ನಂದಿನಿ ಮೈಸೂರು
ಮೈಸೂರಿನ ಐತಿಹಾಸಿಕ ಸೆಂಟ್ ಫಿಲೋಮಿನಾ ಚರ್ಚ್‌ನಲ್ಲಿ ಆರು ಜನ ಯುವಕರಿಗೆ ಯಾಜಕಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಲವಾರು ವಿಶೇಷ ಪ್ರಾರ್ಥನೆಗಳು, ಮೆರವಣಿಗೆ ಮೂಲಕ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಚರ್ಚ್ ನ ಎಲ್ಲಾ ಧರ್ಮಗುರುಗಳು ಆರು ಜನರಿಗೂ ಸಂಪ್ರದಾಯದಂತೆ ಯಾಜಕಾಭಿಷೇಕ ನಡೆಯಿತು.
ಏಸುವಿನ ಪ್ರಾರ್ಥನೆಯೊಂದಿಗೆ ವಿಶೇಷ ಪೂಜೆಯೊಂದಿಗೆ ಕ್ರೈಸ್ತ ಧರ್ಮ ಸಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಎಲ್ಲಾ ಧರ್ಮಗುರುಗಳು 6 ಮಂದಿಗೂ ಸಂಪ್ರದಾಯದಂತೆ ಆಶೀರ್ವದಿಸಿ ಯಾಜಕಾಭಿಷೇಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಧರ್ಮಕ್ಷೇತ್ರದ ಆಡಳಿತ ಅಧಿಕಾರಿ ರೆವ್ dr ಬೆರ್ನಾಡ್ ಮೋರಸ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಮೈಸೂರು ಧರ್ಮಪ್ರಾಂತ್ಯದಲ್ಲಿ ಆರು ಸೇವಾ ಕರ್ತರುಗಳು ಯಾಜಕಾಭಿಷೇಕ
ನಮ್ಮ ಮೈಸೂರು ಧರ್ಮಕ್ಷೇತ್ರದ ಸಂತ ಜೋಸೆಫರ ಪ್ರಧಾನ ದೇವಾಯದಲ್ಲಿ ಆರು ಹೊಸ ಸೇವಾ ಕರ್ತರುಗಳು ಯಾಜಕಾಭಿಷೇಕವನ್ನು ಸ್ವೀಕರಿಸಿಅದ ಈ ಪವಿತ್ರ ಸಮಾರಂಭವು ಧರ್ಮಪ್ರಂತ್ಯದ ನಿವಾಸಿಗಳಿಗೆ ಸಂತಸವನ್ನು ನೀಡಿದೆ.
ಈ ಸಂತೋಷದಾಯಕ ಸಂದರ್ಭವು ಈ ಸಮರ್ಪಿತ ವ್ಯಕ್ತಿಗಳಿಗೆ ಆಧ್ಯಾತ್ಮಿಕ ರಚನೆ, ಅಧ್ಯಯನ ಮತ್ತು ವಿವೇಚನೆಯ ವರ್ಷಗಳ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಈ ಯಾಜಕದೀಕೆ ಸಮಾರಂಭವನ್ನು ಮೈಸೂರು ಧರ್ಮಪ್ರಾಂತ್ಯದ ಆಡಳತಾಧಿಕಾರಿ ವಂದನೀಯ ಡಾ.ಬರ್ನಾಡ್ ಮೊರಾಸ್ ಅವರು ನೆರವೇಲಿಸಿದರು. ಹಲವಾರು ಗಣ್ಯ ಅತಿಥಿಗಳು, ಸ್ಥಳೀಯ ಪಾದ್ರಿಗಳು ಮತ್ತು ಸಮುದಾಯದ ನಿಷ್ಠಾವಂತ ಸದಸ್ಯರ ಉಪಸ್ಥಿತರಾಗಿದ್ದರು.
ಈ ಸೇವಕರ್ತರು ಅನೇಕ ವರ್ಷಗಳ ಕಾಲ ಪರಿಣಿತ ಗುರುಗಳಿಂದ ಸೇವ ತರಬೇತಿಯನ್ನು ಪಡೆದು, ತಮ್ಮ ಜೀವನವನ್ನು ಆಧ್ಯಾತ್ಮಿಕ ಸೇವೆಗಾಗಿ ಮತ್ತು ದೇವರ ಸಂದೇಶವನ್ನು ಸಾರಲು ಹಾಗೂ ದೇವರ ಸಾಮ್ರಾಜ್ಯವನ್ನು ವಿಸ್ತರಿಸಲು ತಮ್ಮನ್ನೆ ಸಮರ್ಪಿಸಿ ತಮ್ಮ ನಂಬಿಕೆಯ ಪಯಣವನ್ನು ಪ್ರಾರಂಭಿಸಿದ್ದಾರೆ.
ಮೈಸೂರು ಧರ್ಮಪ್ರಾಂತ್ಯವು ನಂಬಿಕೆಯ ಮೂಲಾಧಾರವಾಗಿ,ಈ ಸಂದರ್ಭವು ನಮ್ಮ ಡಯಾಸಿಸ್‌ನೊಳಗೆ ಬೆಳವಣಿಗೆ ಮತ್ತು ನವೀಕರಣವನ್ನು ಸಂಕೇತಿಸುತ್ತದೆ. ಆಧ್ಯಾತ್ಮಿಕ ಯೋಗಕ್ಷೇಮವನ್ನು ಪೋಷಿಸಲು ಶ್ರಮವಹಿಸಿದ ನಮ್ಮ ಧರ್ಮಗುರುಗಳು ಮತ್ತು ನಿಷ್ಠಾವಂತ ಸಮುದಾಯದ ದಣಿವರಿಯದ ಪ್ರಯತ್ನಗಳಿಗೆ ಮತ್ತು ಸಮರ್ಪಣೆಗೆ ಧನ್ಯವಾದಗಳು ಎಂದರು.
ವಿಶ್ರಾಂತ ಧರ್ಮಧ್ಯಕ್ಷರು ಫಾರ್ಮೆರ್ ಬಿಶೋಪ್ ಥೋಮಸ್ ವಾಳಪಲ್ಲಿ, stanley ಅಲ್ಮಿಡ haagu ಹಲವಾರು ಧರ್ಮಗುರುಗಳು, ಪೋಷಕರು, ಭಕ್ತರು ಉಪಸ್ಥಿತರಿದ್ದರು