ಮೈಸೂರು:31 ಜನವರಿ 2022
ನಂದಿನಿ ಮೈಸೂರು
ಪ್ರಕೃತಿಯನ್ನು ಒಳಗಣ್ಣಿನಿಂದ ನೋಡಿದರೆ ಮಾತ್ರ ಭಾವನೆ ಮೂಡಲು ಸಾಧ್ಯ ಎಂಬುದನ್ನು ವರಕವಿ ದ.ರಾ.ಬೇಂದ್ರ ತಮ್ಮ ಕವನ ಮತ್ತು ಕಾವ್ಯಗಳಿಂದ ನಿರೂಪಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಣ್ಣಿಸಿದರು.
ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ 126ನೇ ಜಯಂತಿ ಅಂಗವಾಗಿ
ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ
ಬೇಂದ್ರೆಯ ನೆನಪು ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿ, ‘ಬೇಂದ್ರೆ ಅವರು ಪ್ರಪಂಚದಲ್ಲಿ ಕನ್ನಡ ಸೇವೆಗೆ ಇರುವ ಅವಕಾಶ ಬಳಸಿಕೊಂಡು ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದಾರೆ’ ಎಂದು ಸ್ಮರಿಸಿದರು.
‘ಬೇಂದ್ರೆಯವರು ಸಾಹಿತ್ಯ, ಕೃತಿ, ನಾಟಕ. ಕವನ, ಕಾವ್ಯದ ಮೂಲಕ ನೊಂದ ಜೀವಗಳಲ್ಲಿ ಬದುಕಿನ ಉತ್ಸಾಹದ ಚಿಲುಮೆ ಉಕ್ಕಿಸಿದರು. ಅವರು ಕವಿ, ಸಾಹಿತಿಯಷ್ಟೇ ಆಗಿರಲಿಲ್ಲ, ಇತಿಹಾಸಕಾರ, ಸಂಸ್ಕೃತ ವಿದ್ವಾಂಸ, ಭೌತಶಾಸ್ತ್ರ, ಗಣಿತ ತಜ್ಞ, ಸಂಖ್ಯಾಶಾಸ್ತ್ರ, ತತ್ವಜ್ಞಾನಿ ಹೀಗೆ ಅವರದು ಬಹುಮುಖ ವ್ಯಕ್ತಿತ್ವ. ಅವರ ಕವನ, ಕಾವ್ಯವು ಜನಪದ ಸೂಗಡು ಹಾಗೂ ಪ್ರಾಸದಿಂದ ಕೂಡಿದೆ’ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಡಾ. ವೈ ಡಿ ರಾಜಣ್ಣ ಮಾತನಾಡಿ
ದ ರಾ ಬೇಂದ್ರೆಯವರು ಕವಿಯಾಗಿ ಕಥೆಗಾರರಾಗಿ ನಾಟಕಕಾರರಾಗಿ ತಮ್ಮ ಸಾಹಿತ್ಯದ ಉದ್ದಕ್ಕೂ ಬದುಕಿನ ಅನುಭವದ ಪಾಠವನ್ನು ಕಾವ್ಯದ ಪಾಕದ ಮೂಲಕ ಕನ್ನಡಿಗರಿಗೆ ಸಾಹಿತ್ಯವನ್ನ ಸಾಹಿತ್ಯದ ಶ್ರೇಷ್ಠತೆಯನ್ನು ಕೊಟ್ಟಂಥವರು ,ಬೇಂದ್ರೆಯವರ ಕವಿತೆಗಳು ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸಂಕಲನಗಳಲ್ಲಿ ಹೊರಬಂದಿದ್ದೇವೆ ಎಲ್ಲ ಕವಿತೆಗಳಲ್ಲಿ ಕನ್ನಡ ಕನ್ನಡಿಗ ಅದರಾಚೆಗೆ ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ
ಭಾರತೀಯರನ್ನು ಜಾಗೃತಗೊಳಿಸಿದಂಥ ಜಾಗೃತ ಪ್ರಜ್ಞೆಯ ಕವಿತೆಗಳಿರಬಹುದು ಎಲ್ಲವುಗಳ ಮೂಲಕ ಒಬ್ಬ ನಾಗರಿಕ ಸುಸಂಸ್ಕೃತನಾಗಿ ಬಾಳಿಕೆ ಒಂದಿಷ್ಟು ಮೌಲ್ಯಯುತ
ಕೊಡುಗೆಯನ್ನು ಕೊಟ್ಟಂಥವರು,
ಕನ್ನಡದ ಸಂದರ್ಭಕ್ಕೆ ಬೇಂದ್ರೆಯವರ ಕವಿತೆಗಳು ಕಾಲಾತೀತ ವಾಗಿವೆ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ
ಬೇಂದ್ರಯವರ ಕವಿತೆಗಳು ಮುತ್ತಿನ ಹಾರದಂತಿವೆ. ಅವರ ನಾಡು, ನುಡಿ, ಭಾಷೆ, ಸಂಸ್ಕೃತಿ ಪರಂಪರೆಯಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅವರು ನಾಡಿನ ಸಮಸ್ತ ಮನುಕುಲಕ್ಕೆ ಕನ್ನಡದ ಕಾವ್ಯ ಹಾಗೂ ಸಾಹಿತ್ಯದ ಬೆಳಕು ಚೆಲ್ಲಿದರು. ಅಂತರಂಗದ ಮೃದಂಗ ಬಿಡಿಸಿ ಸರ್ವರ ಹೃದಯದಲ್ಲಿ ಗಾನ ಲಹರಿ ಹರಿಸಿದರು’ ಎಂದರು.
ಬೇಂದ್ರೆಯವರ ಸಾಹಿತ್ಯ ಕೃಷಿ ಅನನ್ಯ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅವರು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಅವರು ವಿದ್ಯಾರ್ಥಿ ದಿಸೆಯಲ್ಲೇ ಕವಿತೆಗಳನ್ನು ಬರೆದರು. ಅವರ ಮಾರ್ಗದರ್ಶನದಲ್ಲಿ ನಾಡು ನುಡಿ ಉಳಿವಿಗೆ ಶ್ರಮಿಸಿದರೆ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು’ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ನ ರಾಜ್ಯ ಸಂಚಾಲಕ ಡಾಕ್ಟರ್ ಎಂ ಜಿ ಆರ್ ಅರಸ್
ಮಿಂಚಿನ ಸಂಚಾರ: ‘ಬೇಂದ್ರೆ ಎಂದೊಡನೆ ಸಹಸ್ರ ತಂತಿಯ ವೀಣೆ ನುಡಿಸಿದಂತಾಗುತ್ತದೆ. ಮೈಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ರೀತಿಯಲ್ಲಿ ಕಾವ್ಯ ರಚಿಸಿ ಸಾಹಿತ್ಯ ಬೆಳೆಸುವಲ್ಲಿ ಬೇಂದ್ರೆ ಮೊದಲಿಗರಾಗಿದ್ದಾರೆ’ ಎಂದು ಹೇಳಿದರು .
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ
ಕನ್ನಡ ಹೋರಾಟಗಾರ
‘ದೇಶ ಭಕ್ತರಾಗಿದ್ದ ಬೇಂದ್ರೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲ ಕಾಲ ಸೆರೆವಾಸ ಸಹ ಅನುಭವಿಸಿದ್ದರು. ಅವರು ಕನ್ನಡದ ಜತೆಗೆ ಮರಾಠಿ ಭಾಷೆಯಲ್ಲೂ ಕೃತಿಗಳನ್ನು ರಚಿಸಿದ್ದರು. ಎಂದು ಹೇಳಿದರು .
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ , ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ,ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು
ಡಾ.ವೈ ಡಿ ರಾಜಣ್ಣ, ಚಂದ್ರಶೇಖರ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ರಾಜ್ಯ ಸಂಚಾಲಕರು ಡಾ.ಎಂ .ಜಿ.ಆರ್ ಅರಸ್ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ , ಗೋಲ್ಡ್ ಸುರೇಶ್,ವಿದ್ಯಾರಣ್ಯ ಸಂಸ್ಥೆಯ ರವಿಶಂಕರ್,ಜೀವದರ ಗಿರೀಶ್,ವಿನಯ್ ಕಣಗಾಲ್ ,ಸುಚೇಂದ್ರ ,ಪುರುಷೋತ್ತಮ್ ,ಮಹೇಂದ್ರ ಎಂ ಶೈವಾ,ಚಕ್ರಪಾಣಿ ,ನವೀನ್ ಕೆಂಪಿ ,ವೆಂಕಟೇಶ್ವರ ವರ್ಕೇಡಿ ,ಹಾಗೂ ಇನ್ನಿತರರು ಹಾಜರಿದ್ದರು