ನಂದಿನಿ ಮೈಸೂರು
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಬನ್ನೂರಿನ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪರವರಿಗೆ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ.
ಚಲನಚಿತ್ರ ನಟ ರಮೇಶ್ ಅರವಿಂದ್ ರವರು ಮಹೇಂದ್ರ ಸಿಂಗ್ ಕಾಳಪ್ಪ ರವರಿಗೆ ಅರ್ವಾಡ್ ನೀಡಿ ಅಭಿನಂದಿಸಿದರು.
ಮಹೇಂದ್ರ ಸಿಂಗ್ ಕಾಳಪ್ಪರವರು ನೂರಾರು ಸೇವಾ ಕಾರ್ಯಕ್ರಮ ಆಯೋಜಿಸಿದ್ದಾರೆ.ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರೂ ಕೂಡ ಆಗಿರುವ ಇವರು ಹತ್ತಾರು ಆರೋಗ್ಯ ಶಿಬಿರ,ರಕ್ತದಾನ ಶಿಬಿರ,ತಂಗುದಾಣ ನಿರ್ಮಾಣ,ಗೋವುಗಳಿಗೆ ಆಸರೆ,ಕುಡಿಯುವ ನೀರಿನ ಘಟಕ,ಪ್ರಾಣಿ ದತ್ತು,ಪಕ್ಷಿ ಸಂರಕ್ಷಣೆ,ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಆಶಾ ಭಟ್,ಸಂತೋಷ್ ಕುಮಾರಿ,ವನ್ಯ ಸಿಂಗ್,ವಿರಾಟ್ ಸಿಂಗ್ ಭಾಗಿಯಾಗಿದ್ದರು.