ಪತ್ರಕರ್ತರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಮೈಸೂರು:25 ಡಿಸೆಂಬರ್ 2021

ನಂದಿನಿ

ಶಿಕ್ಷಣ ಜ್ಞಾನ ,ಲಯನ್ಸ್ ಕ್ಲಬ್ ಅಫ್ ಮೈಸೂರು ಮಿಲೇನಿಯಂ ಜಿಲ್ಲೆ 317ಎ,ಪ್ರಾಂತ್ಯ 12 ,ವಲಯ 1 ಕ್ಲಬ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಮಾಸ ಪತ್ರಿಕೆಯ 19 ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಶಿಕ್ಷಣ ಸದಸ ಗುರು ಭವನದಲ್ಲಿ ಆಯೋಜಿಸಿದ ಸಮಾರಂಭಕ್ಕೆ
ಗಂಗಾಧರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ವೇದಿಕೆಯ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಪತ್ರಕರ್ತರಾದ ಪ್ರಸನ್ನ,ಆರ್.ಮಧುಸೂದನ್, ಮಹದೇವಸ್ವಾಮಿ,ವೆಂಕಟೇಶ್, ನಂದಿನಿ. ಎನ್ ರವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ತದ ನಂತರ ಯೋಗ ಶಿಕ್ಷಣ ರತ್ನ,ಕಲಾರತ್ನ,ರಂಗಕಲಾರತ್ನ,ಸೈನಿಕ ರತ್ನ,ಕೀರ್ತಿಶೇಷ ಧರ್ಮರತ್ನಾಕರ ಶ್ರೀ ಆರ್.ವಿ.ನಾಗರಾಜ ಗುಪ್ತ ಪ್ರಶಸ್ತಿ, ಶಿಕ್ಷಣ ಧ್ರುವತಾರೆ ಸಿದ್ದಗಂಗಾ ಶಿವಣ್ಣ ಪ್ರಶಸ್ತಿ,ಆರಕ್ಷಕ ರತ್ನ ,ಸಾರಿಗೆ ರತ್ನ,ಮಾಧ್ಯಮ ರತ್ನ,ಶಿಲ್ಪಕಲಾ ರತ್ನ,ಕಲ್ಯಾಣ ಕರ್ನಾಟಕ ಶಿಕ್ಷಣ ಪ್ರತಿಭೆ,ಸಹಕಾರ ರತ್ನ,ಶೈಕ್ಷಣಿಕ ಆಡಳಿತ ಸೇವಾರತ್ನ ಸೇರಿದಂತೆ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *