ಅಗತ್ಯವಾಗಿದೆ.. ಶುಧ್ದವಾದ ಗಾಳಿ, ಜಾಗತಿಕ ಹವಾಮಾನ, ತಾಪಮಾನವನ್ನೂ ಸುಸ್ಥಿತಿಯಲ್ಲಿ ಇಡಲೂ ಸಸಿಗಳನ್ನೂ ನೆಡುವುದರ ಜೊತೆಗೆ ಅವೂಗಳನ್ನೂ ಏಳೆಂಟು ವರ್ಷಗಳ ಕಾಲ ಬೆಳೆಸುವುದರ ಕಡೆಗೆ ಎಲ್ಲರೂ ಗಮನಹರಿಸಬೇಕು… ನಾವೂ ಕೂಡ ಕೆ.ಬಿ.ಎಲ್. ಸಿದ್ದಿ ವಿನಾಯಕ ಟ್ರಸ್ಟ್ ಮತ್ತು ರೋಟರಿ ಮೈಸೂರು ಸೌತ್ ಈಸ್ಟ್ ವತಿಯಿಂದ ಹೆಬ್ಬಳದ INFOSYS ಹತ್ತೀರ ನಾಲ್ಕು ಎಕರೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕರವರನ್ನೂ ಕರೆಯಿಸಿ, ಅವರಿಂದಲೇ ನೆಡಿಸಿದ ಸಸಿಗಳೂ, ಇಂದು ಗಿಡಗಳಾಗಿ ಬೆಳೆದು ನಿಂತಿವೆ.. ನಾವೂ ಮಾಡುವ ಈ ಸ್ಕತಾರ್ಯದಿಂದಾಗಿ ಮನುಷ್ಯರ ಜೊತೆ ಪ್ರಾಣಿ-ಪಕ್ಷಿಗಳಿಗೂ ಹಣ್ಣು ಸಿಗುತ್ತೀವೆ.. ಪರಿಸರಕ್ಕೆ ಪೂರಕವಾದ ಸಸಿಗಳನ್ನೂ ನೆಟ್ಟು ಬೆಳೆಸಬೇಕು.. ನಮ್ಮ ಮನೆಗಳಲ್ಲಿ ನಡೆಯುವ ಶುಭಕಾರ್ಯ, ಹುಟ್ಟುಹಬ್ಬ, ಮದುವೆ, ಗಣ್ಯರ ಬೇಟಿ ಇಂತಹ ಸಂದರ್ಭಗಳಲ್ಲಿ ಕನಿಷ್ಠ ಎರಡೂ ಸಸಿಗಳನ್ನೂ ನೆಟ್ಟು ಬೆಳೆಸಬೇಕು.. ಆಗ ಅವುಗಳಿಗೆ ಒಂದು ಅರ್ಥ ಬರುತ್ತದೆ.. ನಮ್ಮ ಮನೆಗಳಲ್ಲಿ, ಹೊಲ ಗದ್ದೆಗಳಲ್ಲಿ, ಎಲ್ಲಾ ಕಡೆ ಮಳೆ ಕೊಯ್ಲು ಮಾಡಬೇಕು, ಮಳೆ ಕೊಯ್ಲು ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಉಂಟಾಗ ಬೇಕೆಂದರು. ಹಸಿರು ಪರಿಸರದ ಜವಬ್ದಾರಿ ಎಲ್ಲರದೂ ಆಗಿದೆ. ನಮ್ಮ ಈ ರೀತಿಯ ಸೇವಾ ಚಟುವಟಿಕೆಗಳು ಮತ್ತಷ್ಟು ಆಗಬೇಕು, ಸಿಲಿಕಾನ್ ಸಿಟಿ ಶಾಲೆ ಆವರಣದಲ್ಲಿ ಆಗುತ್ತೀರುವುದು ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲೂ ಜಾಗೃತಿ ಉಂಟಾಗಲೂ ಸಹಕಾರಿಯಾಗಿದೆ ಎಂದು ತಿಳಿಸಿದರು… ರೋಟರಿ ಸಂಸ್ಥೆಯ ಸೇವಾ ಕಾರ್ಯ ಚಟುವಟಿಕೆಗಳಲ್ಲೂ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿದರು…

ಸಹಾಯಕ ಗರ್ವನರ್ ರೋಟರಿಯನ್ ಎಂ. ರಾಜೀವ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ವಂದಿಸಿದರು..
ಈ ಕಾರ್ಯಕ್ರಮದಲ್ಲಿ ರೋಟರಿಯನ್ ಕೇಶವಪ್ರಕಾಶ್, ವಲಯ ಸೇನಾನಿ ರೋಟರಿಯನ್ ಎಂ.ಮೋಹನ್, ರೋಟರಿಯನ್ ಕೆ.ಎನ್. ಸಂತೋಷ್, ಎನ್.ಕಿರಣ್, ಎಂ. ಎಸ್. ಉಮಶಂಕರ್ ಆರಾಧ್ಯ, ರೋಟರಿಯನ್ ಮುರಳೀಧರ್, ರೋಟರಿಯನ್ ಗೋವರ್ಧನ್ ಯಾದವ್, ರೋಟರಿಯನ್ ಪ್ರಭಾಕರ್, ವೈಲ್ಡ್ ಲೈಫ್ ಪೊಟೊಗ್ರಾಫರ್ ರೋಟರಿಯನ್ ದಿನೇಶ್ ಬಸವಪಟ್ಟಣ, ದಿಲೀಪ್ ಆರಾಧ್ಯ ಮತ್ತೀತರರು ಇದ್ದರು..

Leave a Reply

Your email address will not be published. Required fields are marked *