ಆ.25 ರಂದು ಮಣಿಪಾಲ್ ಆಸ್ಪತ್ರೆಯಿಂದ ಬೆನ್ನುನೋವಿನ ಚಿಕಿತ್ಸೆ ಬಗ್ಗೆ ಅರಿವು ಕಾರ್ಯಕ್ರಮ

ನಂದಿನಿ ಮೈಸೂರು

ಕೆಳಭಾಗದ ಬೆನ್ನುನೋವಿಗೆ ಪರಿಣಾಮಕಾರಿ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಮೈಸೂರಿನ ಮಣಿಪಾಲ್ ಆಸ್ಪತ್ರೆ ವತಿಯಿಂದ ಇದೇ ಆಗಸ್ಟ್ 25 ರ ಭಾನುವಾರ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ತಜ್ಞ ವೈದ್ಯರು ಪಾಲ್ಗೊಂಡು ಕೆಳಭಾಗದ ಬೆನ್ನುನೋವಿನ ನಿರ್ವಹಣೆ ಮತ್ತು ಶಸ್ತçಚಿಕಿತ್ಸಾ ಆರೈಕೆಗೆ ಅಗತ್ಯವಾದ ಉಪಯುಕ್ತ ಮಾಹಿತಿ ಒದಗಿಸಲಿದ್ದಾರೆ.
ಕಾರ್ಯಕ್ರಮದ ನೇತೃತ್ವವನ್ನು ನರ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಮಕ್ಸೂದ್ ಅಹಮದ್, ಫಿಸಿಯೋ ಥೆರಪಿ ವಿಭಾಗದ ಅಬ್ದುಲ್ ಫೈಸಲ್ ಭಾಗಿಯಾಗಿ ಕೆಳ ಭಾಗದ ಬೆನ್ನುನೋವಿನ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

ಬೆನ್ನು ನೋವು ತಡೆಗಟ್ಟಲು ಸೂಕ್ತ ಮಾರ್ಗಗಳು

ಬೆನ್ನಿನ ಮೇಲೆ ಹಾನಿಕಾರಕ ಪರಿಣಾಮ ಉಳ್ಳ ಕೆಲವು ಚಲನವಲನಗಳು ಮತ್ತು ಬೆನ್ನಿನ ಅರೋಗ್ಯ ಕಾಪಾಡುವಲ್ಲಿ ಉತ್ತಮ ಭಂಗಿಯ ಪ್ರಾಮುಖ್ಯತೆ ಕುರಿತು ಸಲಹೆ.

ವೈದ್ಯಕೀಯ ನಿರ್ವಹಣೆ

ಬೆನ್ನುನೋವಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ವ್ಯಾಯಾಮ ಮತ್ತು ಔಷಧಿಗಳು

ಶಸ್ತ್ರಚಿಕಿತ್ಸಾಆಯ್ಕೆಗಳು

ಶಸ್ತ್ರಚಿಕಿತ್ಸಾ ಅಗತ್ಯವಿದ್ದಾಗ, ಅದರ ಯಶಸ್ಸು ಮತ್ತು ಸುರಕ್ಷತೆಯನ್ನು ಅರ್ಥಮಾಡಿಕೊಳ್ಳುವುದಾಗಿವೆ.

ಇದಲ್ಲದೆ, ಕಾರ್ಯಕ್ರಮದಲ್ಲಿ ಬೆನ್ನು ನೋವಿಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ರೋಗಿಗಳು ಉಪಸ್ಥಿತರಿದ್ದು ತಮ್ಮ ವೈಯಕ್ತಿಕ ಅನುಭವಗಳನ್ನು ವಿವರಿಸಲಿದ್ದಾರೆ. ಅಲ್ಲದೆ ತಾವು ಪಡೆದ ಚಿಕಿತ್ಸೆ ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದ ವಿವರ

ದಿನಾಂಕ: 25ನೇ ಆಗಸ್ಟ್ 2024 (ಭಾನುವಾರ)

ಸಮಯ: 10:30 AM – 12:30 PM, ನಂತರ ಊಟ

ಸ್ಥಳ: ಮಣಿಪಾಲ್ ಹಾಸ್ಪಿಟಲ್ಸ್ ಒಪಿಡಿ ಬಿ

ಟಾರ್ಗೆಟ್ ಪ್ರೇಕ್ಷಕರು: ಬೆನ್ನುನೋವಿನ ಸಮಸ್ಯೆ ಉಳ್ಳ ವ್ಯಕ್ತಿಗಳು

ಬೆನ್ನುನೋವಿನ ಸಮಸ್ಯೆಯುಳ್ಳ ವ್ಯಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಈ ಸಮಸ್ಯೆ ಬಗ್ಗೆ ಅರಿವು ಮೂಡಿಸಿಕೊಳ್ಳಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

Leave a Reply

Your email address will not be published. Required fields are marked *