ಪಿರಿಯಾಪಟ್ಟಣ:18 ಜುಲೈ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾ.ಪಂ ವತಿಯಿಂದ ಭುವನಹಳ್ಳಿ ಗ್ರಾಮದ ಮನೆಗಳಿಗೆ ಕಸ ವಿಂಗಡಿಸುವ ಬಕೆಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಮಮತಾ ಮಂಜುನಾಥ್ ಅವರು ಮಾತನಾಡಿ
ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಒತ್ತು ನೀಡುವಂತೆ ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷೆ ಎಸ್.ಆರ್ ದೀಪು ಗಿರೀಶ್ ಅವರು ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಒಣ ಹಾಗೂ ಹಸಿ ಕಸವನ್ನು ವಿಂಗಡಿಸುವುದರಿಂದ ಪ್ಲಾಸ್ಟಿಕ್ ನಿಂದಾಗುವ ಪರಿಸರ ನಾಶ ತಡೆಗಟ್ಟಬಹುದಾಗಿದೆ ಎಂದರು.
ಪಿಡಿಒ ದೇವರಾಜೇಗೌಡ ಅವರು ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಕುಟುಂಬಕ್ಕೆ ತಲಾ 2 ಬಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಅದನ್ನು ಪಡೆದು ಸಮರ್ಪಕವಾಗಿ ಬಳಸಿಕೊಂಡು ಪರಿಸರ ಸಂರಕ್ಷಣೆಗೆ ಒತ್ತು ನೀಡುವಂತೆ ತಿಳಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಬಿ.ಆರ್ ಶಿವಕುಮಾರ್, ರುಕ್ಕಣ್ಣ, ನಂದಿನಿ ಸುರೇಶ್, ಬಸವರಾಜು, ಪಿಎಸಿಸಿಎಸ್ ನಿರ್ದೇಶಕ ಬಿ.ವಿ ಗಿರೀಶ್, ಮುಖಂಡರಾದ ರವಿಕುಮಾರ್, ಮಂಜುನಾಥ್, ಲೋಕೇಶ್, ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ್, ಸಿಬ್ಬಂದಿಗಳಾದ ಗುರುಮೂರ್ತಿ, ರೇಖಾ, ಸತ್ಯನಾರಾಯಣ್, ಮರಿ ಕಾಳಯ್ಯ, ಯೋಗೇಶ್, ಗುರುಸ್ವಾಮಿ, ಪ್ರಸನ್ನ, ಜಯಣ್ಣ, ಭಾರತಿ, ಮೀನಾಕ್ಷಿ, ವೆಂಕಟೇಗೌಡ ಹಾಗೂ ಗ್ರಾಮಸ್ಥರು ಇದ್ದರು.