124 Views
ಬಾರ್ಸಿಲೋನಾ: ಅರ್ಜೆಂಟಿನಾದ ಹಿರಿಯ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ, ಬಾರ್ಸಿಲೋನಾ ತಂಡವನ್ನು ತೊರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಕಣ್ಣೀರುಡುತ್ತಲೇ ಈ ವಿಷಯವನ್ನು ತಿಳಿಸಿದರು.
34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಿಂದ ಬಾರ್ಸಿಲೋನಾ ತಂಡದ ಭಾಗವಾಗಿದ್ದು, ದಾಖಲೆಯ 682 ಗೋಲುಗಳನ್ನು ಗಳಿಸಿದ್ದಾರೆ. ಬಾರ್ಸಿಲೋನಾ ಎಫ್‌ಸಿ ತಂಡದ ಯಶಸ್ಸಿನಲ್ಲಿ ಮೆಸ್ಸಿ ಮಹತ್ವದ ಪಾತ್ರವನ್ನು ವಹಿಸಿದ್ದರು. ‘ನಾನು ಅತೀವ ವಿನಯ ಹಾಗೂ ಗೌರವದಿಂದ ವರ್ತಿಸಲು ಪ್ರಯತ್ನಿಸಿದ್ದೇನೆ. ಬಾರ್ಸಿಲೋನಾ ತಂಡವನ್ನು ತೊರೆಯುವಾಗ ಇದೊಂದೇ ನನ್ನ ಬಳಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.
