ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಲಂಗ್‌ ಲ್ಯಾವೇಜ್‌

ನಂದಿನಿ ಮೈಸೂರು

ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಲಂಗ್‌ ಲ್ಯಾವೇಜ್‌ ನ್ನು ನಡೆಸಲಾಯಿತು

42ವರ್ಷದ ಪುರುಷ ರೋಗಿಯೊಬ್ಬರು ಉಸಿರಾಟದ ತೊಂದರೆಯೊಂದಿಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಪಲ್ ಮೊನೊಲಾಜಿ (ಶ್ವಾಸಕೋಶ ಶಾಸ್ರ್ತ) ವಿಭಾಗಕ್ಕೆ ದಾಖಲಾಗಿದ್ದು.. ಶ್ವಾಸಕೋಶದ ಸಿಟಿ ಸ್ಕ್ಯಾನಿಂಗ್‌ ನಲ್ಲಿ “ಪಲ್ಮನರಿ ಆಲ್ವಿಯೋರ್‌ ಪ್ರೋಟೀನೋಸಿಸ್”‌ ಎಂಬ ಅಪರೂಪದ ಶ್ವಾಸಕೋಶದ ಸ್ಥಿತಿಯನ್ನು ಬಹಿರಂಗಪಡಿಸಿತು, ಇದು ಅವರು ಉಸಿರಾಟದ ಸಮಸ್ಯೆಯನ್ನು ಅನುಭವಿಸಲು ಮುಖ್ಯ ಕಾರಣವಾಗಿತ್ತು ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು.

ವೃತ್ತಿಯಲ್ಲಿ ಎಲೆಕ್ರ್ಟಿಷಿಯನ್‌ ಆಗಿರುವ ರೋಗಿಯು ಕಳೆದ ಕೆಲವು ತಿಂಗಳುಗಳಿಂದ ಉಸಿರಾಟದ ತೊಂದರೆ ಮತ್ತು ಆಯಾಸದಿಂದ ಬಳಲುತ್ತಿದ್ದರು. ಅವರು ಉಸಿರಾಟಕ್ಕೆ ಸಂಬಂಧಿತ ಯಾವುದೇ ಸಮಸ್ಯೆಯ ಹಿನ್ನೆಲೆ ಅಥವಾ ಅಭ್ಯಾಸವನ್ನು ಹೊಂದಿರುವುದಿಲ್ಲ. ಆದಾಗ್ಯೂ, ಕಳೆದ ಎರಡು ತಿಂಗಳುಗಳಲ್ಲಿ ಅವರ ಸ್ಥಿತಿಯು ಹದಗೆಟ್ಟಿತು ಮತ್ತು ಅವರ ಕೆಲಸ ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಯಿತು.ಅವರ ಆಮ್ಲಜನಕದ ಸ್ಯಾಚುರೇಶನ್‌ ಕಡಿಮೆಯಾಗಲು ಶುರುವಾಯಿತು ಮತ್ತು 75% ರಷ್ಟು ಕಡಿಮೆಯಾಗಿತ್ತು. ಹಾಸಿಗೆಯಲ್ಲಿದ್ದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎಂದು ಅನಿಸಿದರೂ, ಸ್ವಲ್ಪ ಶ್ರಮದಿಂದ ಕೂಡ ಅವರ ಪರಿಸ್ಥಿತಿಯು ಹದಗೆಡಲು ಪ್ರಾರಂಭವಾಯಿತು. ಈ ಹಿಂದೆ ಬೇರೆ ಕಡೆಯಲ್ಲಿ ವೈದ್ಯರನ್ನು ಸಂಪರ್ಕಿಸಿ ಶ್ವಾಸಕೋಶದ ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡಿದ್ದರು. ಈ ಸ್ಕ್ಯಾನಿಂಗ್‌ನಿಂದ ಅವರು “ಪಲ್ಮನರಿ ಅಲ್ವಿಯೋಲಾರ್‌ ಪ್ರೊಟೀನೋಸಿಸ್‌ (ಪಿಎಪಿ) “ಎಂಬ ಅಪರೂಪದ ಶ್ವಾಸಕೋಶದ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು. ಅವರ ಈ ಸ್ಥಿತಿಯನ್ನು ತಿಳಿದನಂತರ, ರೋಗಿಯು ತನ್ನ ಕಾಯಿಲೆಗೆ ಪರಿಹಾರವನ್ನು ನಿರೀಕ್ಷಿಸುತ್ತಾ ಕನ್ಸಲ್ಟೆಂಟ್‌ ಪಲ್ ಮೊನೊಲಾಜಿ (ಶ್ವಾಸಕೋಶ ಶಾಸ್ರ್ತ) ಮಣಿಪಾಲ್‌ ಆಸ್ಪತ್ರೆ ಮೈಸೂರಿನ ಡಾ ಲಕ್ಮ್ಷೀ ನರಸಿಂಹನ್‌ ಅವರನ್ನು ಸಂಪರ್ಕಿಸಿದರು.

ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದಂತೆ, ಡಾ ಲಕ್ಷ್ಮೀ ನರಸಿಂಹನ್‌ ಅವರ, “ಪ್ಯಾಪ್‌ ಎಂಬುದು ಶ್ವಾಸಕೋಶದ ಅಲ್ವಿಯೋಲಿಯಲ್ಲಿ ಪಲ್ಮನರಿ ಸರ್ಫ್ಯಾಕಂಟ್‌ ಸಂಗ್ರಹವಾಗುವುದರಿಂದ ಉಂಟಾಗುವ ಅಪರೂಪದ ಶ್ವಾಸಕೋಶದ ಸ್ಥಿತಿಯಾಗಿದೆ. ಪಲ್ಮನರಿ ಸರ್ಫ್ಯಾಕ್ಟಂಟ್‌ ಕೊಬ್ಬಿನ್ನು ಹೊಂದಿರುವ ಪ್ರೋಟೀನೇಸಿಯಸ್‌ ವಸ್ತುವಾಗಿದೆ. ಇದರ ಮುಖ್ಯ ಕೆಲಸವೆಂದರೆ, ಅಲ್ವಿಯೋಲಿಯನ್ನು ಲೇಪಿಸುವುದು ಮತ್ತು ಹೊರಹರಿವಿನ ಸಮಯದಲ್ಲಿ ಅಲ್ವಿಯೋಲಿ ಕುಸಿಯುವುದನ್ನು ತಡೆಯುವುದು. ಅವರು ಕಾರಣಗಳ ಬಗ್ಗೆ ಮಾತನಾಡುತ್ತಾ, “ಈ ಸ್ಥಿತಿಯು ಹುಟ್ಟಿನಿಂದ ಬಂದಿರಬಹುದು, ಇಲ್ಲವೇ ಪಲ್ಮನರಿ ಸೋಂಕುಗಳಿಂದಾಗಿರುತ್ತದೆ, ಅದು ಅಲ್ವಿಯೋಲಾರ್‌ ಮ್ಯಾಕ್ರೋಫೇಜ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಅಥವಾ ಸ್ವಯಂ ನಿರೋಧಕವಾಗಿ ಬೆಳೆಯಬಹುದು. ಈಗಿನ ಸಂದರ್ಭದಲ್ಲಿ, ಸ್ವಯಂ ನಿರೋಧಕ ಎಂದು ನಿರ್ಧರಿಸಲಾಗುತ್ತಿದೆ. ಡಾ ನರಸಿಂಹನ್‌ ಅವರು ಪ್ಯಾಪ್‌ ನ ಚಿಕಿತ್ಸೆಯ ಬಗ್ಗೆ ಚರ್ಚಿಸುತ್ತಾ, ಜಿ ಎಮ್‌ ಸಿ ಎಸ್‌ ಎಫ್‌ ಇಂಜೆಕ್ಷನ್‌ ಇದ್ದಕ್ಕೆ ಚಿಕಿತ್ಸೆಯಾಗಿದೆ. ಆದರೆ, ಪ್ರಸ್ತುತ ಭಾರತದಲ್ಲಿ ಜಿ ಎಮ್‌ ಸಿ ಎಸ್‌ ಎಫ್‌ ಇಂಜೆಕ್ಷನ್‌ ಭಾರತದಲ್ಲಿ ಲಭ್ಯವಿಲ್ಲ ಮತ್ತು ಆದ್ದರಿಂದ ರೋಗಿಯ ಶ್ವಾಸಕೋಶದಿಂದ ಸಂಗ್ರಹವಾದ ಪಲ್ಮನರಿ ಸರ್ಫ್ಯಾಕ್ಟಂಟ್‌ ಅನ್ಬು ತೆಗೆದುಹಾಕಲು ಲಂಗ್‌ ಲ್ಯಾವೇಜ್‌ ಅನ್ನು ನಡೆಸುವುದೆಂದು ಪರಿಗಣಿಸಲಾಯಿತು.

ಈ ಚಿಕಿತ್ಸೆಯನ್ನು ಅಂತಿಮಗೊಳಿಸಿದ ನಂತರ, ರೋಗಿಯ ಸ್ಥಿತಿ ಮತ್ತು ಚಿಕಿತ್ಸೆಯ ಬಗ್ಗೆ ವಿವರಿಸಲಾಯಿತು ಮತ್ತು ಅವರ ಒಪ್ಪಿಗೆಯನ್ನು ಪಡೆಯಲಾಯಿತು. ಡಾ. ನರಸಿಂಹನ್‌ ಮತ್ತು ತಂಡದಿಂದ ಶ್ವಾಸಕೋಶದ ಅಥವಾ ಬ್ರಾಂಕೋಅಲ್ವಿಯೋಲಾರ್‌ ಲ್ಯಾವೇಜ್‌ ಅನ್ನು ನಡೆಸಲಾಯಿತು. ಈ ಸಮಯದಲ್ಲಿ ವೈದ್ಯರು ರೋಗಿಯ ಶ್ವಾಸಕೋಶದಿಂದ 9 ಲೀಟರ್‌ ಗಳಷ್ಟು ಪ್ರೋಟೀನೇಸಿಯಸ್‌ ದ್ರವವನ್ನು ತೆಗೆದುಹಾಕಿದರು, ಚಿಕಿತ್ಸೆ ಪೂರ್ಣಗೊಂಡ ನಂತರ, ರೋಗಿಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಮತ್ತು 75% ರಷ್ಟು ಇದ್ದ ಆಮ್ಲಜನಕದ ಸ್ಯಾಚುರೇಶನ್‌ 98% ಕ್ಕೆ ಸುಧಾರಿಸಿಕೊಂಡಿತು.

ಡಾ ನರಸಿಂಹನ್‌ ರೋಗಿಯ ಚೇತರಿಕೆ ಮತ್ತು ಕೆಲಸದ ಪ್ರಾರಂಭದ ಬಗ್ಗೆ“ ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಲು ಮತ್ತು ಅವರ ವೃತ್ತಿಯನ್ನು ಪುನರಾರಂಭಿಸಲು ರೋಗಿಯು ಗುಣಮುಖ ಹೊಂದಿದ್ದಾರೆ. ಚಿಕಿತ್ಸೆಯ ಎರಡು ತಿಂಗಳ ನಂತರವೂ 98% ಆಮ್ಲಜನಕದ ಸ್ಯಾಚುರೇಶನ್‌ ನಿರ್ವಹಿಸುತ್ತಿದ್ದಾರೆ ಮತ್ತು ಪೂರಕ ಆಮ್ಲಜನಕದ ಉಪಯೋಗವನ್ನು ನಿಲ್ಲಿಸಿದ್ದಾರೆ. ಮತ್ತಷ್ಟು ಮಾತನಾಡುತ್ತಾ, “ಜಿ ಎಮ್‌ -ಸಿ ಎಸ್‌ ಎಫ್‌ ಚುಚ್ಚುಮದ್ದು ಸಮಯಕ್ಕೆ ಲಭ್ಯವಿದ್ದರೆ ಶ್ವಾಸಕೋಶದ ಲ್ಯಾವೇಜ್‌ ನ್ನು ತಪ್ಪಿಸಬಹುದಿತ್ತುʼ ಆದರೆ ಭಾರತದಲ್ಲಿ ಈ ಚುಚ್ಚುಮದ್ದಿನ ಅಲಭ್ಯತೆಯಿಂದಾಗಿ, ಶ್ವಾಸಕೋಶದ ಲ್ಯಾವೇಜ್‌ ಅನ್ನು ಆಶ್ರಯಿಸಬೇಕಾಯಿತು. ಇದು ಸಾಮಾನ್ಯ ವಾಡಿಕೆಯ ವಿಧಾನವಲ್ಲ ಮತ್ತು ಇದಕ್ಕೆ ಉತ್ತಮ ಕೌಶಲ್ಯ ಮತ್ತು ಅನುಭವಿ ಮತ್ತು ನುರಿತ ವೈದ್ಯರು ಮತ್ತು ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ. ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಪಲ್ ಮೊನೊಲಾಜಿ (ಶ್ವಾಸಕೋಶ ಶಾಸ್ರ್ತ) ವಿಭಾಗವು ಈ ಪ್ರಕ್ರಿಯೆಗೆ ಅಗತ್ಯವಾದ ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದರಿಂದ ಮತ್ತು ಪ್ರಸಿದ್ಧ ವೈದ್ಯರ ತಂಡವು ಈ ವಿಧಾನವನ್ನು ನಿರ್ವಹಿಸುವಲ್ಲಿ ಅನುಭವಿಗಳಾಗಿರುವುದರಿಂದ ಈ ಲಂಗ್‌ ಲ್ಯಾವೇಜ್‌ ಮಾಡಲು ಸಾಧ್ಯವಾಯಿತು.

ಇದರೊಂದಿಗೆ, ಡಾ ನರಸಿಂಹನ್‌ ಅವರು “ಪ್ರಕ್ರಿಯೆಯ ನಂತರ ರೋಗಿಯು ಚೇತರಿಸಿಕೊಂಡರೂ, ರೋಗಿಗೆ ಜಿ ಎಮ್‌ ಸಿ ಎಸ್‌ ಎಫ್‌ ಇಂಜೆಕ್ಷನ್‌ ನ ಲಭ್ಯತೆಯು ಮತ್ತು ನಿರ್ವಹಿಸಲು ವಿಫಲವಾದರೆ ಆರು ತಿಂಗಳ ನಂತರ ಈ ವಿಧಾನವನ್ನು ಮತ್ತೆ ಪುನರಾವರ್ತಿಸಬೇಕಾಗಬಹುದು”. ಆದುದರಿಂದ, ಜಿಎಂ ಸಿ ಎಸ್‌ ಎಫ್‌ ಇಂಜೆಕ್ಚನ್‌ ಪ್ಯಾಪ್‌ (ಪಿ ಎ ಪಿ) ಗೆ ಗುಣಮಟ್ಟದ ಚಿಕಿತ್ಸೆಯಾಗಿದೆ, ಈ ಇಂಜೆಕ್ಷನ್‌ ನ ಅಲಭ್ಯತೆಯು ತೀವ್ರ ತೊಡಕುಗಳಿಗೆ ಕಾರಣವಾಗಬಹುದು ಮತ್ತು ಶ್ವಾಸಕೋಶದ ಕಸಿ ಅಗತ್ಯವಿರುವಮಟ್ಟಿಗೆ ಪ್ರಕರಣಗಳು ಇನ್ನಷ್ಟು ಹದಗೆಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಸಂಸ್ಥೆಗಳು ಜಿಎಂ ಸಿ ಎಸ್‌ ಎಫ್‌ ಇಂಜೆಕ್ಚನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು.

Leave a Reply

Your email address will not be published. Required fields are marked *