ಶ್ರೀ ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆ

 

ಮೈಸೂರು:28 ಮಾರ್ಚ್ 2022

ನಂದಿನಿ ಮೈಸೂರು

ಮೈಸೂರಿನ ಸರಸ್ವತಿ ಪುರಂನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಆವರಣದಲ್ಲಿ
ಶ್ರೀ ಕೈವಾರ ತಾತಯ್ಯನವರ ಮೆರವಣಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ತಾತಯ್ಯ ಅವರು ಅವರೊಬ್ಭ ಸಮಾಜ ಸುಧಾರಕರಾಗಿ, ತಂದೆ- ತಾಯಿ ಇಲ್ಲದ ಅನಾಥ ಹುಡುಗನೊಬ್ಬ ಊರಿನವರ ಸಹಾಯದಿಂದ ಬೆಳೆದು ಸಂಸ್ಕೃತ-ಕನ್ನಡ. ತೆಲುಗು ಮೂರು ಭಾಷೆಗಳಲ್ಲಿ ಪರಿಣಿತರಾಗಿದ್ದರು. ನಮ್ಮ ಋಷಿ ಮುನಿಗಳ ಆಧ್ಯಾತ್ಮಿಕ ಜ್ಞಾನ ಸಂಪಾದಿಸಲು ಅನ್ಯದೇಶಗಳು ಹವಣಿಸುತ್ತಿವೆ. ನಮ್ಮ ಆದ್ಯಾತ್ಮದ ಬಗ್ಗೆ ನಮಗೆ ಅರಿವಿಲ್ಲ. 110 ವರ್ಷಗಳ ಸುದೀರ್ಘ ಬದುಕಿನಲ್ಲಿ 50ವರ್ಷ ಸ೦ಸಾರಿಕ ಇನೂಳಿದ ಜೀವನ ಮಕ್ಕಳನ್ನು ಪಡೆದು ನಂತರದ ದಿನಗಳಲ್ಲಿ ಸಂಸಾರ ತ್ಯಜಿಸಿ , ಸನ್ಯಾಸತ್ವ ಸ್ವೀಕರಿಸಿ ಪ್ರಾಪಂಚಿಕ ಜೀವನವನ್ನು ಉಳಿದರ್ಧ ಬಾಳನ್ನು ಯೋಗಿಯಾಗಿ ಬಾಳಿದವರಾಗಿದ್ದಾರೆಂದು ಸ್ಮರಿಸಿದರು.

ಒಂದು ಸಾಧಾರಣ ಸಂಸಾರದಲ್ಲಿದ್ದು, ಓರ್ವ ಬಳೆ ವ್ಯಾಪಾರಿಯಾಗಿ ಮುತೈದೆಯರು ದೇವರ ಸಮಾನವೆ೦ದು ಜೀವನ ಸಾಗಿಸುತ್ತಿದ್ದವರಾಗಿದ್ದರು. ಸಮಾಜವನ್ನು ಅಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು. ನಿಜಕ್ಕೂ ತಾತಯ್ಯನವರ ಜೀವನ ಒಂದು ಅದ್ಭುತ ಪವಾಡ, ತಾತಯ್ಯನವರು ಯೋಗಿ ಬಾಳಿನಲ್ಲಿ ಕವಿಯಾಗಿ, ಸಮಾಜಮುಖಿ ಚಿಂತಕರಾಗಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದ ಹರಿಕಾರನಾಗಿ ಕೈವಾರ ನಾರೇಯಣಪ್ಪ ಸಾರ್ಥಕತೆಯನ್ನು ಕಂಡಿದ್ದಾರೆ.ಒಟ್ಟಾರೆಯಾಗಿ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಗಳಲ್ಲದವರ ಸಮಹಿತ ಮಿಶ್ರಣವಿರುವ ತಾತಯ್ಯ ನವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಅನ್ವಯಗೊಳ್ಳುವ ಗುಣಹೊಂದಿದೆ.

ಹೀಗಾಗಿ ಅವರು ಮತ್ತೆ ಮತ್ತೆ ಪ್ರಸ್ತುತವಾಗುತ್ತಾರೆ ಎಂದು ತಿಳಿಸಿದರು. ಮೈಸೂರು ಜಿಲ್ಲಾ ಬಲಿಜ ಸಂಘದ ಗೌರವ ಅಧ್ಯಕ್ಷರಾದ ರೇಣು, ಅಧ್ಯಕ್ಷರಾದ ಟಿಕೆ ಉಮೇಶ್, ಕಾರ್ಯದರ್ಶಿ ಜಿ. ರಾಮು, ಉತ್ಸವ ಸಮಿತಿ ಅಧ್ಯಕ್ಷರಾದ ಭಾನುಪ್ರಕಾಶ್, ಕಾರ್ಯದರ್ಶಿಪಿ. ಕಾಮರಾಜ್, ಲಿಂಗರಾಜ, ಮಹೇಶ್ ನಾಯ್ಡು, ವೀಣಾ ಬಾಬು, ಎಚ್ ಕೆ, ಕಿತ್ತೂರು ಪ್ರಕಾಶ್. ಎನ್ ವಿಜಯಕುಮಾರ,ರಾಕೇಶ್ ನಾಯ್ಡು (ಸಂಸ್ಥಾಪಕರು) ಪ್ರಧಾನ ಕಾರ್ಯದರ್ಶಿ ಶ್ರೀ ಕೈವಾರ ತಾತಯ್ಯ ಬಲಿಜ ನಾಯ್ಡು ಒಕ್ಕೂಟ ಮೈಸೂರು ಜಿಲ್ಲೆ(R) ಮತ್ತು ಸ್ವಾತಂತ್ರ ಹೋರಾಟಗಾರರಾದ ಶ್ರೀ ಆರ್ ಎಸ್ ನಾಯ್ಡು ಆರ್ಟ್ ಅಂಡ್ ಕಲ್ಚರಲ್ ವೆಲ್ಫೇರ್ ಟ್ರಸ್ಟ್ ಮೈಸೂರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *