ನಂದಿನಿ ಮೈಸೂರು
ಕಾವಾಡಿಯರು, ಮಾವುತರು ಹಾಗೂ ಆನೆ ಜಮಾದಾರರ ವೇತನ ತಾರತಮ್ಯವನ್ನ ಸರಿಪಡಿಸುವಂತೆ ಆಗ್ರಹಿಸಿ ಸಭೆ ನಡೆಸಿದ್ದು, ತಾರತಮ್ಯ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಆನೆ ಮಾವುತರು ಮತ್ತು ಕಾವಾಡಿಯವರ ಸಂಘ (ರಿ) ಕುಶಾಲನಗರದ ದುಬಾರೆಯಲ್ಲಿ ಸಭೆ ಸೇರಿದೆ. ಸಭೆಯಲ್ಲಿ ಈ ಬಾರಿಯ ದಸೆರೆಯ ಗಜ ಪಯಣ ಒಳಗೆ ನಿರ್ಣಯ ಕೈಗೊಳ್ಳದಿದ್ದರೆ ಮುಂದಿನ ಹೋರಾಟದ ಸ್ವರೂಪದ ಬಗ್ಗೆ ತೀರ್ಮಾನಿಸಲಾಗುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ಅದರಂತೆ ಶಿವಮೊಗ್ಗದ ಸಕ್ರೇಬೈಲಿನ ಮಾವುತರ ಸಂಘವೂ ಸಹ ಈ ನಿರ್ಣಯವನ್ನ ಬೆಂಬಲಿಸಿದೆ. ಇದರ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಖಾಲಿಯಿರುವ ಅನೆ ಮಾವುತ ಮತ್ತು ಕಾವಾಡಿಯರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಮನವಿ ಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಆನ ಮಾವುತರು ಮತ್ತು ಕಾವಾಡಿಯರ ಸಂಘದ ಸಭೆಯಲ್ಲಿ ಅಧ್ಯಕ್ಷತೆ ದುಬಾರ ಸಾಕಾನೆ ಶಿಬಿರದ ಹಿರಿಯ ಮಾವುತರು ಕೇಂದ್ರ ಸಂಘದ ಉಪಧ್ಯಕ್ಷರಾದ ಜೆ.ಕೆ ಡೋಬಿ ಹಾಗೂ ಮತ್ತಿಗೋಡು ಸಾಕಾನ ಶಿಬಿರದ ಅಧ್ಯಕ್ಷರಾದ ಜೆ.ಕೆ ವಂಸತ ಮತ್ತು ಕೇಂದ್ರ ಸಂಘದ ಅಧ್ಯಕ್ಷರಾದ ಗೌನ್ ಖಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದರು.