115 Views
ಮೈಸೂರು:19 ಜನವರಿ 2022
ನಂದಿನಿ ಮೈಸೂರು
ವಾರ್ಡ್ ಸಂ:21 ರ ವ್ಯಾಪ್ತಿಯ ಕರ್ನಾಟಕ ಕಲಾಮಂದಿರದಲ್ಲಿ ಪುಟ್ ಪಾತ್ ನಿರ್ಮಾಣ, ವಿದ್ಯುತ್ ಕಾಮಗಾರಿ, ದುರಸ್ತಿ ಕಾಮಗಾರಿಗಳಿಗೆ ಶಾಸಕರ ಪ್ರದೇಶಾಭಿವೃದ್ದಿ ಅನುದಾನ ರೂ.10.00 ಲಕ್ಷ ವೆಚ್ಚದ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ವೇದಾವತಿ ರವರು ಹಾಗೂ ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಛೇರಮನ್ ಹೇಮಂತ್ ಕುಮಾರ್ ಗೌಡ ರವರೊಂದಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಚನ್ನಪ್ಪರವರು, ಭಾ.ಜ.ಪ ಉಪಧ್ಯಕ್ಷರಾದ ಶಿವಕುಮಾರ್, ಮುಖಂಡರುಗಳಾದ ಶಿವಶಂಕರ್, ಪ್ರಮೋದ್ ಕುಂಬಾರಕೊಪ್ಪಲು, ನರಸಿಂಹಮೂರ್ತಿ, ಸಿ.ವಿ.ನಾಗರಾಜು, ಹೆಬ್ಬಾಳು ನಾಗರಾಜ್, ಹೇಮರೆಡ್ಡಿ ಮಲ್ಲಮ್ಮ ಸಮಿತಿಯ ಡಾ:ವಾಮದೇವ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಲವ, ಗುತ್ತಿಗೆದಾರರಾದ ಮಾದಪ್ಪ,ಪ್ರವೀಣ್ ಮುಂತಾದವರು ಹಾಜರಿದ್ದರು.