ಗಣೇಶನ ಹುಟ್ಟು ಹಬ್ಬ”ಈಶ ಗಣಪ” ಅಲಂಕಾರದಲ್ಲಿ ಕಂಗೊಳಿಸಿದ ಬಲಮುರಿ ಗಣಪ

101 Views

ಮೈಸೂರು:26 ಡಿಸೆಂಬರ್ 2021

ನಂದಿನಿ

ಶ್ರೀ ಬಲಮುರಿ ಗಣಪತಿ ದೇವಸ್ಥಾನದ 32 ನೇ ವಾರ್ಷಿಕೋತ್ಸವದಲ್ಲಿ ಬಲಮುರಿ ಗಣಪತಿ ಈಶ ಗಣಪನ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು.

ಮೈಸೂರಿನ ನಗರದ ರೈಲ್ವೆ ನಿಲ್ದಾಣದಲ್ಲಿರುವ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರು ಡಾ. ಜಿ.ಎಸ್ ನಾಗೇಶ್ ದೀಕ್ಷೀತ್ ಅವರ ನೇತೃತ್ವದಲ್ಲಿ ಅರ್ಚಕ ನಾಗೇಂದ್ರರವರ ಸಮ್ಮುಖದಲ್ಲಿ
ಬೆಳಗ್ಗೆ 9 ರಿಂದ ಗಣಪತಿ ಹೋಮ,ನವಗ್ರಹ ಹೋಮ ,ದತ್ತಾತ್ರೇಯ ಹೋಮ,ಅಯ್ಯಪ್ಪಾ ಸ್ವಾಮಿ ಹೋಮ ,ಶ್ರೀ ಕಾಲಾಭೈರವ ಹೋಮ ,ಪೂರ್ಣಾವತಿ ಮಹಾ ಮಂಗಳಾರತಿ ಮಾಡುವ ಮೂಲಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

 

ಶ್ರೀಕಾಲಭೈರವನ ಹೋಮ ನಂತರ ಶ್ವಾನಕ್ಕೆ ಪೂಜೆ ಸಲ್ಲಿಸಲಾಯಿತು.ದೇವಸ್ಥಾನದ ಸುತ್ತಾ ಮಾಡಿದ್ದ ಹೂವಿನ ಅಲಂಕಾರ,ದೀಪಾಲಂಕಾರ ಕಣ್ಮನ ಸೆಳೆಯಿತು.ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರೂ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *