ನಂದಿನಿ ಮೈಸೂರು
ಬಹುನಿರೀಕ್ಷಿತ ಟೆಂಪರ್ ಚಿತ್ರಕ್ಕೆ ಅಭಿಮಾನಿಗಳು ಜೈ ಎಂದಿದ್ದಾರೆ.
ಶ್ರೀ ಬಾಲಾಜಿ ಎಂಟರ್ಪ್ರೈಸ್ ಬ್ಯಾನರ್ ನಡಿಯಲ್ಲಿ ವಿನೋದ್ ಕುಮಾರ್ ಹಾಗೂ ಮೋಹನ್ ಬಾಬು ನಿರ್ಮಾಣದ ಮಂಜು ಕವಿ ನಿರ್ದೇಶನದ
ಟೆಂಪರ್ ಚಿತ್ರ ಇಂದು ರಾಜ್ಯದಾಧ್ಯಂತ ಬಿಡುಗಡೆಯಾಗಿದ್ದು ಎಲ್ಲಾ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.
ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಮೊದಲ ಶೋ ಪ್ರದರ್ಶನಗೊಂಡಿದ್ದು ಟೆಂಪರ್ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯತ್ರಿ ಚಿತ್ರಮಂದಿರಕ್ಕೆ ಆಗಮಿಸಿದ ಪ್ರೇಕ್ಷಕರಿಗೆ ಟೆಂಪರ್ ಚಿತ್ರತಂಡ ಸಿಹಿ ಹಂಚಿದರು. ಅದಕ್ಕೂ ಮುನ್ನ ಗಾಯತ್ರಿ ಚಿತ್ರ ಮಂದಿರದ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಬಾಲನಟನಾಗಿ ಪವನ್ ಮೋರೆ, ಚಿತ್ರದ ನಾಯಕ ನಟನಾಗಿ ಆರ್ಯನ್ ಸೂರ್ಯ ,ನಾಯಕಿಯಾಗಿ ಕಾಶಿಮಾ ತೆರೆ ಮೇಲೆ ಮಿಂಚಿದ್ದಾರೆ.ಪವನ್ ಮೋರೆ ,ಆರ್ಯನ್ ಸೂರ್ಯ ಹೊಸ ಪ್ರತಿಭೆಯಾಗಿದ್ದರೂ ತುಂಬ ಅದ್ಭುತವಾಗಿ ನಟಿಸಿದ್ದಾರೆ.ಅಪ್ಪ,ಅಮ್ಮ, ಪ್ರೀತಿ, ಸ್ನೇಹ ಕುರಿತ ಸಿನಿಮಾವಾಗಿದೆ.ರೈತರ ಮಕ್ಕಳು,ಬಡವರ ಮಕ್ಕಳು,ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಎಂದ ಅಭಿಮಾನಿಗಳು ಚಿತ್ರಕ್ಕೆ ಶುಭಹಾರೈಸಿದರು.