ನೈಬರ್‍ಹುಡ್ ಫೌಂಡೇಷನ್‍ನಿಂದ ಹಸಿವು ನಿವಾರಣೆಗೆ ನಿಧಿ ಸಂಗ್ರಹಿಸಲು `ಫೀಡ್ ಬೈ ಆರ್ಟ್’ ಸ್ಪರ್ಧೆ ಆಯೋಜನೆ

 

ಮೈಸೂರು:1ಸೆಪ್ಟೆಂಬರ್ 2021

ಆರೋಗ್ಯ, ಶಿಕ್ಷಣ ಮತ್ತು ಇತರೆ ಸಾಮಾಜಿಕ ಉದ್ದೇಶಗಳಿಗೆ ಮೀಸಲಾದ ಸ್ವಯಂ ಸೇವಾ ಸಂಸ್ಥೆ ನೈಬರ್‍ಹುಡ್ ಫೌಂಡೇಷನ್ ಇಂದು ಶಾಲಾ ವಿದ್ಯಾರ್ಥಿಗಳಿಗೆ ಹಸಿವು ಪರಿಹಾರದ ಪ್ರಯತ್ನಗಳಿಗೆ ನಿಧಿ ಸಂಗ್ರಹಿಸಲು `ಫೀಡ್ ಬೈ ಆರ್ಟ್’ ರಾಷ್ಟ್ರವ್ಯಾಪಿ ಕಲಾ ಸ್ಪರ್ಧೆಯನ್ನು ಪ್ರಕಟಿಸಿದೆ.

ವರ್ಚುಯಲ್ ರೂಪದಲ್ಲಿ ನಡೆಯುವ ಈ ಸ್ಪರ್ಧೆಯು ಸೆಪ್ಟೆಂಬರ್ 25, 2021ರವರೆಗೆ ನೋಂದಣಿ ಮತ್ತು ಸಲ್ಲಿಕೆಗಳನ್ನು ಪಡೆಯುತ್ತದೆ. ನೋಂದಣಿ ಶುಲ್ಕ ರೂ.100 ಇದ್ದು ಈ ಮೊತ್ತವು ಫೌಂಡೇಷನ್‍ನ ಫೀಡ್@100 ಹಸಿವು ಪರಿಹಾರದ ಯೋಜನೆಗೆ ಬಳಕೆಯಾಗುತ್ತದೆ, ಈ ಇದರ ವಿಶಿಷ್ಟತೆ ಎಂದರೆ ಪ್ರತಿ 100ರೂ. ದೇಣಿಗೆಗೆ ಇದು ಮೂವರು ಜನರು ಮತ್ತು ಎರಡು ಪ್ರಾಣಿಗಳಿಗೆ ಒಂದು ಸಲಕ್ಕೆ ಆಹಾರ ಒದಗಿಸುತ್ತದೆ. ನೋಂದಣಿಯನ್ನು ಫೋನ್/ವಾಟ್ಸಾಪ್(7200741106) ಮೂಲಕ ಮಾಡಿಕೊಳ್ಳಬಹುದು.

ಈ ಕಲಾ ಸ್ಪರ್ಧೆಯನ್ನು ವಿಶ್ವ ಆಹಾರ ದಿನ 2021ರ ಅಂಗವಾಗಿ ಆಯೋಜಿಸಲಾಗಿದ್ದು ಅದು ಪ್ರತಿವರ್ಷ ಅಕ್ಟೋಬರ್ 16ರಲ್ಲಿ ಬರುತ್ತದೆ. ಇದು ನಾಲ್ಕು ವಿಭಾಗಗಳಲ್ಲಿ ಸಲ್ಲಿಕೆಗಳನ್ನು ಆಹ್ವಾನಿಸುತ್ತದೆ, ಪ್ರತಿಯೊಂದೂ ಅದರದೇ ಆದ ವಸ್ತುವನ್ನು ಹೊಂದಿರುತ್ತದೆ. ಕ್ಯಾಟಗರಿ I 1ರಿಂದ 3ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ವಿಷಯ `ಜಂಕ್‍ಫುಡ್ ಬೇಡ’ ಮತ್ತು ಕ್ಯಾಟಗರಿ II ರಲ್ಲಿ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯ `ಆಹಾರ ವ್ಯರ್ಥ ಮಾಡಬೇಡಿ’ ಎಂದಿದೆ. ಮೂರನೇ ವಿಭಾಗವು 6ರಿಂದ 8ನೇ ತರಗತಿಯವರೆಗೆ ಮತ್ತು ನಾಲ್ಕನೇ ವಿಭಾಗ 9ರಿಂದ 12ನೇ ತರಗತಿಯವರೆಗೆ ಇದ್ದು ಕ್ರಮವಾಗಿ `ಆರೋಗ್ಯಕರ ಆಹಾರ, ಆರೋಗ್ಯಕರ ಭೂಗ್ರಹ’ ಮತ್ತು `ಹಸಿವು ಮುಕ್ತ ರಾಷ್ಟ್ರ’ ಎಂಬ ವಿಷಯಗಳನ್ನು ಹೊಂದಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಯೂ ಇ-ಸರ್ಟಿಫಿಕೇಟ್ ಪಡೆಯುತ್ತಾರೆ ಅದರಲ್ಲಿ ಪ್ರತಿ ವಿಭಾಗದ ವಿಜೇತರಿಗೆ ನಗದು ಬಹುಮಾನಗಳು, ಪದಕಗಳು ಮತ್ತು ಟ್ರೋಫಿಗಳನ್ನು ಪಡೆಯುತ್ತಾರೆ. ಇದರೊಂದಿಗೆ ಎಲ್ಲ ನಾಲ್ಕು ವಿಭಾಗಗಳ ಮೊದಲ ಬಹುಮಾನ ವಿಜೇತರ ಕಲಾಕೃತಿಯನ್ನು ಒಂದು ಅಥವಾ ಹೆಚ್ಚು ಮೆಟ್ರೋ ನಗರಗಳ ಗೋಡೆಗಳಲ್ಲಿ ಅಲಂಕರಿಸಲಾಗುತ್ತದೆ.

ಈ ಸ್ಪರ್ಧೆಯ ಕುರಿತು ನೈಬರ್‍ಹುಡ್ ಫೌಂಡೇಷನ್‍ನ ಸಂಸ್ಥಾಪಕ ಶ್ರೀ ಆರ್. ಹೇಮಂತ್, “2019ರ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ ಭಾರತದ ಶೇ.14.5ರಷ್ಟು ಜನಸಂಖ್ಯೆ ಅರೆಹೊಟ್ಟೆಯ ಆಹಾರದಲ್ಲಿದ್ದಾರೆ. ಅಂದರೆ 18 ಕೋಟಿ ಭಾರತೀಯರು ಪ್ರತಿನಿತ್ಯ ಆಹಾರವಿಲ್ಲದೆ ನಿದ್ರೆ ಮಾಡುತ್ತಾರೆ. ಫೀಡ್ ಬೈ ಆರ್ಟ್ ಸ್ಪರ್ಧೆಯು ಶಾಲಾ ವಿದ್ಯಾರ್ಥಿಗಳಲ್ಲಿ ಸಹ ಭಾರತೀಯರ ಜೀವನಗಳಲ್ಲಿ ಹಸಿವು ಸೃಷ್ಟಿಸುತ್ತಿರುವ ಸಂಕಷ್ಟ ಕುರಿತು ಅರಿವನ್ನು ಮೂಡಿಸಲಿದೆ. ಇದು ಅವರಿಗೆ ಹಸಿವು ಮುಕ್ತ ಭಾರತ ಕಾಣಲು ಉತ್ತೇಜಿಸುತ್ತದೆ. ವಿದ್ಯಾರ್ಥಿಗಳು ಆಹಾರ ವ್ಯರ್ಥ ಮಾಡದೇ ಇರುವ ಮತ್ತು ಪೌಷ್ಠಿಕ ಆಹಾರದ ಮಹತ್ವ ಅರ್ಥ ಮಾಡಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *