ಮಹಾರಾಜ ಟ್ರೋಫಿ ಟಿ 20 ಟೂರ್ನ್ ಮೆಂಟ್ ನಲ್ಲಿ ಆಟವಾಡುವ ಆಟಗಾರರನ್ನು ಪರಿಚಯಿಸಿದ ಮೈಸೂರು ವಾರಿಯರ್ಸ್

ಮೈಸೂರು:5 ಆಗಸ್ಟ್ 2022

ನಂದಿನಿ ಮೈಸೂರು

ಆ.7ರಿಂದ 26ರವರೆಗೆ ಮೈಸೂರು ಮತ್ತು ಬೆಂಗಳೂರಲ್ಲಿ ನಡೆಯಲಿರುವ
ಮಹಾರಾಜ ಟ್ರೋಫಿ ಟಿ 20 ಟೂರ್ನ್ ಮೆಂಟ್ ನಲ್ಲಿ ಆಟವಾಡುವ ಆಟಗಾರರನ್ನು ಮೈಸೂರು ವಾರಿಯರ್ಸ್ ಪ್ರಕಟಿಸಿದೆ.

ಎನ್.ಆರ್.ಗ್ರೂಪ್ ನ ಸೈಕಲ್ ಫ್ಯೂರ್ ಅಗರಬತ್ತಿಯಿಂದ ಚಾಲಿತವಾದ ಮೈಸೂರು ವಾರಿಯರ್ಸ್ ಈಗ ಮಹಾರಾಜ ಟ್ರೋಫಿ ಪಂದ್ಯಾವಳಿಗಾಗಿ ಆಡುವ ತನ್ನ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಯನ್ನು ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ.

ಮೈಸೂರು ವಾರಿಯರ್ಸ್ ತಂಡ ಇಂತಿದೆ
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ವಿದ್ಯಾಧರ ಪಾಟೀಲ್, ನಿಹಾಲ್ ಉಲ್ಲಾಳ್, ಪ್ರತೀಕ್ ಜೈನ್, ಭರತ್ ಧುರಿ, ಚಿರಂಜೀವಿ, ಶುಭಾಂಗ ಹೆಗ್ಡೆ, ಲೋಚನ್ ಅಪ್ಪಣ್ಣ, ಶಿವರಾಜ್, ಮೋನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಲವತ್, ಅರುಣ್ ಕೆ., ತುಷಾರ್ ಹೆಚ್. ಮತ್ತು ನಾಗ ಭರತ್.
ಪಿ.ವಿ. ಶಶಿಕಾಂತ್ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ನೇಮಕ ಮಾಡಲಾಗಿದೆ.

ತಂಡದಲ್ಲಿ ಸಹಾಯಕ ತರಬೇತುದಾರರಾಗಿ ಕೆ.ಎಲ್. ಅಕ್ಷಯ್, ಆಯ್ಕೆದಾರರಾಗಿ ಕೆ.ಎಲ್ ಅಶ್ವತ್, ಫಿಜಿಯೋಥೆರಪಿಸ್ಟ್ ಆಗಿ ಟಿ. ಮಂಜುನಾಥ್, ಟ್ರೇನರ್ ಆಗಿ ಇರ್ಫಾನ್‍ ಉಲ್ಲಾ ಖಾನ್ ಮತ್ತು ವಿಡಿಯೋ ವಿಶ್ಲೇಷಕರಾಗಿ ಕಿರಣ್ ಕೆ. ಕಾರ್ಯ ನಿರ್ವಹಿಸಲಿದ್ದಾರೆ.

Leave a Reply

Your email address will not be published. Required fields are marked *