ನಂದಿನಿ ಮೈಸೂರು
ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಪರಭಾಷೆಯ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುವ ಟ್ರೆಂಡ್ ಕೂಡ ಹೆಚ್ಚಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ತಮ್ಮ ಆ್ಯಕ್ಷನ್ ಮಾಸ್ ಸಿನಿಮಾಗಳ ಮೂಲಕ ನಟ ವಿಶಾಲ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಅಭಿನಯಿಸಿರುವ ಆ್ಯಕ್ಷನ್ ಕಥೆ ಆಧರಿಸಿರುವ ಲಾಠಿ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೂ ಬಿಡುಗಡೆ ಆಗುತ್ತಿದೆ.
ಹೌದು ಇಂದು ಮೈಸೂರಿಗೆ ಆಗಮಿಸಿದ ನಟ ವಿಶಾಲ್ ಲಾಠಿ ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಹಂಚಿಕೊಂಡರು. ಮೊದಲಿಗೆ ಕನ್ನಡದಲ್ಲಿ ಮಾತು ಆರಂಭಿಸಿದ ವಿಶಾಲ್ ನನಗೆ ಕನ್ನಡ ಭಾಷೆ ಅಂದರೇ ತುಂಬ ಇಷ್ಟ.ನಾನು ಕನ್ನಡದಲ್ಲಿ ಸ್ವಲ್ಪ ಸ್ವಲ್ಪ ಮಾತನಾಡಲು ಬಯಸುತ್ತೇನೆ.
ಲಾಠಿ ಸಿನಿಮಾ ಕನ್ನಡ, ತೆಲಗು ,ತಮಿಳು,ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿದ್ದು ಇದೆ ಡಿ.22 ರಂದು ಬಿಡುಗಡೆಯಾಗಲಿದೆ.ಎ.ವಿನೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ.ನಾಯಕಿಯಾಗಿ ಸುಸೈನಾ ನಟಿಸಿದ್ದಾರೆ.ಎಲ್ಲರೂ ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದರು.
ನಾನು ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ನೋಡಿದ್ದೇನೆ.ತುಂಬ ಚನ್ನಾಗಿದೆ.
ಕನ್ನಡದಲ್ಲಿ ಕೆಜಿಎಫ್ ನಂತರ ಕಾಂತಾರ ಹೆಚ್ಚು ಸದ್ದು ಮಾಡಿತು. ನನ್ನ ತಂದೆಗೆ ನಾನು ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ಆಸೆ ಇದೆ.ಸಮಯ ಬರಬೇಕಿದೆ.2023 ಕ್ಕೆ ಸಾಧ್ಯವಾಗುವುದಿಲ್ಲ.
2024 ರ ನಂತರ ಅದು ಸಾಧ್ಯವಾಗಬಹುದು ಎಂದರು.
ಹೊಟ್ಟೆ ತುಂಬಿದಾಗ ನಾವು ಮತ್ತೆ ಏನನ್ನೂ ತಿನ್ನೋಕೆ ಆಗಲ್ಲ.ಶಕ್ತಿಧಾಮಕ್ಕೆ ಯಾವ ಸಹಾಯ ಅಗತ್ಯವಿದೆ ಅದನ್ನು ನಾನು ಕೊಡಲು ಸಿದ್ದ.ಪುನೀತ್ ರಾಜ್ ಕುಮಾರ್ ಕುಟುಂಬದವರಿಂದ ಯಾವುದೇ ಅನುಮತಿ ಸಿಕ್ಕಿಲ್ಲ ಎಂದರು.