ನಂದಿನಿ ಮೈಸೂರು
ಫ಼ೆಬ್ರುವರಿ ೨೬,ಭಾನುವಾರ ೨೦೨೩ರಂದು ಮೈಸೂರಿನ ನಜ಼ರ್ಬಾದಿನಲ್ಲಿರುವ “ವಿಂಡ್ ಚೈಮ್ಸ್”ನಲ್ಲಿ ಸಂಜೆ ೪ರಿಂದ ೭ರವರೆಗೆ ,
*ಮಕ್ಕಳ ಸಾಹಿತ್ಯ ಸಂಭ್ರಮ* ವನ್ನು ಮೈಸೂರು ಲಿಟೆರರಿ ಫ಼ೋರಮ್ ಚಾರಿಟಬಲ್ ಟ್ರಸ್ಟ್ ಅಂಡ್ ಮೈಸೂರು ಬೂಕ್ ಕ್ಲಬ್ಸ್-೨೦೧೫(ರಿ)ಗಳ ಜಂಟಿ ವತಿಯಿಂದ ಏರ್ಪಡಿಸಲಾಗಿದೆ. ಈ ಹಬ್ಬವು ನೆರೆದಿರುವ ಮಕ್ಕಳು ಮತ್ತು ಹಿರಿಯರಿಗೆಲ್ಲರಿಗೂ ಆನಂದ, ಮನರಂಜನೆ ನೀಡುವುದಷ್ಟೇ ಅಲ್ಲ, ಆಸಕ್ತಿ ಕೆರಳಿಸುವ ಚಟುವಟಿಕೆಗಳಿಂದ ತುಂಬಿದೆ.
. ರಂಗಪಟು ಮತ್ತು ಕಥಾನಿರೂಪಕರಾದ ವಿಕ್ರಮ್ ಶ್ರೀಧರ್ ಅವರು ಪ್ರಾಚೀನ ನಾಗರೀಕತೆಯ ಕಾಲದಿಂದ ನಡೆದು ಬಂದಿರುವ ಕತೆ ಹೇಳುವ ಕಲೆಯನ್ನು ಜೀವಂತವಾಗಿಡಲು ಕೆಲಸ ಮಾಡುತ್ತಾರೆ. ತಂತ್ರಜ್ಞಾನವು ನಮ್ಮ ಬದುಕನ್ನು ಆಕ್ರಮಿಸಿಕೊಂಡುಬಿಡುತ್ತಿರುವ ಈ ಸಮಯದಲ್ಲಿ ಕತೆ ಹೇಳುವ ಕಲೆಯು ಕುಟುಂಬಗಳನ್ನು ಒಟ್ಟಾಗಿ ಸೇರಿಸಿಡುವ ಶಕ್ತಿ ಹೊಂದಿದೆ ಎನ್ನುವ ಇವರೊಂದಿಗೆ ಸಂಭಾಷಿಸುವ ಸುಯೋಗ ಮಕ್ಕಳ ಸಾಹಿತ್ಯ ಹಬ್ಬದಲ್ಲಿ ನಮಗಿದೆ.
ಯುವ ಗಾಯಕರಾದ ಲಕ್ಶ್ ಮತ್ತು ನಿಕಿತಾ ಎಳೆ ಹೃದಯಗಳ ತಾಳತಂತಿಗಳ ಒಳಗುಟ್ಟನ್ನು ಅರಿತವರು. ಚಿಲ್ಡ್‍ರನ್ಸ್ ಲಿಟೆರೇಚರ್ ಫ಼ೆಸ್ಟಿವಲ್‍ನಲ್ಲಿ ಅವರ ಸಂಗೀತವನ್ನು ಆನಂದಿಸುವ ಅವಕಾಶವಿದೆ.
೧೩ ವರ್ಷದ ಯೂಟ್ಯೂಬ್ ನಲ್ಲಿ ಹೆಸರು ಮಾಡಿರುವ ಎಳೆಯ ಗಾಯಕಿ ತನ್ಮಯಿ ಎಸ್ ಚೌಡಿಪುರ ರವರು ತಮ್ಮ ಸುಮಧುರ ಗಾಯನದಿಂದ ಎಲ್ಲರ ಮನರಂಜಿಸಲಿದ್ದಾರೆ
” ಲಿಟಲ್ ಹ್ಯಾಂಡ್ ಬುಕ್ ಆಫ಼್ ಟೆಕ್ನಾಲಜಿ” ಪುಸ್ತಕದ ಲೇಖಕರಾದ ಶಾಲಿನಿ ಸತೀಶ್ ಮತ್ತು ರಾಮ್ ಭರಣೀಧರ ರವರು ಬರವಣಿಗೆಯ ಬಗ್ಗೆ ಅತ್ಯಂತ ಉತ್ಸಾಹ ಹುಮ್ಮಸ್ಸು ಇರುವ ಲೇಖಕರು. ಅವರು ಈ ಹಬ್ಬದಲ್ಲಿ ಹಾಜರಿದ್ದು ನೆರೆದವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಮ್ಮ ಪ್ರಾಚೀನ ಜನಪದ ಕಲೆಗಳು ಮನರಂಜನೆಯನ್ನಷ್ಟೇ ಅಲ್ಲ ಬುದ್ಧಿಯನ್ಪ್ರೋತ್ಸಾಹಿಸಿ ಚುರುಕುಗೊಳಿಸಬಲ್ಲ ಕಲಾಮಾಧ್ಯಮಗಳು. ಅಂತಹದೇ ಒಂದು ಕಲೆಯಾದ “ಬೊಂಬೆ ಆಟ” ದಲ್ಲಿ ಅಂದು “ನರಕಾಸುರ ವಧೆ” ಪ್ರಸ್ತುತಗೊಳ್ಳಲಿದ್ದು ದೈತ್ಯ ಶಕ್ತಿಯಾದ ನರಕಾಸುರನನ್ನು ಶ್ರೀಕೃಶ್ಣನ ಹೆಂಡತಿಯಾದ ಸತ್ಯಭಾಮೆಯು ಹೇಗೆ ವಧೆ ಮಾಡಿ ಭೂಲೋಕಕ್ಕೆ ಸಂತಸ ತಂದಳೆಂದೂ ಅದೇ ಕಾರಣಕ್ಕಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆಯೆಂದೂ ಅರಿತುಕೊಳ್ಳಬಹುದು.
ಮೈಸೂರಿನ ರಾಂಸನ್ಸ್ ಅವರಿಂದ ಮನಸ್ಸನ್ನು ಮುದಗೊಳಿಸುವ ಮತ್ತು ಮಕ್ಕಳ ದೈಹಿಕ ಹಾಗೂ ಮಾನಸಿಕ ಶಕ್ತಿಗಳನ್ನು ಧೃಡಪಡಿಸುವ ನಮ್ಮ ಪಾರಂಪರಿಕೆ ಮನೆ ಆಟಗಳ ಪ್ರದರ್ಶನವಿದೆ.
ಕಲೆ, ಸಾಹಿತ್ಯ ಮತ್ತು ಸಂಗೀತಗಳ ಸಂಗಮವಾದ ಈ ಚಿಲ್ಡ್‍ರನ್ಸ್ ಲಿಟೆರೇಚರ್ ಫ಼ೆಸ್ಟಿವಲ್‍ಗೆ ಸರ್ವರಿಗೂ ಆದರದ ಸುಸ್ವಾಗತ.
Contact: 9980250114