ನಂದಿನಿ ಮೈಸೂರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ವಿಭಾಗದ ವತಿಯಿಂದ ಬನ್ನಿ ಮಂಟಪದ ವಿಭಾಗಿಯ ಕಾರ್ಯಗಾರದ ಮುಂದೆ ಶ್ರೀ ಶಿವಕುಮಾರ ಸ್ವಾಮಿಗಳ 116ನೇ ಜಯಂತೋತ್ಸವ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಜಪದಕಟ್ಟೆ ಮಠ ಮೈಸೂರು ರವರು ವಹಿಸಿದ್ದರು. ಶ್ರೀ ಸಿ ಪಿ ರಾಮಶೇಷ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು ಅಧ್ಯಕ್ಷತೆಯನ್ನು ಶ್ರೀ ಮರಿಗೌಡ ಪ್ರಭಾರ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಅತಿಥಿಗಳಾಗಿ ಶ್ರೀ ಚಂದ್ರಪ್ಪ ವಿಭಾಗೀಯ ಯಾಂತ್ರಿಕ ಅಭಿಯಂತರರು ಮತ್ತು ಅಖಿಲ ಭಾರತ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷರಾದ ಟಿ ಲಿಂಗರಾಜುರವರು ಮತ್ತು ಕೆಎಸ್ಆರ್ಟಿಸಿ ವೀರಶೈವ ಲಿಂಗಾಯತ ನೌಕರರ ಸಂಘದ ಗೌರವ ಅಧ್ಯಕ್ಷರಾದ ಸಿಡಿ ಬಸವರಾಜ್ ರವರು ಮತ್ತು ಕೆಎಸ್ಆರ್ಟಿಸಿಯ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ನೌಕರರು ಮತ್ತು ಮಹಿಳೆಯರು ಭಾಗವಹಿಸಿದ್ದರು.