ವಿವಿಧ ಕ್ಷೇತ್ರದ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರಶಸ್ತಿ ಪ್ರದಾನ

 

ಮೈಸೂರು:31 ಆಗಸ್ಟ್ 2021

ನ@ದಿನಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಹಿನ್ನಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ಕನ್ನಡ ವೇದಿಕೆ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಸಂಗೊಳ್ಳಿ ರಾಯಣ್ಣ ನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಸಂಘಟನೆಗಾಗಿ ಡಾ. ಎಂ ಮಹೇಶ್ ಚಿಕ್ಕಲೂರು
ಸಾಹಿತ್ಯ ಕ್ಷೇತ್ರದಿಂದ ಚಿಕ್ಕಣ್ಣ ಡಿಪಿ ,ಮಾಧ್ಯಮ ಕ್ಷೇತ್ರದಿಂದ ಯಶಟೆಲ್ ಟಿವಿ ಸಂಪಾದಕರಾದ
ಸಾಹಿತ್ಯ ಯಜಮಾನ್,ಅಮೋಘ್ ಮೈಸೂರು ವಾಹಿನಿ ವರದಿಗಾರ ಲೋಹಿತ್ ಹನುಮಂತಪ್ಪ, ಸಮಾಜ ಸೇವೆಗಾಗಿ ಲೋಕೇಶ್ ಶಿವಪುರ ,ಪ್ರಭಾವತಿ ಕೆ.ಆರ್ ,ಸಹಕಾರ ಕ್ಷೇತ್ರದಿಂದ ಜಿ . ನಂಜುಂಡೇಗೌಡರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬನ್ನೂರು ಕೆ ರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ , ಸಮಾಜ ಸೇವಕ ರಘುರಾಮ್ ವಾಜಪೇಯಿ, ರಾಮಕೃಷ್ಣ , ನಾಲಾಬೀದಿ ರವಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *