ಕುಶಾಲತೋಪಿಗೆ ಬೆಚ್ಚಿದ ಗಜಪಡೆ

 

ಮೈಸೂರು:-5 ಅಕ್ಟೋಬರ್ 2021

ನ@ದಿನಿ

                          ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.7ರಂದು ಬೆಳಿಗ್ಗೆ ಚಾಲನೆ ಸಿಗಲಿದ್ದು, ಇಂದು ಫಿರಂಗಿ ಗಾಡಿಗಳಿಂದ ಕುಶಾಲತೋಪುಗಳನ್ನು ಸಿಡಿಸುವ 2ನೇ ಹಂತದ ತಾಲೀಮು ನಡೆಯಿತು.

 

                          ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆದಿದೆ. ಸೆಪ್ಟೆಂಬರ್ 30ರಂದು ಮೊದಲ ತಾಲೀಮನ್ನು ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ನಡೆಸಿದ್ದರು. ಇಂದು ಕೂಡ ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಿತು. ಇಂದೂ ಸಹ 7 ಫಿರಂಗಿ ಗಾಡಿಗಳಿಂದ 21 ಕುಶಾಲತೋಪುಗಳನ್ನು ಸಿ ಎ ಆರ್ ಸಿಬ್ಬಂದಿಗಳು ಸಿಡಿಸಿದರು. ಕುಶಾಲತೋಪುಗಳನ್ನು ಸಿಡಿಸುವ 2ನೇ ಹಂತದ ಇಂದಿನ ತಾಲೀಮು ಯಶಸ್ವಿಯಾಗಿದೆ. ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಒಟ್ಟು ಮೂರು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ. ಇದುವರೆಗೂ ಎರಡು ಬಾರಿ ತಾಲೀಮು ನಡೆದಿದೆ. ಮತ್ತೊಂದು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದ್ದು, ಆನೆಗಳು, ಅಶ್ವಗಳು ಬೆದರದಂತೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ದತೆ ನಡೆಸಲಾಗಿದೆ.

                          ಎರಡನೇ ಹಂತದ ಕುಶಾಲತೋಪು      ತಾಲೀಮಿನಲ್ಲೂ ಮೂರು ಆನೆಗಳು ಬೆದರಿವೆ. ಧನಂಜಯ, ಗೋಪಾಸ್ವಾಮಿ,ಅಶ್ವತ್ಥಾಮ ಆನೆಗಳು ಬೆದರಿವೆ. ಕಳೆದ ಬಾರಿ ಕಾಲಿಗೆ ಚೈನನ್ನು ಕಟ್ಟಲಾಗಿತ್ತು. ಆದರೆ ಈ ಬಾರಿ ಚೈನನ್ನು ಕಟ್ಟಿರಲಿಲ್ಲ. ಕಳೆದ ಬಾರಿಗಿಂತ ಈ ಬಾರಿ ಆನೆಗಳು ಧೈರ್ಯವಾಗಿವೆ. ಮುಂದಿನ ತಾಲೀಮಿನವರೆಗೆ ಸಂಪೂರ್ಣ ಧೈರ್ಯ ಬರಲಿದೆ. ವಿಕ್ರಮ್ ಆನೆ ಮದದಲ್ಲಿದೆ ಹಾಗಾಗಿ ಈ ಬಾರಿ ತಾಲೀಮಿನಲ್ಲಿ ಭಾಗಿಯಾಗಿಲ್ಲ. ವಿಕ್ರಮ್ ಆನೆಗೆ ಮದ ಇಳಿಯದಿದ್ದರೆ ಪಟ್ಟದ ಆನೆಗೆ ಪರ್ಯಾಯ ಆಯ್ಕೆ ಮಾಡಲಾಗುತ್ತೆ. ಧನಂಜಯ, ಗೋಪಾಲಸ್ವಾಮಿ ಆನೆಗಳು ಪರ್ಯಾಯವಾಗಿವೆ. ನೋಡಿಕೊಂಡು ಪಟ್ಟದ ಆನೆಯನ್ನು ನಿರ್ಧಾರ ಮಾಡಲಾಗುತ್ತದೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

Leave a Reply

Your email address will not be published. Required fields are marked *