ಮೈಸೂರು:18 ಮೇ 2022
ನಂದಿನಿ ಮೈಸೂರು
ಕಳೆದ 15 ವರ್ಷಗಳಿಂದ ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ಸತಾರಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೋಲಿಸ್ ಪೇದೆ ತೇಜಾ ರಾಜೇಂದ್ರ ತೂಪೆ ಕಾಣೆಯಾಗಿದ್ದು ಪೇದೆ ಹುಡುಕಿಕೊಂಡು ಮಹಾರಾಷ್ಟ್ರ ಪೋಲೀಸರು ಮೈಸೂರಿಗೆ ಆಗಮಿಸಿದ್ದಾರೆ.
ಮೇ 10 ರಂದು ಕರ್ತವ್ಯದ ವೇಳೆ ಯಲ್ಲೇ ಮಧ್ಯಾಹ್ನ 2.30 ರ ಸುಮಾರಿನಲ್ಲಿ ನಾಪತ್ತೆಯಾಗಿದ್ದಾರೆ . ಈ ಸಂಬಂಧ ಸತರಾ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ತಂದೆ ರಾಜೇಂದ್ರ,ತಾಯಿ ಜಯಶ್ರೀ ದೂರು ದಾಖಲಿಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಪೊಲೀಸರ ತಂಡ ನಿಗೂಢವಾಗಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮತ್ತು ಆಕೆ ಯನ್ನು ಅಪಹರಿಸಿದ್ದಾನೆಂದು ಶಂಕಿಸಲಾಗಿರುವ ಶಾನವಾಜ್ ಖಾನ್ ಫೋಟೋ ಗಳನ್ನು ಪತ್ರಕರ್ತರಿಗೆ ನೀಡಿದೆ .
ತೇಜಾ ರಾಜೇಂದ್ರ ತೂಪೆ ಖಾತೆಯಿಂದ
ಮುಜಾಮಿಲ್ ಶಾನವಾಜ್ ಖಾನ್ ಎಂಬ ವ್ಯಕ್ತಿಯ
ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ 2.20 ಲಕ್ಷ ರೂ . ವರ್ಗಾವಣೆಯಾಗಿರುವುದು ಕಂಡು ಬಂದಿದೆ . ಆ ವ್ಯಕ್ತಿಯ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ಆತ ಮೂಲತಃ ಹಾಸನ ಜಿಲ್ಲೆಯವನಾದ ಮುಸ್ಲಿಂ ವ್ಯಕ್ತಿಯಾಗಿದ್ದು ಈತನ ಮೇಲೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.ಈ ಹಿನ್ನೆಲೆಯಲ್ಲಿ ಮಹಿಳಾ ಪೇದೆ ಈತನಿಂದ ಅಪಹರಣವಾಗಿದ್ದಾಳೆ ಎಂದು ಪರಿಗಣಿಸಿರುವ ಮಹಾರಾಷ್ಟ್ರ ಪೊಲೀಸರು ಆಕೆಯ ಮೊಬೈಲ್ ಟವರ್ ಲೊಕೇಷನ್ ಪತ್ತೆಯಲ್ಲಿ ತೊಡಗಿದಾಗ ಮೇ 16 ರಂದು ಮಧ್ಯಾಹ್ನ 12.12 ರ ಸಮಯದಲ್ಲಿ ಮೈಸೂರಿನ ಹಳ್ಳದಕೇರಿಯಲ್ಲಿರುವ ಮನ್ನಾರ್ ಕಾಂಪ್ಲೆಕ್ಸ್ ಬಿಲ್ಡಿಂಗ್‌ನಲ್ಲಿರುವ ಟವರ್‌ನಲ್ಲಿ ಮಹಿಳಾ ಪೇದೆಯ ಮೊಬೈಲ್ ಕಾರ್ಯ ನಿರ್ವಹಿಸಿರುವುದು ಪತ್ತೆಯಾಗಿದೆ .ಮಹಾರಾಷ್ಟ್ರ ಪೊಲೀಸರ ತಂಡ ಲಷ್ಕರ್ ಠಾಣೆ ಪೊಲೀಸರ ಸಹಕಾರದೊಂದಿಗೆ ಮನ್ನಾರ್ ಕಾಂಪ್ಲೆಕ್ಸ್ ಬಿಲ್ಡಿಂಗ್‌ಗೆ ತೆರಳಿ ಪರಿಶೀಲನೆ ನಡೆಸುತ್ತಿದೆ.
ತೇಜಾ ರಾಜೇಂದ್ರ ತೂಪೆ ಹಾಗೂ ಮುಜಾಮಿಲ್ ಶಾನವಾಜ್ ಖಾನ್ ಇವರಿಬ್ಬರ ಬಗ್ಗೆ ಮಾಹಿತಿ ದೊರೆತಲ್ಲಿ ಮೊಬೈಲ್ ಸಂಖ್ಯೆ 9321033018 ಅಥವಾ 9322219011 ಅನ್ನು ಸಂಪರ್ಕಿಸುವಂತೆ ಮಹಾರಾಷ್ಟ್ರ ಪೋಲಿಸರು ಮನವಿ ಮಾಡಿದ್ದಾರೆ.