ಸ್ಯಾಮ್‌ಸಂಗ್‌ನ ಸಾಲ್ವ್ ಫಾರ್ ಟುಮಾರೋಗೆ ಅದ್ಭುತ ಪ್ರತಿಕ್ರಿಯೆ

ನಂದಿನಿ ಮೈಸೂರು

ಬೆಂಗಳೂರು:

*ಸ್ಯಾಮ್‌ಸಂಗ್‌ನ ಸಾಲ್ವ್ ಫಾರ್ ಟುಮಾರೋಗೆ ಅದ್ಭುತ ಪ್ರತಿಕ್ರಿಯೆ; 50,000 ಕ್ಕೂ ಹೆಚ್ಚು ನೋಂದಣಿಗಳು, 2023 ಮೇ 31 ಕ್ಕೆ ಅರ್ಜಿ ಸಲ್ಲಿಕೆ ಮುಕ್ತಾಯ; ಬಹುಮಾನದ ಮೊತ್ತದಲ್ಲಿ 1.5 ಕೋಟಿ ರೂ. ಗೆಲ್ಲಲು ಅಗ್ರ 3 ತಂಡಗಳು*

• ಬೇಗುಸರಾಯ್‌, ಚಿತ್ರದುರ್ಗ, ಧಾರವಾಡ, ಗುಲ್ಬರ್ಗಾ, ಜಲ್‌ಪಾಯ್ಗುರಿ, ಖುರ್ದಾ, ನಾರ್ತ್‌ 24 ಪರಗಣ ಮತ್ತು ಮಧುಬನಿ ಇತ್ಯಾದಿ ಸಣ್ಣ ನಗರಗಳಿಂದಲೂ ಯುವಕರಿಂದ ಪರಿಕಲ್ಪನೆಗಳ ಸಲ್ಲಿಕೆ
• ಅಗ್ರ 30 ತಂಡಗಳಿಗೆ ಐಐಟಿ ದೆಹಲಿಯಿಂದ ತರಬೇತಿ ಮತ್ತು ಮಾರ್ಗದರ್ಶನ ಮತ್ತು ಎಂಇಐಟಿವೈ ಸ್ಟಾರ್ಟಪ್‌ ಹಬ್‌ನಲ್ಲಿ ಬೂಟ್‌ಕ್ಯಾಂಪ್‌

Bangalore – ಮೇ 25, 2023 – ಸ್ಯಾಮ್‌ಸಂಗ್‌ ಇಂಡಿಯಾದ ರಾಷ್ಟ್ರೀಯ ಶಿಕ್ಷಣ ಮತ್ತು ಅನ್ವೇಷಣೆ ಸ್ಫರ್ಧೆ ಸಾಲ್ವ್‌ ಫಾರ್ ಟುಮಾರೋಗೆ ಭಾರತದಾದ್ಯಂತ ಯುವಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 50,000 ಕ್ಕೂ ಹೆಚ್ಚು ನೋಂದಣಿಗಳು ಬಂದಿವೆ. ವಿಶೇಷ ಭಾರತದ ಸಣ್ಣ ನಗರಗಳಾದ ಬೇಗುಸರಾಯ್‌, ಚಿತ್ರದುರ್ಗ, ಧಾರವಾಡ, ಗುಲ್ಬರ್ಗಾ, ಜಲ್ಪಾಯ್ಗುರಿ, ನಾರ್ತ್‌ 24 ಪರಗಣ, ಮಧುಬನಿ ಮತ್ತು ಪಟ್ಟಣಮ್‌ತಿಟ್ಟದಲ್ಲಿನ ಯುವಕರು ತಮ್ಮ ಪರಿಕಲ್ಪನೆಗಳನ್ನು ಕಳುಹಿಸಿದ್ದಾರೆ. ತಮ್ಮ ಸುತ್ತಲಿನ ಜನರ ಜೀವನದ ಮೇಲೆ ಧನಾತ್ಮಕ ಸಾಮಾಜಿಕ ಪರಿಣಾಮವನ್ನು ಉಂಟು ಮಾಡಲು ನೈಜ ಜಗತ್ತಿನ ಸಮಸ್ಯೆಗಳಿಗೆ ನವೀನ ತಂತ್ರಜ್ಞಾನದ ಪರಿಹಾರಗಳನ್ನು ಹುಡುಕುವ ಆಸಕ್ತಿಯನ್ನು ಇವರು ವ್ಯಕ್ತಪಡಿಸಿದ್ದಾರೆ.

ಸ್ಫರ್ಧೆಯಲ್ಲಿನ ಅಗ್ರ 3 ತಂಡಗಳು ತಮ್ಮ ಐಡಿಯಾಗಳನ್ನು ಕ್ರಿಯೆಯನ್ನಾಗಿ ಪರಿವರ್ತಿಸಲು 1.5 ಕೋಟಿ ರೂ. ಗಳಿಸುವ ಅವಕಾಶವನ್ನು ಪಡೆಯಲಿದೆ. ಯುವಕರು ಸಾಲ್ವ್‌ ಫಾರ್ ಟುಮಾರೋಗೆ ಮೇ 31, 2023 ಸಂಜೆ 5 ಗಂಟೆಯವರೆಗೆ www.samsung.com/in/solvefortomorrow ನಲ್ಲಿ ಅರ್ಜಿ ಸಲ್ಲಿಸಬಹುದು.

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ನ ಫ್ಲಾಗ್‌ಶಿಪ್‌ ಸಿಎಸ್‌ಆರ್‌ ಕಾರ್ಯಕ್ರಮವು ನವೀನ ಪರಿಹಾರಗಳು ಮತ್ತು ಜೀವಗಳನ್ನು ಪರಿವರ್ತಿಸುವ ಅದರ ಸಾಮರ್ಥ್ಯವನ್ನು ಗುರುತಿಸುತ್ತದೆ ಮತ್ತು 4 ಪ್ರಮುಖ ಥೀಮ್‌ಗಳಾದ ಶಿಕ್ಷಣ ಮತ್ತು ಕಲಿಕೆ, ಪರಿಸರ ಮತ್ತು ಸುಸ್ಥಿರತೆ, ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ವೈವಿಧ್ಯತೆ ಮತ್ತು ಸಮಗ್ರತೆ ಅಡಿಯಲ್ಲಿ 16-22 ವರ್ಷಗಳ ವಯಸ್ಸಿನ ಯುವಕರಿಂದ ಐಡಿಯಾಗಳನ್ನು ಆಹ್ವಾನಿಸುತ್ತಿದೆ.

ಈವರೆಗೆ, ಸುಮಾರು 49% ರಷ್ಟು ಐಡಿಯಾಗಳು ಶಿಕ್ಷಣ ಮತ್ತು ಕಲಿಕೆ, 28% ರಷ್ಟು ಯುಕವರು ಪರಿಸರ ಮತ್ತು ಸುಸ್ಥಿರತೆ ಅಡಿಯಲ್ಲಿ ತಮ್ಮ ಐಡಿಯಾಗಳನ್ನು ಸಲ್ಲಿಸಿದ್ದಾರೆ. 18% ಅರ್ಜಿಗಳು ಆರೋಗ್ಯ ಮತ್ತು ಯೋಗಕ್ಷೇಮ ವಲಯದಲ್ಲಿ ಮತ್ತು 5% ಅರ್ಜಿಗಳನ್ನು ವೈವಿಧ್ಯತೆ ಮತ್ತು ಸಮಗ್ರತೆ ಅಡಿಯಲ್ಲಿನ ಐಡಿಯಾಗಳನ್ನು ಹೊಂದಿವೆ. ಅರ್ಜಿ ಸಲ್ಲಿಸಿದ 73% ರಷ್ಟು ಜನರು 18-22 ವರ್ಷ ವಯಸ್ಸಿನವರಾಗಿದ್ದಾರೆ.

ಭಾರತದ ವಿವಿಧೆಡೆಯ ಯುವಕರು ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಐಡಿಯಾಗಳನ್ನು ಕಳುಹಿಸಿದ್ದಾರೆ. ಇದರಲ್ಲಿ ಇ-ತ್ಯಾಜ್ಯ ನಿರ್ವಹಣೆ, ಮರೈನ್ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ, ಆರ್ಥಿಕ ಪರಿಚಲನೆ, ಹವಾಮಾನ ಬದಲಾವಣೆ, ಕೃಷಿ ಫಸಲು, ಸ್ವಚ್ಛ ನೀರು ಒದಗಿಸುವುದು, ಆರೋಗ್ಯ ಸೇವೆ ವೆಚ್ಚಗಳು, ಮಾನಸಿಕ ಆರೋಗ್ಯ, ಅಪಘಾತ ತಡೆ, ಶಾಲೆ ಮತ್ತು ಕಾಲೇಜುಗಳಲ್ಲಿ ಬೋಧನೆ ತಂತ್ರದ ಸುಧಾರಣೆಮ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಒಳಗೊಂಡಿವೆ.

ಮುಂದಿನ ಹಂತದಲ್ಲಿ, ಸ್ವೀಕರಿಸಿದ ಅರ್ಜಿಗಳ ಪೈಕಿ ಅಗ್ರ 30 ತಂಡಗಳನ್ನು (ಗರಿಷ್ಠ 3 ಸದಸ್ಯರ ತಂಡಗಳು) ಸ್ಯಾಮ್‌ಸಂಗ್ ಆಯ್ಕೆ ಮಾಡುತ್ತದೆ. ಈ ಅಗ್ರ 30 ತಂಡಗಳಿಗೆ ಸ್ಯಾಮ್‌ಸಂಗ್ ಮತ್ತು ಅದರ ಪಾಲುದಾರರಾದ ಐಐಟಿ ದೆಹಲಿಯಲ್ಲಿನ ಫೌಂಡೇಶನ್‌ ಫಾರ್ ಇನ್ನೋವೇಶನ್‌ ಆಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್ಐಟಿಟಿ) ನಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಮತ್ತು ಎಂಇಐಟಿವೈ ಸ್ಟಾರ್ಟಪ್ ಹಬ್‌ ನೇತೃತ್ವದಲ್ಲಿ ಐಐಟಿ ದೆಹಲಿಯಲ್ಲಿ ಬೂಟ್‌ಕ್ಯಾಂಪ್‌ ನಡೆಸಲಾಗುತ್ತದೆ. ಇದು ತಮ್ಮ ಐಡಿಯಾಗಳನ್ನು ಸುಧಾರಿಸಲು ಭಾಗವಹಿಸಿದವರಿಗೆ ಸಹಾಯ ಮಾಡಲಿದೆ.

ಆರಂಭಿಕ ಪ್ರೊಟೊಟೈಪ್‌ಗಳನ್ನು ರಚಿಸಲು ತಲಾ ರೂ. 20,000 ಮೊತ್ತವನ್ನು ಅಗ್ರ 30 ತಂಡಗಳು ಸ್ವೀಕರಿಸಲಿವೆ ಮತ್ತು ನಂತರ ಯುವ ಸ್ಯಾಮ್‌ಸಂಗ್‌ ಉದ್ಯೋಗಿಗಳು ಮತ್ತು ಎಫ್‌ಐಟಿಟಿ, ಐಐಟಿ ದೆಹಲಿ ಮತ್ತು ಎಂಇಐಟಿವೈ ಸ್ಟಾರ್ಟಪ್‌ ಹಬ್‌ನಲ್ಲಿನ ಜ್ಯೂರಿಗೆ ತಮ್ಮ ಐಡಿಯಾಗಳನ್ನು ಪಿಚ್ ಮಾಡಲಿದ್ದಾರೆ. ಈ ಜ್ಯೂರಿ ಅಗ್ರ 10 ತಂಡಗಳನ್ನು ಆಯ್ಕೆ ಮಾಡಲಿದ್ದಾರೆ. ಈ ಪ್ರತಿ 10 ತಂಡಗಳಿಗೆ ತಮ್ಮ ಪ್ರೊಟೊಟಪ್‌ಗಳನ್ನು ಜ್ಯೂರಿ ಸದಸ್ಯರು ಮತ್ತು ಮೆಂಟರ್‌ಗಳ ಪ್ರತಿಕ್ರಿಯೆ ಅನುಗುಣವಾಗಿ ಅಭಿವೃದ್ಧಿಪಡಿಸಲು ರೂ. 100,000 ತಲಾ ಸಿಗಲಿದೆ.

ಈ ತಂಡಗಳಿಗೆ ಸ್ಯಾಮ್‌ಸಂಗ್‌ ಇಂಡಿಯಾ ಕಚೇರಿಗಳು, ಅದರ ಆರ್‌&ಡಿ ಸೆಂಟರ್‌ಗಳು, ಡಿಸೈನ್ ಸೆಂಟರ್‌ ಮತ್ತು ಬೆಂಗಳೂರಿನಲ್ಲಿನ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ಗೆ ಭೇಟಿ ನೀಡುವ ಮತ್ತು ಅಲ್ಲಿನ ಯುವ ಸ್ಯಾಮ್‌ಸಂಗ್‌ ಉದ್ಯೋಗಿಗಳು ಮತ್ತು ಸಂಶೋಧಕರ ಜೊತೆಗೆ ಸಂವಾದ ನಡೆಸುವ ಅವಕಾಶವನ್ನೂ ಈ ತಂಡಗಳು ಪಡೆಯುತ್ತವೆ.

ವಾರ್ಷಿಕ ಕಾರ್ಯಕ್ರಮದಲ್ಲಿ ಅಗ್ರ ಮೂರು ರಾಷ್ಟ್ರೀಯ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ ಮತ್ತು ಅವರು 1.5 ಕೋಟಿ ರೂ. ಮತ್ತು ಆಕರ್ಷಕ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ.

2010 ರಲ್ಲಿ ಮೊದಲು ಬಿಡುಗಡೆ ಮಾಡಿರುವ ಸಾಲ್ವ್ ಫಾರ್ ಟುಮಾರೋ ಪ್ರಸ್ತುತ 63 ದೇಶಗಳಲ್ಲಿ ಕಾರ್ಯಾಚರಣೆಯಲ್ಲಿದೆ ಮತ್ತು ವಿಶ್ವಾದ್ಯಂತ 2.3 ಮಿಲಿಯನ್‌ಗೂ ಹೆಚ್ಚು ಯುವಕರು ಇದರಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *