ಹ್ಯಾಂಡ್ ಬಾಲ್ ಪಂದ್ಯಾವಳಿ ಸತತ 15 ನೇ ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಅವಿಲಾ ಕಾನ್ವೆಂಟ್

ಮೈಸೂರು:5 ಆಗಸ್ಟ್ 2022

ನಂದಿನಿ ಮೈಸೂರು

ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಜಿಲ್ಲೆ ( ಡಿ.ಡಿ.ಪಿ.ಐ ) ರವರು ದಿನಾಂಕ 22 , 23 ನೇ ಜುಲೈ 2022 ರಂದು ನಗರದ ಸೈಂಟ್ ಥಾಮಸ್ ಶಾಲಾ ಮೈದಾನದಲ್ಲಿ ಏರ್ಪಡಿಸಿದ ಮೈಸೂರು ಜಿಲ್ಲಾ ಮಟ್ಟದ ಶಾಲಾ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಅವಿಲಾ ಕಾನ್ವೆಂಟ್ ಶಾಲೆಯ 14 ಮತ್ತು 17 ವಯೋಮಿತಿಯ ಬಾಲಕಿಯರ ( ಪ್ರಾಥಮಿಕ ಮತ್ತು ಪ್ರೌಢಶಾಲೆ ) ತಂಡಗಳು ಸತತ 15 ನೇ ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ .

ಚಿತ್ರದಲ್ಲಿ ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ರಶ್ಮಿ , ಸಂಚಾಲಕರಾದ ಸಿಸ್ಟರ್ ಕ್ರಿಸ್ಟೀನಾ , ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ್ ವೀಣಾ , ಸಿಸ್ಟರ್ ಅರುಣ ಜ್ಯೋತಿ , ದೈಹಿಕ ಶಿಕ್ಷಣ ಶಿಕ್ಷಕರಾದ ಎಲಿಯಾಸ್ ಅರುಳ್ಳಪ್ಪ ಹಾಗೂ ವೆಂಕಟೇಶ್‌ಗೌಡ ಇದ್ದಾರೆ .

ಕ್ರೀಡಾಪಟುಗಳು : ಮೊದಲ ಸಾಲಿನಲ್ಲಿ ಎಡದಿಂದ ಬಲಕ್ಕೆ : – ಪಂಚಮಿ , ಧನ್ವಿ , ಪೂಜಾಲಕ್ಷ್ಮಿ , ಚಿನ್ನು ಕುಮಾರಿ , ನಿಶ್ಚಿತ , ಲಾವಣ್ಯ , ಸಿಂಚನ , ಸರಸ್ವತಿ , ಸಿರಿ ಸಿಂಚನ , ಛಾಯ , ದಿಶಾ , ಖುಷಿ , ಎರಡನೇ ಸಾಲಿನಲ್ಲಿ ಎಡದಿಂದ ಬಲಕ್ಕೆ ; – ಧನ್ವಿ , ನಿಷಾ , ಚಿತ್ರಲತಾ , ಸಿಂಚನ , ಶ್ರೇಯ , ಲಾವಣ್ಯ ರಾಜ್ , ವರ್ಷ , ಪೂಜಾ , ಭೂಮಿಕ , ಅಪರ್ಣ , ಸನ್ನಿಧಿ , ತನ್ನಿ .

Leave a Reply

Your email address will not be published. Required fields are marked *