ಮಳೆ ಆರ್ಭಟ ಮರ ಬಿದ್ದು ಮನೆ ಜಖಂ,ಪರಿಶೀಲನೆ

ಮೈಸೂರು:6 ನವೆಂಬರ್ 2021

ನಂದಿನಿ

ಮಳೆ ಹಿನ್ನಲೆ ವಿದ್ಯಾರಣ್ಯಪುರಂ ನಿವಾಸಿ ಎಸ್ ಎ ನಾಗೇಂದ್ರ ಪ್ರಸಾದ್ ಅವರ ಮನೆ ಮೇಲೆ ಉದ್ಯಾನವನದಲ್ಲಿ ಇದ್ದ ಮರ ಬಿದ್ದ ಪರಿಣಾಮ, ಮನೆ ಜಖಂಗೊಂಡಿದೆ, ಪಕ್ಕದ ಮನೆಯ ಕಾರಿನ ಗಾಜು ಒಡೆದಿದೆ, ಎರಡು ಮನೆಗಳಿಗೆ ತೊಂದರೆಯಾಗಿದೆ, ಈ ಸ್ಥಳಕ್ಕೆ ಮಹಾಪೌರರಾದ ಸುನಂದಾ ಪಾಲನೇತ್ರ ಹಾಗೂ ಸ್ಥಳೀಯ ನಗರಪಾಲಿಕೆ ಸದಸ್ಯ ಮ ವಿ ರಾಮ್ ಪ್ರಸಾದ್ ರವರು ಭೇಟಿ ನೀಡಿ ಪರಿಶೀಲಿಸಿದರು.

ಮನೆಯವರು ಆರ್ಥಿಕವಾಗಿ ಹಿಂದುಳಿದವರಾದರಿಂದ ಅವರಿಗೆ ನಗರಪಾಲಿಕೆ ವತಿಯಿಂದ ಸಹಾಯಧನ ನೀಡಲು ಮಾ ವಿ ರಾಮ್ ಪ್ರಸಾದ್ ಅವರು ಮಹಾಪೌರರಿಗೆ ಮನವಿ ಮಾಡಿದರು.ಮಹಾಪೌರರರು ಸ್ಥಳದಲ್ಲೇ ಇದ್ದ ವಲಯ ಆಯುಕ್ತರಿಗೆ ಇದರ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಶುಶ್ರೂತ್ ಮುಖಂಡರಾದ ಸಂದೀಪ್ ಮುಂತಾದವರು ಇದ್ದರು.

 

Leave a Reply

Your email address will not be published. Required fields are marked *