ನಂದಿನಿ ಮೈಸೂರು
ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡಿ ಪತ್ರಿಕಾ ಬಳಗ ಮೈಸೂರು,ಸ್ನೇಹ ಸಿಂಚನ್ ಟ್ರಸ್ಟ್ ,ಗಜಾನನ ಈಶ್ವರ ಹೆಗಡೆ ಅವರ ಗೀತರೂಪಕ ಪದ್ಮಿನಿ ಹೆಗಡೆ ಅವರ ಅರಿವಿನ ಕಡಲು ಸರ್ವಜ್ಞ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ನಮನ ಕಲಾ ಮಂಟಪದಲ್ಲಿ ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಹೆಚ್.ಗೌಡ ಹಾಗೂ ಕೋಶಾಧ್ಯಕ್ಷರಾದ ಎನ್.ಆರ್.ಹೆಗಡೆ ಸೇರಿದಂತೆ
ವೇದಿಕೆಯ ಗಣ್ಯರು ಕೃತಿ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ಶಾಂತಿ ನಾಯಕ್,ಮೈಸೂರು ಕ.ಸಾ.ಪ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್,ಜನಪದ ತಜ್ಞರಾದ ಡಾ.ಎನ್.ಆರ್.ನಾಯಕ,ಮೊರಬದ ಮಲ್ಲಿಕಾರ್ಜುನ, ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷರಾದ ರಂಗನಾಥ್ ಮೈಸೂರು, ಸ್ನೇಹ ಸಿಂಚನ ಟ್ರಸ್ಟ್ ಅಧ್ಯಕ್ಷರಾದ ಮ.ನ.ಲತಾಮೋಹನ್,ಲಕ್ಷ್ಮಿ ರಾಮಚಂದ್ರರಾವ್ ಸೇರಿದಂತೆ ಇತರರು ಭಾಗಿಯಾಗಿದ್ದರು.