ಲೋಕಸಭಾ ಚುನಾವಣೆ 2024 ಘೋಷಣೆ ಕರ್ನಾಟಕದಲ್ಲಿ 2ನೇ ಹಂತದಲ್ಲಿ ಚುನಾವಣೆ

ನಂದಿನಿ ಮೈಸೂರು

ನವದೆಹಲಿ:ಏ. 1ಕ್ಕೆ 18 ವರ್ಷ ತುಂಬಿದವರಿಗೆ ಮತದಾನಕ್ಕೆ ಅವಕಾಶ ಹಾಗೂ 85ವರ್ಷ ದಾಟಿದ ಮತದಾರರಿಗೆ ಮನೆಯಿಂದಲೇ ಮತದಾನ ಕ್ಕೆ ಅವಕಾಶ ಕಲ್ಪಸಲಾಗಿದೆ.ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ತಿಳಿಸಿದರು.

ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 85ವರ್ಷ ದಾಟಿದ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಸಲಾಗಿದೆ ಎಂದರು.
ಈ ಬಾರಿ 97 ಕೋಟಿ ಮತದಾರರಿದ್ದು ಇದರಲ್ಲಿ 49 ಕೋಟಿ ಪುರುಷರು, 47.15 ಕೋಟಿ ಮಹಿಳಾ ಮತದಾರರಿದ್ದಾರೆ. 18-19 ವರ್ಷದೊಳಗಿನವರು ಒಟ್ಟಿ 1.82 ಕೋಟಿ ಮತದಾರರಿದ್ದು ಅದರಲ್ಲಿ 85 ಲಕ್ಷ ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 1.98 ಕೋಟಿ ಮತದಾರರು. 88 ಲಕ್ಷ ವಿಶೇಷಚೇತನರು, 2.18 ಶತಾಯುಷಿ ಮತದಾರರಿದ್ದಾರೆ.
ತೃತೀಯ ಲಿಂಗಿಯರು 48 ಸಾವಿರ ಜನರಿದ್ದಾರೆ.
10.5 ಲಕ್ಷ ಮತಗಟ್ಟೆಗಳಲ್ಲಿ 55 ಲಕ್ಷ ಇವಿಎಂ ಬಳಕೆ ಮಾಡಲಾಗುತ್ತಿದೆ. ಒಟ್ಟು 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.2100 ವೀಕ್ಷಕರ ನೇಮಕ.
543 ಲೋಕಸಭಾ ಕ್ಷೇತ್ರದಲ್ಲಿ 7 ಹಂತಗಳಲ್ಲಿ ಲೋಕಸಭಾ ಚುನಾವಣಾ ನಡೆಯಲ್ಲಿದೆ.

ಇಂದಿನಿಂದ ಚುನಾವಣಾ ನೀತಿ ಸಂಹಿತೆ ಜಾರಿ.

ಏ.19ರಂದು ಮೊದಲ ಹಂತದ ಮತದಾನ.

ಏ.26 ರಂದು ಕರ್ನಾಟಕದಲ್ಲಿ 28 ಲೋಕಸಭಾ ಚುನಾವಣೆ ಎರಡನೇ ಹಂತದಲ್ಲಿ ನಡೆಯಲಿದೆ.

ಮೂರನೇ ಹಂತ ಮೇ.7

ಮೇ.13 4ನೇ ಹಂತ

ಮೇ.20 5ನೇ ಹಂತ

ಮೇ.25 6ನೇ ಹಂತ

ಜೂನ್ 1 ಏಳನೇ ಹಂತ

ಜೂನ್ 4 ಲೋಕಸಭಾ ಫಲಿತಾಂಶ ಪ್ರಕಟ.

ಕರ್ನಾಟಕದಲ್ಲಿ
26 ಕ್ಷೇತ್ರದಲ್ಲಿ ಉಪಚುನಾವಣೆ.

ಪ್ರಚೋಧನಾಕಾರಿ ಭಾಷಣ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *