ಮಾಸ್ತಿ ಅವರ ಕೃತಿಗಳನ್ನು ಪಠ್ಯ ಪುಸ್ತಕಗಳನ್ನಾಗಿ ಪರಿಚಯಿಸಿ ಅವರಿಗೆ ಗೌರವಿಸುವ ಕೆಲಸ ಆಗಬೇಕು : ಮಡ್ಡಿಕೇರಿ ಗೋಪಾಲ್

ನಂದಿನಿ ಮೈಸೂರು

ಮಾಸ್ತಿ ಅವರ ಕೃತಿಗಳನ್ನು ಪಠ್ಯ ಪುಸ್ತಕಗಳನ್ನಾಗಿ ಪರಿಚಯಿಸಿ ಅವರಿಗೆ ಗೌರವಿಸುವ ಕೆಲಸ ಆಗಬೇಕು : ಮಡ್ಡಿಕೇರಿ ಗೋಪಾಲ್*

 

‘ಮಾಸ್ತಿ ಕನ್ನಡಿಗರಿಗೆ ಸದಾ ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನು ಧೈರ್ಯದಿಂದ ಎದುರಿಸಿದರು. ನುಡಿದಂತೆ ನಡೆದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರೂ ಆದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಬಣ್ಣಿಸಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ರಾಜಾರಾಮ್ ಉದ್ಯಾನವನದಲ್ಲಿ ಬುಧವಾರ
ವಿಶ್ವ ಮಾನವ ಡಾಕ್ಟರ್ ರಾಜಕುಮಾರ್ ಸೇವಾ ಸಮಿತಿ
ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಜನ್ಮ ದಿನಾಚರಣೆಯಲ್ಲಿ ವಿವಿಧ ಜಾತಿಯ ಗಿಡಗಳಿಗೆ ನೆಡುವ ಮೂಲಕ ಅವರು ಮಾತನಾಡಿದರು.

‘ಅನೇಕ ಕಾದಂಬರಿ, ಕಥೆ ಬರೆದು ‌ನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಕವಿ. ಈ ದಿನ ಎಲ್ಲಾ ಸಾಹಿತಿಗಳು, ವಿದ್ಯಾರ್ಥಿಗಳು ಅವರನ್ನು ಸ್ಮರಿಸುವುದು, ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದು ಅತ್ಯವಶ್ಯಕವಾಗಿದೆ’ ಎಂದರು.

‘ಮಾಸ್ತಿಯವರು 123 ಕನ್ನಡ ಕೃತಿಗಳನ್ನು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು ಹಾಗೆ 17ಕ್ಕೂ ಹೆಚ್ಚು ಆಂಗ್ಲ ಗ್ರಂಥಗಳನ್ನು ರಚನೆ ಮಾಡಿದ್ದಾರೆ , ಅವರ ಚಿಕ್ಕವೀರರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ,1929 ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು, ನವೋದಯದ ಆರಂಭದಲ್ಲಿ ಕಥೆಗಳನ್ನೇ ತಮ್ಮ ಸೃಜನಶೀಲತೆಯನ್ನು ಪ್ರಥಮ ಮಾಧ್ಯಮವನ್ನಾಗಿ ಮಾಡಿದವರಲ್ಲಿ ಅಗ್ರಗಣ್ಯರು’ ಎಂದರು.
ಅವರ ಕೃತಿಗಳನ್ನು ಪಠ್ಯ ಪುಸ್ತಕಗಳನ್ನಾಗಿ ಪರಿಚಯಿಸಿ ಅವರಿಗೆ ಗೌರವಿಸುವ ಕೆಲಸ ಆಗಬೇಕು, ಅವರ ಹುಟ್ಟಿದ ದಿನಾಂಕ ಹಾಗೂ ನಿಧನ ದಿನಾಂಕ ಜೂನ್ 6ರಂದು ಇರುವುದರಿಂದ ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಕೊಡುವುದರ ಮೂಲಕ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಗೌರವಿಸಬೇಕೆಂದು ಒತ್ತಾಯಿಸಿದರು, ಮಾಸ್ತಿಯಲ್ಲಿ ಅವರ ಹೆಸರಿನಲ್ಲಿ ಘನ ಸರ್ಕಾರ ಗ್ರಂಥಾಲಯ ಮತ್ತು ವಸತಿ ಶಾಲೆಯನ್ನು ನಡೆಸುತ್ತಿದ್ದು ಅದು ಇನ್ನೂ ಅಭಿವೃದ್ಧಿಶೀಲವಾಗಿ ನಡೆಯಲು ಶ್ರಮವಹಿಸಬೇಕು ಎಂದು ಒತ್ತಾಯಿಸಿದರು

ಕನ್ನಡ ಸಾಹಿತ್ಯ ಪರಿಷತ್ತ ಮಾಜಿ ಅಧ್ಯಕ್ಷರಾದ ಡಾಕ್ಟರ್ ವೈ ಡಿ ರಾಜಣ್ಣ ಮಾತನಾಡಿ, ‘ಮಾಸ್ತಿ ಅವರು ರಾಜ್ಯದ ಆಸ್ತಿಯಾಗಿದ್ದವರು. ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಚಿಕ್ಕ ಕಥೆಗಳನ್ನು ನಾಡಿಗೆ ನೀಡಿದವರು. ಒಳ್ಳೆಯ ಆಡಳಿತಗಾರರಾಗಿ ಸರ್ಕಾರಿ ಸೇವೆ ಸಲ್ಲಿಸಿದವರು. ಕರ್ನಾಟಕ ಹೆಸರು ನಾಮಕರಣಕ್ಕೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಲ್ಲಿ ಆಗ್ರಹಿಸಿದವರಲ್ಲಿ ಪ್ರಮುಖರು’ ಎಂದು ಹೇಳಿದರು.
‘ಮಾಸ್ತಿಯವರ ಕಥೆಗಳಲ್ಲಿ ಜೀವನ ಪ್ರೀತಿ ಮತ್ತು ಕಾರುಣ್ಯದ ಧ್ವನಿ ಕುಡಿಯೊಡೆಯುತ್ತದೆ. ಅವರ ಸಾಹಿತ್ಯವನ್ನು ಪುನರಾವಲೋಕನ ಮಾಡಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಪರಮಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷರಾದ ಡಾಕ್ಟರ್ ಡಾ ಜಿ ವಿ ರವಿಶಂಕರ್, ಚಿನ್ನ ಬೆಳ್ಳಿ ವ್ಯಾಪಾರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್, ಎಸ್ ಎನ್ ರಾಜೇಶ್, ಎಸ್ ಬಿ ವಾಸುದೇವ್ ಮೂರ್ತಿ , ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷ ಸವಿತಾ ಘಾಟ್ಕೆ, ಚಕ್ರಪಾಣಿ , ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾ ಸಮಿತಿಯ ಕಾರ್ಯದರ್ಶಿ ಸುಚಿಂದ್ರ, ವಿಘ್ನೇಶ್ವರ ಭಟ್, ರಾಜಕುಮಾರ್, ಸುರೇಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *