ನಂದಿನಿ ಮೈಸೂರು
ಆಷಾಢ ಬಂತೆಂದರೆ ಮೈಸೂರಿನಲ್ಲೆಡೆ ಹಬ್ಬದ ವಾತಾವರಣ. ಅದರಲ್ಲೂ ಆಷಾಢ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಗೊಂಡ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ. ಲಕ್ಷಾಂತರ ಜನರು ದೇವಿಯ ದರ್ಶನ ಪಡೆಯಲು ದೂರದೂರುಗಳಿಂದ ಆಗಮಿಸುತ್ತಾರೆ.
ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ಎಲ್ಲಾ ದಿನಗಳಲ್ಲೂ ತಾಯಿ ಚಾಮುಂಡೇಶ್ವರಿಗೆ ಪೂಜೆ ನಡೆಯುತ್ತವೆಯಾದರೂ ಶುಕ್ರವಾರ ಶುಭವಾಗಿರುವುದರಿಂದ ಅಂದು ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ, ಅಲಂಕಾರಗಳು ನೆರವೇರಲಿದೆ. ಈ ದಿನ ಚಾಮುಂಡೇಶ್ವರಿಯ ದರ್ಶನ ಮಾಡಿದರೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆಯಿದೆ. ಹಾಗೂ ಆಕೆಯ ದರ್ಶನದಿಂದ ಜೀವನ ಪಾವನವಾಗುವುದು ಎನ್ನುವ ನಂಬಿಕೆಯಿದೆ.
ಪ್ರತಿಯೊಂದು ಆಷಾಢ ಶುಕ್ರವಾರದಲ್ಲೂ ದೇವತೆಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅದರಲ್ಲೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಗೊಂಡ ಚಾಮುಂಡೇಶ್ವರಿಗೆ ಪೂಜೆಯು ಅದ್ದೂರಿಯಾಗಿ ನಡೆಯುತ್ತದೆ. ಆಷಾಢ ಶುಕ್ರವಾರದಲ್ಲಿ ದುರ್ಗಾ ದೇವಿಯ ದರ್ಶನವನ್ನು ಪಡೆದುಕೊಳ್ಳಲು ದೂರದೂರಿನಿಂದ ಲಕ್ಷಾಂತರ ಜನರು ಹರಿದು ಬರುತ್ತಾರೆ. ಈ ಸಮಯದಲ್ಲಿ ಭಕ್ತರಿಗೆ ಸುಲಭವಾಗಲೆಂದು ಮೈಸೂರು ಜಿಲ್ಲಾಡಳಿತ, ದೇವಸ್ಥಾನದ ಸೇವಾ ಸಮಿತಿ ವಿವಿಧ ಸೌಲಭ್ಯಗಳನ್ನು ಒದಗಿಸಿದೆ.
ತಾಯಿಯ ದರ್ಶನಕ್ಕೆ ಬಂದ ಭಕ್ತರಿಗೆ ಧರ್ಮ ದರ್ಶನ,ಟಿಕೇಟ್ ವ್ಯವಸ್ಥೆ ಮೂಲಕ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ಬೆಟ್ಟಕ್ಕೆ
ಖಾಸಗೀ ವಾಹನಗಳಿಗೆ ನಿರ್ಬಂಧ ಏರಲಾಗಿತ್ತು.ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ಉಚಿತ ಬಸ್ ವ್ಯವಸ್ಥೆ ಕಲ್ಲಿಸಲಾಗಿತ್ತು.ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಭಕ್ತರಿಗೆ ಪ್ರಸಾದ, ಊಟ ವಿತರಿಸಲಾಯಿತು.