ನಂದಿನಿ ಮೈಸೂರು
ವರುಣದಲ್ಲಿ ವಿಜಯೇಂದ್ರ ಸ್ಪರ್ಧಿಸಿ ಗೆದ್ರೆ ರಾಜಕೀಯ ನಿವೃತ್ತಿ:ಮದನ್ ರಾಜ್ ಸವಾಲು
ವರುಣ ಕ್ಷೇತ್ರದ ಪರಿಚಯವೇ ಇಲ್ಲದ ವಿಜಯೇಂದ್ರ ಚುನಾವಣೆಯಲ್ಲಿ ನಿಲ್ಲಲೂ ಕಸರತ್ತು ಮಾಡುತ್ತಿದ್ದಾರೆ.ನಾನು ವರುಣದಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕುತ್ತಿದ್ದೇನೆ. ಅವರೇನಾದರೂ ಸ್ಪರ್ಧಿಸಿ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿ.ನರಸೀಪುರ ಪುರಸಭೆ ಅಧ್ಯಕ್ಷ ಮದನ್ ರಾಜ್ ಸವಾಲು ಹಾಕಿದರು.
ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಡ್ಯವಾಗಿದೆ.
ವಿಜಯೇಂದ್ರರಿಗೂ ವರುಣ ಕ್ಷೇತ್ರಕ್ಕೂ ಯಾವುದೇ ನಂಟಿಲ್ಲ. ವರ್ಷಕ್ಕೊಮ್ಮೆ ಜಾತ್ರೆಗೆ ಬರುವಂತೆ ಬಂದೂ ಹೋಗುವಂತೆ ಬಂದೂ ಹೋಗುವ ವಿಜಯೇಂದ್ರರ ಕೊಡುಗೆ ಕ್ಷೇತ್ರಕ್ಕೇನಿದೆ ಎಂದು ಆ ಪಕ್ಷದವರು ಹೇಳಲಿ. ವಿಜಯೇಂದ್ರ ಯಾವುದೇ ಚುನಾವಣೆಯಲ್ಲಿ ಸ್ಪರ್ಥಿಸಿಲ್ಲ.ವರುಣ ಕ್ಷೇತ್ರಕ್ಕೆ ಅವರ ಅಭಿವೃದ್ಧಿ ಶೂನ್ಯ.ಡಬಲ್ ಇಂಜಿನ್ ಸರ್ಕಾರ ಅವರದ್ದು.
ವಿಜಯೇಂದ್ರ ಅವರು ಮಾತ್ರವಲ್ಲ, ಬಿಜೆಪಿ ಯಾರೇ ಸ್ಪರ್ಧಿಸಿದರು ಸೋಲು ಖಚಿತವಾಗಿದೆ. ಹೀಗಾಗಿ ವಿಜಯೇಂದ್ರ ಸ್ಪರ್ಧೆ ಅಪ್ರಸ್ತುತವಷ್ಟೇ ಎಂದರು.
ಇನ್ನೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲಬೇಕೆಂಬುದು ನಮ್ಮ ಒತ್ತಾಯ. ಇಲ್ಲಿ ಸ್ಪರ್ಧಿಸಿ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಸೆ ಎಂದರು.