ಆ.26 ರಂದು ಲಿಂಗಾಯತ ಪಂಚಮಸಾಲಿಗೆ 2A ಮೀಸಲಾತಿಗೆ ಒತ್ತಾಯಿಸಿ ಪ್ರತಿಜ್ಞಾ ಪಂಚಾಯತ್ ಘೋಷವಾಕ್ಯದೊಂದಿಗೆ ಬೃಹತ್ ಅಭಿಯಾನ

 

ಮೈಸೂರು:23 ಆಗಸ್ಟ್ 2021

ನ@ದಿನಿ

ಲಿಂಗಾಯತ ಪಂಚಮಸಾಲಿಗೆ 2A ಮೀಸಲಾತಿ ಬೇಡಿಕೆ ಈಡೇರಿಸುವಂತೆ ಪ್ರತಿಜ್ಞಾ ಪಂಚಾಯತ್ ಘೋಷವಾಕ್ಯದೊಂದಿಗೆ ಬೃಹತ್ ಅಭಿಯಾನ ಆರಂಭವಾಗುತ್ತಿದೆ ಎಂದು ಮೈಸೂರಿನಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ.
ಹಾಗಾಗಿ ಸರ್ಕಾರಕ್ಕೆ ಎಚ್ಚರಿಸಲು ಆಗಸ್ಟ್ 26 ರಂದು ಶ್ರೀ ಮಲೆಮಹದೇಶ್ವರ ಬೆಟ್ಟದಿಂದ ಪ್ರತಿಜ್ಞಾ ಪಂಚಾಯತ್ ಅಭಿಯಾನ ಉದ್ಘಾಟನೆಗೊಳ್ಳಲಿದೆ.
ಈ ಪ್ರತಿಜ್ಞೆಯ ಉದ್ದೇಶ ಯಾವುದೇ ಕಾರಣಕ್ಕು ಹೋರಾಟದಿಂದ ಹಿಂದೆ ಸರಿಯದಿರೋದು.ಇದನ್ನ ಯುವಕರನ್ನ ಹೆಚ್ಚಾಗಿ ಇದರಲ್ಲಿ ಅಳವಡಿಸಿಕೊಳ್ಳುತ್ತೇವೆ.
ಯಾವುದೇ ಕಾರಣಕ್ಕು ಈ ಕಮಿಟ್ಮೆಂಟ್‌ನಿಂದ ಹೊರಗೆ ಬರಬಾರದು.ಆ ರೀತಿ ಈ ಪ್ರತಿಜ್ಞೆಯನ್ನ ತೆಗೆದುಕೊಳ್ಳುತ್ತೇವೆ.
ನಮ್ಮಲ್ಲಿ ಬರೋಬ್ಬರಿ 80 ಲಕ್ಷದಷ್ಟು ಹಿಂದೂಳಿದ ವರ್ಗದವರಿದ್ದಾರೆ.ನಮಗೆ 3A ಕೊಟ್ಟಿದ್ದಾರೆ, ನಮಗೆ 2A ಕೊಡಲೇಬೇಕು.
ಸರ್ಕಾರ ನಮ್ಮ ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತ, ಪಂಚಮಸಾಲಿ.ಹೀಗೆ ಅನೇಕ‌ ಸಮಾಜ ಒಗ್ಗೂಡಿ ಎಲ್ಲರಿಗು 2A ಮೀಸಲಾತಿ‌ ಕೊಡಬೇಕು.
ಈಗಾಗಲೇ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ.ಇದು ಮತ್ತೊಮ್ಮೆ ನಡೆಯದಂತೆ ಸರ್ಕಾರ‌ ನಡೆದುಕೊಳ್ಳುವ ವಿಶ್ವಾಸ ಇದೆ.
ಈ ಹಿಂದೆ ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.
ಆದರೆ ಇಂದು ಅವರೇ ಸಿಎಂ ಆಗಿದ್ದಾರೆ.
ಅವರು ನಮಗೆ 2A ಮೀಸಲಾತಿ ಕೊಡುವ ವಿಶ್ವಾಸ ಇದೆ.
ಸುಪ್ರೀಂ ಕೋರ್ಟ್ ಅನ್ವಯ ಮೀಸಲಾತಿ ಶೇ.50 ಮೀರಬಾರದು.50ರೋಳಗೆ ನಮಗೆ ಮೀಸಲಾತಿ ಕಲ್ಪಿಸಿಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *