ನಾಗರಹೊಳೆಯಲ್ಲಿ ವ್ಯಾಘ್ರ ಕಾಳಗ, ಸಫಾರಿಗೆ ತೆರಳಿದ್ದವರು ದಿಲ್ ಖುಷ್

 

ಹುಣಸೂರು:9 ಆಗಸ್ಟ್ 2021

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಉತ್ತಮ ಮಳೆಯಾಗಿದ್ದು. ವನ್ಯಪ್ರಾಣಿಗಳು ಸ್ವಚ್ಚಂದವಾಗಿ ವಿಹರಿಸುತ್ತಿವೆ. ಸೋಮವಾರದಂದು ಸಫಾರಿಗೆ ತೆರಳಿದ್ದವರು ಕುಂತೂರು ಕೆರೆ ಬಳಿ ಎರಡು ವ್ಯಾಘ್ರಗಳ ಕಾಳಗವನ್ನು ಜೆಎಲ್‌ಆರ್ ವಾಹನದಲ್ಲಿ ಸಫಾರಿಗೆ ತೆರಳಿದ್ದವರು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದಾರೆ.

ನಾಗರಹೊಳೆ ಉದ್ಯಾನವದ ಅಧಿಕಾರಿಗಳು ಹಾಗೂ ಇಲ್ಲಿನ ಸಿಬ್ಬಂದಿಗಳು ಅರಣ್ಯವನ್ನು ಜತನದಿಂದ ಕಾಪಾಡಿದ್ದರಿಂದಾಗಿ ಜೊತೆಗೆ ೬೪೩ ಚ.ಕಿ.ಮೀ.ವಿಸ್ತೀರ್ಣವಿದ್ದ ನಾಗರಹೊಳೆ ವನ್ಯಜೀವಿ ವಲಯಕ್ಕೆ ೨೦೦ ಚ.ಕಿ.ಮೀ ಬಫರ್ ಜೋನ್ ಸೇರ್ಪಡೆಗೊಂಡಿದ್ದರಿಂದಾಗಿ ಹಲವಾರು ಸಸ್ಯ ಪ್ರಬೇಧಗಳು, ಸಸ್ಯನಿಗಳು, ಉರಗ ಜೊತೆಗೆ ವನ್ಯಪ್ರಾಣಿಗಳ ಆವಾಸ ಸ್ಥಾನ, ಸ್ವಚ್ಚಂದ ವಿಹಾರಕ್ಕೆ ಹೇಳಿ ಮಾಡಿಸಿದ ಪ್ರಾಶಸ್ಯ ತಾಣವಾಗಿದ್ದು, ಇತ್ತೀಚಿನ ವನ್ಯಪ್ರಾಣಿಗಳ ಸಂತತಿಯೂ ಗಣನೀಯವಾಗಿ ಏರಿಕೆ ಕಂಡಿರುವುದು ಅರಣ್ಯದೊಳಗೆ ಹುಲಿ ಕಾಳಗವು ಸಾಧರಪಡಿಸಿದೆ.

ಕಳೆದೊಂದು ವರ್ಷದಿಂದ ಆಗಾಗ್ಗೆ ಲಾಕ್‌ಡೌನ್ ವೇಳೆ ಅರಣ್ಯದೊಳಗೆ ಸಫಾರಿ ಬಂದ್ ಮಾಡಿದ್ದರಿಂದಾಗಿ ಜೊತೆಗೆ ಉತ್ತಮ ಮಳೆಯಾಗಿದ್ದು, ಅರಣ್ಯದಲ್ಲಿ ಗಿಡಮರಗಳು ಸಮೃದ್ದವಾಗಿ ಬೆಳೆದಿದ್ದರಿಂದ ವನ್ಯಪ್ರಾಣಿಗಳು ಸ್ವಚ್ಚಂದವಾಗಿ ವಿಹರಿಸುತ್ತಿವೆ.

ಸಫಾರಿಗರ ದಿಲ್ ಖುಷ್:

ಕೆಲ ದಿನಗಳ ಹಿಂದೆ ಸಫಾರಿಗೆ ತೆರಳಿದ್ದ ವನ್ಯಪ್ರೀಯರು ಹುಲಿ-ಕಪ್ಪು ಚಿರತೆಯ ಸಮಾಗಮವನ್ನು ಕಣ್ತುಂಬಿಕೊಂಡಿದ್ದರು. ಆನೆ, ಕರಡಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು. ಇದೀಗ ಕುಂತೂರು ಕೆರೆ ರಸ್ತೆಯಲ್ಲಿ ಎರಡು ವ್ಯಾಘ್ರಗಳ ಕಾಳಗ ಕಂಡು ಒಂದು ಕ್ಷಣ ಎದೆ ಜಲ್ ಎನಿಸಿದರೂ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ದಿಲ್ ಖುಷ್ ಆಗಿ ಹಿಂತಿರುಗಿದ್ದಾರೆ.

Leave a Reply

Your email address will not be published. Required fields are marked *