ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಬಿವಿ ನಾಗರತ್ನ ಆಯ್ಕೆ

 

 

ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಈ ಎಸ್ ವೆಂಕಟರಾಮಯ್ಯ ರವರ ಸು ಪುತ್ರಿಯಾದ ಬಿವಿ ನಾಗರತ್ನ ರವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡುಪುರ ತಾಲೂಕಿನ ಇಂಗಲ ಗುಪ್ಪೆ ಕುಗ್ರಾಮದ ಗ್ರಾಮಸ್ಥರ ಪರವಾಗಿ ಶ್ರೀ ಶಂಭುಲಿಂಗೇಶ್ವರ ಸೇವಾ ಟ್ರಸ್ಟ್ ನ ಸಂಸ್ಥಾಪಕ ನಿರ್ದೇಶಕರಾದ ಈ ಎಸ್ ನಾಗರಾಜು ಹಾಗೂ ಅಧ್ಯಕ್ಷರಾದ ಪಿ ಬೋಳಾರೆ ಗೌಡ ಇವರೊಟ್ಟಿಗೆ ಕೂಡಿ ನ್ಯಾಯಮೂರ್ತಿಗಳ ಚಿಕ್ಕಪ್ಪ  ಈ ಎಸ್ ಸೀತಾರಾಮಯ್ಯ ಹಾಗೂ ಸೋದರ ಸಂಬಂಧಿ ಈ ಎಸ್ ರಾಧಾಕೃಷ್ಣ ಮಂಜುಳಾ ಅಭಿನಂದಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಈ ಎಸ್ ಇಂದ್ರೇಶ್ ರವರಿಗೂ ಅಭಿನಂದಿಸಲಾಯಿತು .

ಒಂದೇ ಕುಟುಂಬದಲ್ಲಿ ಒಂದೇ ಗ್ರಾಮದಿಂದ ಮೂರು ನ್ಯಾಯಾಧೀಶರನ್ನು ಜನಿಸಿದ ಹುಟ್ಟೂರು ಇಂಗಲ ಗುಪ್ಪೆ ಹೆಮ್ಮೆಯ ಗ್ರಾಮವಾಗಿದೆ.  ತ್ರಿಮೂರ್ತಿ ನ್ಯಾಯಮೂರ್ತಿಗಳ ಆದರ್ಶಗಳು ಯುವಪೀಳಿಗೆಗೆ ಮಾರ್ಗದರ್ಶಿ ಗಳಾಗಿದ್ದಾರೆ ಇವರುಗಳ ಕುಟುಂಬದ ಸದಸ್ಯರುಗಳು ಸರಳವಾಗಿ ಸ್ವಾವಲಂಬಿಗಳಾಗಿ ಬದುಕುತ್ತಿರುವುದು ಮಾನವ ಬದುಕಿನ ವೈವಿಧ್ಯಮಯವಾದ ಇಂತಹ ಸನ್ನಿವೇಶದಲ್ಲೂ ಸರಳತೆಯನ್ನು ಮೈಗೂಡಿಸಿಕೊಂಡು ವಿದ್ಯೆಗೆ ತುಂಬಾ ಮಹತ್ವವಿದೆಯೆಂದು ತೋರಿಸಿ ಕೊಟ್ಟ ಅಪರೂಪದ ಕುಟುಂಬವಾಗಿದೆ ಇಂತಹ ಕುಟುಂಬದೊಡನೆ ನಾವಿರುವುದೇ ನಮ್ಮ ಸೌಭಾಗ್ಯ ಎಂದು ಇಎಸ್ ನಾಗರಾಜು ಅವರ ಸಂತಸವನ್ನು ಆಂಚಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *