ನಂದಿನಿ ಮೈಸೂರು
ಇಂದಿನಿಂದ ಮೇ 28ರವರಗೆ ನಡೆಯಲಿರುವ ಗುಜರಾತ್ ಕರಕುಶಲ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ
ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಆಯೋಜಿಸಿದ್ದ ಉತ್ಸವಕ್ಕೆ ಖಜಾನೆ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ದೀಪಬೇಳಗಿಸುವುದರ ಮೂಲಕ ಉದ್ಘಾಟಿಸಿದರು.
ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜೆ ಎಸ್ ಎಸ್ ಅರ್ಹನ್ ಹಾತ್ ಈ ಉತ್ಸವ ಆಯೋಜಿಸುತ್ತಾ ಬಂದಿದೆ. ಈ ಬಾರಿಯ ಗುಜರಾಜ್ ಕರಕುಶಲ ಮೇಳ ವಿಭಿನ್ನವಾಗಿರುತ್ತದೆ.ಮೊದಲೆಲ್ಲ ರಾಜ್ಯದ ಕೆಲವು ಜಿಲ್ಲೆಯ ಕರಕುಶಲ ಕರ್ಮಿಗಳು ಮಾತ್ರ ಈ ಉತ್ಸವದಲ್ಲಿ ಭಾಗವಹಿಸುತಿದ್ದರು.ಆದರೆ ಇಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಕುಶಲಕರ್ಮಿಗಳು ಆಗಮಿಸುತಿದ್ದು, ಸುಮಾರು ೮೦ ಅಧಿಕ ಮಳಿಗೆಗಳಿವೆ
ಉತ್ಸವದಲ್ಲಿ ಕರಕುಶಲ ಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು ಕಸೂತಿ ಮಾಡಿದ ಬೆಡ್ ಶೀಟ್ಗಳು, ಟವಲ್ ಗಳು, ಕುಶನ್ ಕವರ್‌ಗಳು, ಕುರ್ತಿ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ಪ್ರವೇಶ ಉಚಿತವಾಗಿದ್ದು ಮೈಸೂರು ಹಾಗೂ ಸುತ್ತಾಮುತ್ತಲಿನ ಜನರು ಉತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೂರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಲಿ ಅಗರ್ವಾಲ್ ,ಜೆ ಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್,ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ಮಂಡಳಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ,ಇಂಡೆಕ್ಸ್ಟ್ ಸಿ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಂ.ಶುಕ್ಲ,ಕೈಗಾರಿಕಾ ಮತ್ತುವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಎಸ್.ನಂದಿನಿ,ಜೆ ಎಸ್ ಎಸ್ ಅರ್ಬನ್ ಹಾತ್ ಸಂಚಾಲಕ ಶಿವಾನಂಜಸ್ವಾಮಿ ಸೇರಿದಂತೆ ಇತರರು ಭಾಗಿಯಾಗಿದ್ದರು.