ಪತಿ ಹುಟ್ಟು ಹಬ್ಬದ ಬ್ಯಾನರ್ ಹರಿದು ಆಕ್ರೋಶ ಹೊರಹಾಕಿದ ಮಲ್ಲೇಶ್ ಪತ್ನಿ ಸಾಧನಾ

ನಂದಿನಿ ಮೈಸೂರು

ಬೀದರ್

ಬಿಜೆಪಿ ಮುಖಂಡ ಮಲ್ಲೇಶ್ ಜನ್ಮದಿನ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಿಎಂ ಸೇರಿದಂತೆ ಸಚಿವರು ಹಾಗೂ ಬಿಜೆಪಿ ಮುಖಂಡರ ಜೊತೆ ಬ್ಯಾನರ್ ಹಾಕಲಾಗಿತ್ತು. ಆದರೆ ಮಲ್ಲೇಶ್ ಪತ್ನಿ ಸಾಧನಾ ಈ ಬ್ಯಾನರ್ ಹರಿದು ಹಾಕುವ ಮೂಲಕ ರಂಪಾಟ ನಡೆಸಿರುವ ಘಟನೆ ಬೀದಿ ಮೈಲೂರು ಕ್ರಾಸ್ ಬಳಿ ನಡೆದಿದೆ.

ಕೌಟುಂಬಿಕ ಕಲಹ ಹಿನ್ನೆಲೆ ರಸ್ತೆಯಲ್ಲಿ ಹಾಕಿದ್ದ ಪತಿ ಹಾಗೂ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ ಮಾಡಿದ್ದಾಳೆ.

ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ರು. ಪೊಲೀಸರು ಎಫ್‌ಐಆರ್ (FIR) ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದರೂ ಅವರು ಪ್ರತಿಕ್ರಿಯಿಸದೇ
ಸುಮ್ಮನಿದ್ದರು.

Leave a Reply

Your email address will not be published. Required fields are marked *