ಹುಣಸೂರು:6 ಸೆಪ್ಟೆಂಬರ್ 2021
ದಾ ರಾ ಮಹೇಶ್
ಲಾರಿಯೊಂದು ಮೋಟಾರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹೊತ್ತಿ ಉರಿದಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕಲ್ಲಬೆಟ್ಟ ಜಂಕ್ಷನ್ ಬಳಿ
ನಡೆದಿದೆ.
ಕೆಎ 45 ಎಂ 9971 ಈ ಲಾರಿ ಸಂಖ್ಯೆ
ಪಿರಿಯಪಟ್ಟಣದ ರಮೇಶ್ ರವರಿಗೆ ಸೇರಿದೆ ಎನ್ನಲಾಗಿದೆ. ದ್ವಿಚಕ್ರ ವಾಹನಕ್ಕೆ ಬೆಂಕಿ ತಗುಲಿ ಬೈಕ್ ಸಂಪೂರ್ಣ ಉರಿದು ಕರಕಲಾಗಿದೆ. ಬೈಕ್ ಸವಾರ ಮಾರ್ಗ ಮಧ್ಯೆ ಅಸುನೀಗಿದ್ದಾನೆ.ಬೆಂಕಿಗೆ ಆಹುತಿಯಾಗಿರುವ ದ್ವಿಚಕ್ರ ವಾಹನದ ನಂಬರ್ ಸಹ ಕಾಣುತ್ತಿಲ್ಲ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಪರಿಶೀಲನೆ ನಡೆಸಿದ್ದಾರೆ.ತದನಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.