ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಳೆಯಗಾರ ಕಾರ್ಗಳ್ಳಿ ಮಾರನಾಯಕರ ಇತಿಹಾಸದ ಪ್ರಚಾರಕ್ಕೆ ಪಡುವಾರಹಳ್ಳಿ ರಾಮಕೃಷ್ಣ ಆಗ್ರಹ

ನಂದಿನಿ ಮೈಸೂರು


ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಮೈಸೂರಿನ ಮೂಲನಿವಾಸಿಗಳಾದ ನಾಯಕರ ಪಾಳೆಯಗಾರ ಕಾರ್ಗಳ್ಲಿ ಮಾರನಾಯಕರ ಬಗ್ಗೆ ಪ್ರಚಾರಕ್ಕೆ ಮೈಸೂರು ನಾಯಕರ ಪಡೆ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ ರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೈಸೂರಿನ ಮೂಲನಿವಾಸಿಗಳು ನಾವು ನಾಯಕ ಜನಾಂಗದ ಜನರು ನಮ್ಮ ನಾಯಕ ಕಾರ್ಗಳ್ಳಿ ಮಾರನಾಯಕರು* ಜನಪರವಾಗಿ 14 ನೆಯ ಶತಮಾನದಲ್ಲಿ ಮೈಸೂರು ಪ್ರಾಂತ್ಯದ ಪಾಳೆಯಗಾರಿಕೆ ಮಾಡುತ್ತಿದ್ದು ಅಂದಿನ ಅರಸರಿಗೆ ಗಂಡು ಸಂತಾನವಿರಲಿಲ್ಲ *ಅವರ ಏಕಮಾತ್ರ ಪುತ್ರಿ ಯುವರಾಣಿ ದೇವಾಜಮ್ಮಣ್ಣಿ* ರವರನ್ನು ವಿವಾಹ ಮಾಡಿಕೊಡಲು ಮಾರನಾಯಕರು ಒತ್ತಾಯಿಸಿದ್ದರು.ತೊರಯನಾಡಿನ ಪಾಳೆಯಗಾರನಾದ ಅವರಿಗೆ ವಿವಾಹ ಮಾಡಿಕೊಡಲು ಇಷ್ಟವಿರಲಿಲ್ಲ.ಒತ್ತಾಯದಿಂದ ಮದುವೆಗೆ ಒಪ್ಪಿದ್ದರು ಇಂತಹ ಸಂದರ್ಭದಲ್ಲಿ ಉತ್ತರದಿಂದ ದಕ್ಷಿಣಾಭಿಮುಖವಾಗಿ ವಲಸೆ ಬಂದಿದ್ದಂತಹ ಯದುರಾಯ ಕೃಷ್ಣರಾಯರು ನದಿಪಾತ್ರದಲ್ಲಿ ಕುಳಿತಿರಲು ಆಗ ಅರಮನೆಯ ಸಖಿಯರು ಉತ್ತನಹಳ್ಳಿಯ ಮಾರ್ಗವಾಗಿದ್ದ ನದಿಯಲ್ಲಿ ತೊಳೆಯಲು ಹೋಗುವಾಗ ಒತ್ತಾಯದ ಮದುವೆಯ ಬಗ್ಗೆ ಮಾತನಾಡುತ್ತಿದ್ದರು ಅದನ್ನು ಕೇಳಿಸಿಕೊಂಡ ಯದುರಾಯ ಕೃಷ್ಣರಾಯರು ಅವರೊಂದಿಗೆ ಮಾತನಾಡಿ ಅವರು ಅರಮನೆಯಲ್ಲಿ ಶುಭಕಾರ್ಯಮಾಡುತ್ತಿದ್ದರೆ ನೀವ್ಯಾಕೆ ಅಪಶಕುನದ ಮಾತನಾಡುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಅರಮನೆಯ ಸಖಿಯರು ಮಹಾರಾಣಿಗೆ ಇಷ್ಟವಿಲ್ಲದೆ ಒತ್ತಡಕ್ಕೆ ಮಣಿದು ಪಾಳೆಯಗಾರ ಮಾರನಾಯಕರಿಗೆ ಮದುವೆ ಮಾಡಿಕೊಡುತ್ತಿದ್ದು ಮಹಾರಾಣಿಗೆ ಸಹಾಯವನ್ನು ಮಾಡಿ ಮದುವೆ ನಿಲ್ಲಿಸುವಂತೆ ಮಾಡಿದರೆ ನಿಮಗೆ ಈ ಪ್ರಾಂತ್ಯದಲ್ಲಿ ಒಳಿತಾಗುತ್ತದೆ ಅಂದರು ಅವರ ಮಾತಿನಂತೆ ಒಪ್ಪಿ ಮಹಾರಾಣಿಯನ್ನು ಸಂಪರ್ಕಿಸಿ ಒತ್ತಾಯದ ಮದುವೆಯ ಬಗ್ಗೆ ತಿಳಿಸಿ ಈ ಮದುವೆಯನ್ನು ನಿಲ್ಲಿಸಲು ಸಹಾಯವನ್ನು ಮಾಡಲು ಮನವಿ ಮಾಡಿಕೊಂಡರು ಈ ಅವಕಾಶವನ್ನು ಬಳಸಿಕೊಂಡ ಅವರು ಮದುವೆಗೆ ಮಾರನಾಯಕ ಮತ್ತು ಒಬ್ಬರು ಬಿಡದಂತೆ ಅವರ ಸಮಾಜದ ವಂಶಸ್ಥರ ಜೊತೆಗೆ ಬಂದರೇ ಧಾರೆ ಎರೆದು ಕೊಡುವುದಾಗಿ ಕರೆದರು ಅವರ ಆಹ್ವಾನ ಒಪ್ಪಿ ಮಾರನಾಯಕರು ತಮ್ಮ ಕುಲದವರೊಂದಿಗೆ ಅರಮನೆಗೆ ಬಂದಾಗ ಮದಲೇ ನಿರ್ಧರಿಸಿದಂತೆ ಮೋಸದಿಂದ ಧಾರೆಗೆ ಒಂದೊಂದು ಸಲಿಗೆ ಧಾರಾ ಸ್ಥಳಕ್ಕೆ ಇಬ್ಬರನ್ನು ಮಾತ್ರ ಒಳಗೆಬಿಟ್ಟು ಮೊದಲೇ ನಿರ್ಮಾಣ ಮಾಡಿದ್ದ ದೊಡ್ಡಕಂದಕದಲ್ಲಿ ಅವರನ್ನು ಕಡಿದು ಕೊಂದು ಹಾಕಿದ್ದರು ಇದನ್ನು ತಿಳಿದು ಕೆಲವರು ಜೀವ ಭಯದಿಂದ ಜಾತಿಯ ಮರೆಮಾಚಿ ತಲೆಮರೆಸಿಕೊಂಡು ಹೋಗಿ ಪ್ರಾಣಭಯದಿಂದ ಅರಮನೆಯ ಕಡೆಯರಿಗೆ ತಿಳಿಯದಂತೆ ವಿವಿಧ ಕಡೆ ತಲೆಮರೆಸಿಕೊಂಡು ಬದುಕು ಕಟ್ಟಿಕೊಂಡ ನಾವು ರಾಜಪರಿವಾರದ ಮಾರನಾಯಕರ ಕುಲಸ್ಥರಾಗಿದ್ದೇವೆ.
*ಕಾರ್ಗಳ್ಳಿ ಮಾರನಾಯಕರ ಅಂತ್ಯದಿಂದ ಯದುವಂಶದ ಆಡಳಿತ ಪ್ರಾರಂಭವಾಗಿದೆ* ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ
*ರಾಜ ಪರಿವಾರದ ನಾಯಕ ಜನಾಂಗದ ನಮಗೆ ಇಂದಿಗೂ ನೀವೇನು ಕಮ್ಮಿಯೇನು ಅರಮನೆಯಲ್ಲಿ ಹೆಣ್ಣು ಕೇಳಿದ ಜಾತಿಯವರು ಎಂದು ಕೆಣಕುತ್ತಾರೆ*
ನಾವು ಮೈಸೂರಿನ ಮೂಲ ನಿವಾಸಿಗಳಾಗಿದ್ದು ಅವರ ಕಾಲದ *ಚಾಮುಂಡಿ ಬೆಟ್ಟದ ಮೇಲಿರುವ ಮಹಾಬಲೇಶ್ವರದೇವಸ್ಥಾನದ ಮುಂಬಾಗದಲ್ಲಿ ಈಗಲೂ ಮಾರನಾಯಕರ ಕೈಮುಗಿದು ಭಕ್ತಿಯಿಂದ ನಿಂತಿರುವ ಮಾರನಾಯಕರ ಭಕ್ತವಿಗ್ರಹವಿದ್ದು* ಅದಕ್ಕೆ ನಮ್ಮ ಜನಾಂಗದ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಅವಿಭಜಿತ ಮೈಸೂರು ಜಿಲ್ಲೆಯ ನಾಯಕ ಜನಾಂಗದ ಒಕ್ಕೊರಲಿನ ಮನವಿಯಾದ ಚಾಮುಂಡಿಬೆಟ್ಟದಲ್ಲಿ ಪಾಳೆಯಗಾರ ಮಾರನಾಯಕರ ಪುತ್ಥಳಿ ನಿರ್ಮಾಣ ಮಾಡಿ ಅವರ ಐತಿಹಾಸಿಕ ಚರಿತ್ರೆಯನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಮೂಲಕ ನಾಯಕ ಜನಾಂಗದ ಭವ್ಯವಾದ ಇತಿಹಾಸಕ್ಕೆ ಬೆಳಕು ಚೆಲ್ಲಬೇಕಾಗಿದೆ ಮತ್ತು ಉಳಿಸಿ ಬೆಳಸಬೇಕಾಗಿರುವುದು ರಾಜ್ಯಸರ್ಕಾರದ ಹಾಗೂ ಇತಿಹಾಸಕಾರರ ಆಧ್ಯ ಕರ್ತವ್ಯವಾಗಿದೆ ಅಲ್ಲದೆ ಮೈಸೂರು ದಸರಾದಲ್ಲಿ* ಅವರ ಹೆಸರು ಹಾಗೂ ಕಾಲ್ಪನಿಕವಾದ ಚಿತ್ರವನ್ನು ಆಹ್ವಾನಪತ್ರಿಕೆಯಲ್ಲಿ ಹಾಗೂ ಅವರ ಬಗೆಗಿನ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ಮಾರನಾಯಕರ ಇತಿಹಾಸ ಬಿಂಬಿಸುವ ಮೂಲಕ ಮೂಲನಿವಾಸಿಗಳಾದ ರಾಜಪರಿವಾರದ ನಾಯಕರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿದರು.

Leave a Reply

Your email address will not be published. Required fields are marked *