ಮೈಸೂರು:17 ಮೇ 2022
ನಂದಿನಿ ಮೈಸೂರು
30 ವರ್ಷ ಜೆಡಿಎಸ್ ಕಾರ್ಯಕರ್ತರಾಗಿ ದುಡಿದ ಜಯರಾಂ ಕುಮಾರಸ್ವಾಮಿ ಬಳಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೇಳಿದ್ದಾರೆ.ಶಿವನ ಪುಸ್ತಕದ ಮೇಲೆ ಹಣೆ ಹಾಕಿ ನಿಮಗೆ ಟಿಕೇಟ್ ನೀಡುವುದಾಗಿ ಹೇಳಿದ್ರೂ .ಆದರೇ ಟಿಕೇಟ್ ನೀಡಿಲ್ಲ. ರಾಮುಗೆ ಯಾವ ಮಾನದಂಡದಲ್ಲಿ ಟಿಕೆಟ್ ಕೊಟ್ಟಿದ್ದಾರೆ ಅಂತ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಯರಾಂ ಬಳಿ ಹಣ ಇಲ್ಲ ಎಂದು ಟಿಕೆಟ್ ನಿರಾಕರಿಸಿ.ರಾಮುಗೆ ಟಿಕೇಟ್ ನೀಡಿದ್ದಾರೆ.ನಾನು ದುಡ್ಡು ತೆಗೆದು ಕೊಂಡು ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಹಣ ಇರುವವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ.ಆದರೆ ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಾನು ಹೇಳಿದ್ದನ್ನು ಎಚ್.ಡಿ. ಕುಮಾರಸ್ವಾಮಿ ತಿರುಚಿ ಬೇರೆ ರೀತಿ ಹೇಳಿಕೆ ಕೊಟ್ಟಿದ್ದಾರೆ.
ನನಗೆ ಎರಡು ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿ ಫಾರಂ ಕೊಟ್ಟರು. ಆದರೆ, ಎಚ್ ಡಿ ದೇವೇಗೌಡರು, ಕುಮಾರಸ್ವಾಮಿ ಆ ಚುನಾವಣೆಗಳಲ್ಲಿ ನನ್ನ ಪರವಾಗಿ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ. ಟಿಕೆಟ್ ಕೊಟ್ಟು ನನ್ನ ಸೋಲಿಸುವ ಯತ್ನವನೂ ಜೆಡಿಎಸ್ ವರಿಷ್ಠರು ಮಾಡಿದರು. ಆದರೂ ನಾನು ಗೆದ್ದೆ.ಯಾವ ಚುನಾವಣೆಯಲ್ಲಿ ನನಗೆ ಎಚ್ಡಿಕೆ ಎಷ್ಟು ಹಣ ಕೊಟ್ಟಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಲಿ. ನನಗೆ ಮೂರು ವರ್ಷ ವಿಧಾನ ಪರಿಷತ್‌ನ ಉಪಸಭಾಪತಿಯಾಗಿ ಜೆಡಿಎಸ್ ಮಾಡಿದೆ.
ಅಲ್ಲದೆ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾರೆ ಎಂದಿರುವ ಕುಮಾರಸ್ವಾಮಿ ಅವರೇ ನನಗು ದೇವರ ಮೇಲೆ ನಂಬಿಕೆ ಇದೆ’ ನೋಡಿಕೊಳ್ಳಲಿ ಬಿಡಿ. ನನ್ನ ಬದುಕು ತೆರೆದ ಪುಸ್ತಕ. ನನ್ನ ಬಗ್ಗೆ ಅನುಮಾನ ಬರುವ ರೀತಿ ಯಾಕೆ ಮಾತಾಡುತ್ತಿರಿ.ನಾನು ಇದೇ ಪಕ್ಷದಲ್ಲಿ ಈಗಲೂ ಇದ್ದೇನೆ.ಬೇರೆ ಪಕ್ಷಕ್ಕೆ ಹೋಗುವ ಮನಸ್ಸು ಈಗಲೂ ಇಲ್ಲ.ಆದರೆ ಮುಂದಿನ ಚುನಾವಣೆಗೆ ಖಂಡಿತ ಈ ಪಕ್ಷದಿಂದ ಸ್ಪರ್ಥಿಸೋದಿಲ್ಲ ಎಂದರು.