ಮಾರ್ಡನ್ ರೈತ ಶಶಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್..ಶಶಿ ಹುಟ್ಟುಹಬ್ಬಕ್ಕೆ ‘ಮೆಹಬೂಬ’ ಪೋಸ್ಟರ್ ಉಡುಗೊರೆ.

ನಂದಿನಿ ಮೈಸೂರು

*ಮಾರ್ಡನ್ ರೈತ ಶಶಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್..ಶಶಿ ಹುಟ್ಟುಹಬ್ಬಕ್ಕೆ ‘ಮೆಹಬೂಬ’ ಪೋಸ್ಟರ್ ಉಡುಗೊರೆ..*

ಬಿಗ್ ಬಾಸ್ ಖ್ಯಾತಿಯ ಶಶಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ‘ಮೆಹಬೂಬ’. ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿಂದು ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಬಳಿಕ ಸಚಿವ ಚಲುವನಾರಾಯಣಸ್ವಾಮಿ ಮಾತನಾಡಿ, ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್ – ಹೀರೋ ಅವರೇ..ಲಾಭ-ನಷ್ಟ ಹಾಗೂ ಹೆಸರು ಅವ್ರದ್ದೇ. ರಾಜ್ಯದ ಜನ ಆಶೀರ್ವಾದ ಮಾಡಬೇಕಾಗುತ್ತದೆ. ನಾಯಕಿ ನನ್ನ ಗೆಳೆಯನ ಮಗಳು. ಹೀಗಾಗಿ ಇಬ್ಬರಿಗೆ ಸಿನಿಮಾ ಸಕ್ಸಸ್ ತರಲಿ. ಇತ್ತೀಚೆಗೆ ಅನೇಕ ಚಿತ್ರಗಳು ಸಕ್ಸಸ್ ಆಗುತ್ತಿವೆ. ಜನರಿಗೆ ಯಾವ ರೀತಿ ಚಿತ್ರಗಳು ಇಷ್ಟಪಡುತ್ತಾರೆ. ಇಷ್ಟಪಡಲ್ಲ ಅನ್ನುವುದು ಊಹೆ ಮಾಡಲು ಆಗುವುದಿಲ್ಲ. ನಿಮ್ಮೆಲ್ಲ ಸಹಕಾರ ಇಡೀ ತಂಡ ಮೇಲೆ ಇರಲಿ ಎಂದರು.

ನಾಯಕ ಶಶಿ ಮಾತನಾಡಿ, ಮೆಹಬೂಬ ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡವಾಗಿರುತ್ತದೆ. 200 ಸಿನಿಮಾಗಳು ಬಂದರು. ಹೆಸರುಮಾಡೋದು 10 ರಿಮದ 15 ಸಿನಿಮಾಗಳು. ಆ 10-15 ಸಿನಿಮಾಗಳಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸು. ಖುಷಿ ತಂದುಕೊಟ್ಟ ಸಿನಿಮಾ ಮೆಹಬೂಬಾ. ಶೂಟಿಂಗ್ ಕಂಪ್ಲೀಟ್ ಆಗಿದೆ. ಆ ಖುಷಿ ವಿಚಾರವನ್ನು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇವೆ. ಫೆಬ್ರವರಿಯಲ್ಲಿ ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಿರ್ದೇಶಕ ಅನೂಪ್ ಆಂಟೊನಿ ಮಾತನಾಡಿ, ಮೆಹಬೂಬ ನನ್ನ ಎರಡನೇ ಸಿನಿಮಾ. ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನಗ ಹಂತದಲ್ಲಿದೆ. ಫೆಬ್ರವರಿಗೆ ರಿಲಿಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ. ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪವನ್ ಮೇಡಂ ಅದ್ಭುತ ನಟನೆ ಚಿತ್ರದಲ್ಲಿದೆ. ಒಟ್ಟು ಚಿತ್ರದಲ್ಲಿ 5 ಹಾಡುಗಳಿವೆ ಎಂದರು.

 

ಮಾರ್ಡನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ ಮೆಹಬೂಬ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಾಯಕನನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ಮಾಪಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *