ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗಾ ಜನರಿಗೆ ಮಂಕು ಬೂದಿ ಎರಚುತಿದೆ ..
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ರೀತಿಯ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತೇನೆ ಎಂದು ಜನರಿಗೆ ನಂಬಿಸಿ ಮತವನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಇಲ್ಲಸಲ್ಲದ ಕಾರಣವನ್ನು ಹೇಳುವ ಮುಖಾಂತರ ಜನರಿಗೆ ಮಂಕು ಬೂದಿಯನ್ನು ಎರಚುತಿದೆ. ಚುನಾವಣೆಯ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಪ್ರತಿಯೊಂದು ಮನೆಯ ಗೃಹಿಣಿಗೆ ತಿಂಗಳಿಗೆ 2000 ನೀಡುತ್ತೇನೆ ಎಂದು ಭರವಸೆಯನ್ನು ಮತ್ತು ಗ್ಯಾರಂಟಿಯನ್ನು ಚೆಕ್ ರೀತಿಯ ಕಾರ್ಡ್ ನ ಮುಖಾಂತರ ನೀಡಿದರು ಆದರೆ ಈಗ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಇಡೀ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ ಹಾಗೆ ಎರಡನೆಯ ಗ್ಯಾರಂಟಿ ತಾವು ಕರ್ನಾಟಕದ ಯಾವುದೇ ಮೂಲೆಗೆ ಹೋಗಬೇಕಾದರೂ ಯಾವುದೇ ಕೆಲಸಕ್ಕೆ ಹೋಗಬೇಕಾದರೂ ಉಚಿತ ಬಸ್ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಹೇಳಿ ಈಗ ಅದು ಷರತ್ತಿಗೆ ಒಳಪಡುತ್ತದೆ ನನಗೂ ಫ್ರೀ ನಿಮಗೂ ಫ್ರೀ ಎಲ್ಲರಿಗೂ ಫ್ರೀ ಫ್ರೀ ಅಂತ ಹೇಳಿ ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ, ಹಾಗೆಯೇ 200 ಯೂನಿಟ್ ಉಚಿತ ಕರೆಂಟ್ ಪ್ರತಿ ಮನೆಗೂ ನೀಡುತ್ತೇನೆ ಎಂದು ಮೂರನೇ ಗ್ಯಾರಂಟಿಯನ್ನು ಹೇಳಿ ಈಗ ಅಧಿಕಾರಕ್ಕೆ ಬಂದ ದಿನದಿಂದಲೇ ಉಚಿತ ಎಂದವರು ಇಲ್ಲಿಯವರೆಗೂ ಯಾವುದೇ ರೀತಿಯ ಘೋಷಣೆಯನ್ನು ಮಾಡದೆ ಇರುವುದು ನಾಚಿಗೇಡಿನ ಸಂಗತಿ ನಾಲ್ಕನೆಯ ಗ್ಯಾರಂಟಿ ಆದ ಯುವಕರಿಗೆ ನಿರುದ್ಯೋಗ ಭತ್ಯೆ 3000 ಹಾಗೂ 1500 ಎಲ್ಲಾ ಯುವಕರಿಗೆ ನೀಡುತ್ತೇವೆ ಎಂದು ಹೇಳಿ ಈಗ 2023 – 24 ರಲ್ಲಿ ಪದವಿ ಹಾಗೂ ಡಿಪ್ಲೋಮೋ, ಐಟಿಐ ಮುಗಿಸಿದವರಿಗೆ ಅನ್ವಯ ಆಗುತ್ತದೆ ಹಾಗೂ 18 ತಿಂಗಳು ಮಾತ್ರ ನೀಡುತ್ತೇವೆ ಎಂದು ಹೇಳಿ ಇಡೀ ಯುವಜನತೆಗೆ ಮೋಸ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಹಾಗೆಯೇ ಐದನೇ ಗ್ಯಾರಂಟಿ 10 ಕೆಜಿ ಅಕ್ಕಿಯನ್ನು ನೀಡುತ್ತೇನೆ ಎಂದು ಹೇಳಿ ಇಲ್ಲಿಯವರೆಗೂ ಕೂಡ ಯಾವುದೇ ರೀತಿಯ ಕ್ರಮವಹಿಸದೆ ಇರುವುದು ಕೂಡ ಇಡೀ ರಾಜ್ಯದ ಜನತೆಗೆ ಮಹಾ ಮೋಸವನ್ನು ಮಾಡಿದಂತಾಗುತ್ತಿದೆ ಬಹುಶ 200 ಯೂನಿಟ್ ಕರೆಂಟ್ ನೀಡುತ್ತೇನೆಂದು ಹಾಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡುತ್ತೇನೆಂದು ಇವರು ಹೇಳುವ ಮುಖಾಂತರ ಆ ಎರಡು ಇಲಾಖೆಗಳನ್ನು ಶಾಶ್ವತವಾಗಿ ಸಾಲದ ಹೊರೆಯಲ್ಲಿ ಮುಳುಗಿಸಿ ಮುಚ್ಚುವ ಪ್ರಯತ್ನವಾಗುತ್ತದೆಯೇ ವಿನಹ ಅದರಿಂದ ಯಾವುದೇ ರೀತಿಯ ರಾಜ್ಯದ ಜನರಿಗಾಗಲಿ ಒಳಿತಾಗುವುದಿಲ್ಲ ಹಾಗೂ ರಾಜ್ಯದ ಬೊಕ್ಕಸಕ್ಕೆ ಯಾವುದೇ ರೀತಿಯಾದಂತಹ ಆದಾಯವು ಕ್ರೂಢೀಕರಣವಾಗುವುದಿಲ್ಲ ಮುಂದಿನ ದಿನಮಾನಗಳಲ್ಲಿ ಈ ಗ್ಯಾರಂಟಿಗಳಿಗಾಗಿ ಪ್ರತಿ ಕರ್ನಾಟಕದ ಮತದಾರನ ಮೇಲೆ ಸಾವಿರಾರು ರೂಗಳ ಸಾಲದ ಹೊರೆ ಬೀಳುತ್ತದೆ ವಿನಹ ಬೇರೆ ಯಾವುದೇ ಪ್ರಯೋಜನವಾಗುವುದಿಲ್ಲ ಹಾಗಾಗಿ ಭಾರತೀಯ ಜನತಾ ಪಾರ್ಟಿ ಆಗ್ರಹಪಡಿಸುತ್ತದೆ ತಾವು ಏನು ಪ್ರಣಾಳಿಕೆಯಲ್ಲಿ ಹೇಳಿ ಮತವನ್ನು ಪಡೆದಿದ್ದೀರಿ ರಾಜ್ಯದ ಜನತೆಗೆ ಮೋಸ ಮಾಡದ ಹಾಗೆ ನಡೆದುಕೊಳ್ಳಬೇಕು ಇಲ್ಲದಿದ್ದರೆ ಜನತೆಯ ಪರವಾಗಿ ಬೀದಿಗಿಳಿದು ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ.
ಡಾ.ಕೆ.ವಸಂತ ಕುಮಾರ್
ಜಿಲ್ಲಾ ಸಹ ವಕ್ತಾರರು