ಕೊನೆಯ ರಾಜ ಜಯಚಾಮರಾಜೇಂದ್ರ ಒಡೆಯರ್ ಹುಟ್ಟುಹಬ್ಬ ಆಚರಣೆ

ಮೈಸೂರು:18 ಜುಲೈ 2022

ನಂದಿನಿ ಮೈಸೂರು

ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರವರ ಹುಟ್ಟು ಹಬ್ಬವನ್ನ ಆಚರಿಸಲಾಯಿತು.

ವಲಯ ಕಚೇರಿ ಒಂದರಲ್ಲಿ ಮೈಸೂರು ಕನ್ನಡ ವೇದಿಕೆಯವರು ಜಯಚಾಮರಾಜೇಂದ್ರ ಒಡೆಯರ್ ರವರ ಭಾವಚಿತ್ರವಿರಿಸಿ ಪುಷ್ಪಾರ್ಚನೆಗೈಯುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಬನ್ನೂರು ಕೆ ರಾಜು ಮಾತನಾಡಿ ಕಟ್ಟಕಡೆ ಮಹಾರಾಜ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್.ಅದೃಷ್ಟ ನತದೃಷ್ಟ ರಾಜ.8 ವರ್ಷ ಆಳ್ವಿಕೆ ನಡೆಸಿದರು.ಅವರ ಅವಧಿಯಲ್ಲಿ ಜನರಿಗೆ ಹಲವಾರು ಕೊಡುಗೆ ನೀಡಿದ್ದಾರೆ.ರಾಷ್ಟ್ರ ಕವಿ ಕುವೆಂಪುರವರು ಒಂದು ಮಾತನಾಡಿದ್ರೂ ಎಲ್ಲರೂ ಸಿಂಹಸಾನ ಅಲಂಕರಿಸಿ ರಾಜರಾದರೇ ಜಯಚಾಮರಾಜೇಂದ್ರ ಒಡೆಯರ್ ರವರು ಸಿಂಹಾಸನದಿಂದ ಕೆಳಗಿಳಿದು ಆಳ್ವಿಕೆ ನಡೆಸಿದ್ರು.ಸಂಗೀತದಲ್ಲಿ 97 ಕೀರ್ತನೆ ಬರೆದಿದ್ರೂ.ಲಲಿತ ಕಲೆಯಲ್ಲಿ ಆಸಕ್ತಿಯೊಂದಿದವರು.ಪ್ರಸ್ತುತ ರಾಜಕಾರದ ಆಳ್ವಿಕೆ ನೋಡಿ ಜನರು ಬೇಸತ್ತಿದ್ದಾರೆ. ರಾಜರ ಆಳ್ವಿಕೆಯನ್ನ ಜನರು ಬಯಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ,ಪ್ಯಾಲೇಸ್ ಬಾಬು,ಗುರುಬಸಪ್ಪ,ಮದನ್,ಹರೀಶ್,ಲಕ್ಷ್ಮೀನಾರಾಯಣ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಸೇರಿದಂತೆ ಇನ್ನೀತರರು ಹಾಜರಿದ್ದರು.

Leave a Reply

Your email address will not be published. Required fields are marked *