ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಬೆಂಬಲ.

ನಂದಿನಿ ಮೈಸೂರು

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಬೆಂಬಲ.

ಕಳೆದ ನಲವತೈದು ದಿನಗಳಿಂದ ಕರ್ನಾಟಕ ರಾಜ್ಯ ದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರು ಹಾಗೂ 2024 ಜೂನ್ ನಲ್ಲಿ ಬರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಅಕಾಂಕ್ಷಿತ ಅಭ್ಯರ್ಥಿ ಡಾ.ಈ. ಸಿ. ನಿಂಗರಾ ಜ್ ಗೌಡರವರು ಬೆಂಬಲ ಸೂಚಿಸಿದ್ದಾರೆ.
ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರ ಹೋರಾಟದ ಫಲವಾಗಿ ಕಳೆದ ಬಿ ಜೆ ಪಿ ಸರ್ಕಾರ ವಾಸ್ತವಿಕ ಸಮಸ್ಯೆಯನ್ನು ಅರಿತು ಅವರ ಪ್ರಮುಖ ಬೇಡಿಕೆಯಾದ ಮಾಸಿಕ ವೇತನವನ್ನು ಮೂರು ಪಟ್ಟು ಹೆಚ್ಚಿಸಿ, ಮೂವತ್ತೆರಡು ಸಾವಿರಕ್ಕೆ ಹೆಚ್ಚಳ ಮಾಡಿ ಸಮಾಜದಲ್ಲಿ ಗೌರವ ದಿಂದ ಬದುಕಲು ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಿ ನುಡಿದಂತೆ ನಡೆದಿತ್ತು. ಆದರೆ ಈ ಕಾಂಗ್ರೇಸ್ ಸರ್ಕಾರ ಕೇವಲ ಐದು ಸಾವಿರ ವೇತನವನ್ನು ಹೆಚ್ಚಿಸಿ ಪ್ರಸ್ತುತ ಬೇಡಿಕೆಯಾದ ಸೇವವಿಲೀನಾತಿಗೆ ನೆರವಾಗಿಲ್ಲ.
ಆದರೆ ಈ ಸರ್ಕಾರ ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ಗೌರವ ನೀಡಿ ಅತಿ ಪ್ರಮುಖವಾದ ಸೇವಾ ಖಾಯಮಾತಿ ಮಾಡಿ ಅವರನ್ನ ಗೌರವಿಸಬೇಕು ಎಂದು ಈ ಮೂಲಕ ಸರ್ಕಾರವನ್ನು ಒತ್ತಾಯಸುತ್ತಿದ್ದೇನೆ.

ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆ. ಆದ್ದರಿಂದ ಪ್ರಜ್ಞಾವಂತ ಮತ್ತು ಮೌಲ್ಯಧಾರಿತ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.. ನಮ್ಮ ರಾಜ್ಯದಲ್ಲಿ ಕಳೆದ ಅನೇಕ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತೀರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನೂ ಈಡೇರಿಸುವಂತೆ ರಾಜ್ಯ ಸರ್ಕಾರವನ್ನೂ ಆಗ್ರಹಿಸಿ ಪ್ರತಿಭಟನೆ, ಪಾದಯಾತ್ರೆ, ಧರಣಿ ನಡೆಸುತ್ತೀದ್ದಾರೆ. ಆದರೆ ರಾಜ್ಯ ಸರ್ಕಾರವೂ ಅತಿಥಿ ಉಪನ್ಯಾಸಕರನ್ನೂ ಗೌರವಯುತವಾಗಿ ನಡೆಸಿಕೊಳ್ಳದೇ ಇರುವುದನ್ನೂ ನಾನೂ ಖಂಡಿಸುತ್ತೇನೆ.

ಯುಜಿಸಿಯ 537ನೇ ಸಭೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತೀರುವ ಅತಿಥಿ ಉಪನ್ಯಾಸಕರಿಗೆ 7ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಪ್ರತಿ ಅವಧಿಗೆ 1500 ಅಥವಾ ತಿಂಗಳಿಗೆ ಕನಿಷ್ಠ 50000 ರೂಪಾಯಿ ಗೌರವಧನವನ್ನೂ ನಿಗದಿಪಡಿಸುವಂತೆ ಆದೇಶಿಸಿದೆ. ಸರ್ಕಾರವು ಯುಜಿಸಿಯ ಸುತ್ತೋಲೆಯನ್ನು ಪಾಲನೆ ಮಾಡುವುದರ ಮೂಲಕ ಎಲ್ಲಾ ಅತಿಥಿ ಉಪನ್ಯಾಸಕರನ್ನೂ ಖಾಯಂಗೊಳಿಸಬೇಕು ಮತ್ತು ಈ ಕೂಡಲೇ ಸೇವಾ ಭದ್ರತೆಯನ್ನು ಒದಗಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕು ಹಾಗೂ ಅತಿಥಿ ಉಪನ್ಯಾಸಕರ ಎಲ್ಲಾ ಬೇಡಿಕೆಗಳನ್ನೂ ಕೂಡಲೇ ಈಡೇರಿಸಬೇಕೇಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಸರ್ಕಾರವನ್ನೂ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *