ಮಾಜಿ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಶ್ರೀರಾಂಪುರ ವಿವೇಕ ಶಾಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ

 

ಮೈಸೂರು:9 ಆಗಸ್ಟ್ 2021

ನ@ದಿನಿ

ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಶ್ರೀರಾಂಪುರದ ವಿವೇಕ ಶಾಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ  ಕೋವಿಶೀಲ್ಡ್ ಮೊದಲನೇ ಮತ್ತು ಎರಡನೇ ಡೋಸ್ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀರಾಂಪುರದ ಭ್ರಮರಾಂಭ ಕಲ್ಯಾಣ ಮಂಟಪದ ಹಿಂಭಾಗದ ಶ್ರೀ ವಿವೇಕ ವಿದ್ಯಾಲಯದ ಆವರಣದಲ್ಲಿ ಮಾಜಿ ಶಾಸಕ ಎಂ ಕೆ ಸೋಮಶೇಖರ್ ರವರು ಅಭಿಯಾನಕ್ಕೆ ಚಾಲನೆ ನೀಡಿದರು.ಸಂಜೆ 5 ಗಂಟೆಯವರಗೆ ಲಸಿಕಾ ಅಭಿಯಾನ ಇರಲಿದೆ.ನಾಗರೀಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವಮುಖಂಡ ನವೀನ್ ಕುಮಾರ್,ರೂಪೇಶ್,ಗುಣಶೇಖರ್ ,ಶಿವಪುರ ಬಸವರಾಜು,ಆನಂದ್,ಕೆ ಬ್ಲಾಕ್ ಪಾಪು ಸುರೇಶ್,ರಂಜನ್,ಪುನೀತ್ ಮಾರುತಿ,ಮಹೇಂದ್ರ,ನಾಗದೇವ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *