ನಂದಿನಿ ಮೈಸೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿ ಬಯೋಪಿಕ್ ಸಿನಿಮಾ ಶೀಘ್ರದಲ್ಲೇ ಸೆಟ್ಟೆರಲಿದೆ.
ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ರಾಮನವಮಿ ದಿನವಾದ ಇಂದು ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.ಸಿನಿಮಾದ ಹೆಸರು “ಲೀಡರ್ ರಾಮಯ್ಯ”. ಸತ್ಯಂ ರತ್ನಂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಹಯಾತ್ ಪೀರ್ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ಸಾರೆ.ಬರೋಬರಿ 50 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನಿಮಾದಲ್ಲಿ ಲವ್ ಸ್ಟೋರಿ ಕೂಡ ಇರಲಿದೆ.ಕನ್ನಡ, ತಮಿಳು ತೆಲಗು ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದೆ.ವಿಜಯ್ ಸೇತುಪತಿ ಸಿದ್ದರಾಮಯ್ಯ ಅವರ ರೋಲ್ ನಲ್ಲಿ ನಟಿಸಲಿದ್ದಾರೆ.ಒಟ್ಟಾರೆ ಹೇಳೋದಾದರೇ ಸಿದ್ದರಾಮಯ್ಯ ರವರ ಚಿತ್ರದ ಬಗ್ಗೆ ಜನರಲ್ಲಿ ಬಾರೀ ಕುತೂಹಲ ಮೂಡಿದೆ.